'ಪುಷ್ಪ 2' ಸಿನಿಮಾದ ಎರಡನೇ ಹಾಡು ರಿಲೀಸ್
'ಪುಷ್ಪ 2' ಸಿನಿಮಾದ ಎರಡನೇ ವಿಡಿಯೊ ಲಿರಿಕಲ್ ಹಾಡು ಬುಧವಾರ ಬಿಡುಗಡೆಯಾಗಿದೆ.;
'ಪುಷ್ಪ 2' ಸಿನಿಮಾದ ಎರಡನೇ ವಿಡಿಯೊ ಲಿರೀಕಲ್ ಹಾಡು ಬುಧವಾರ ( ಮೇ 29) ಬಿಡುಗಡೆಯಾಗಿದೆ.
ಈ ಹಾಡು ಬಿಡುಗಡೆಯಾಗಿ ಕೆಲವೇ ಗಂಟೆಗಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದೆ. ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ರಾಗ ಸಂಯೋಜಿಸಿರುವ ಈ ಹಾಡನ್ನು 'ಟಿ ಸಿರೀಸ್' ಮೂಲಕ ಬಿಡುಗಡೆ ಮಾಡಲಾಗಿದೆ. ಶ್ರೇಯಾ ಘೋಷಾಲ್ ಈ ಹಾಡಿಗೆ ಧ್ವನಿಯಾಗಿದ್ದಾರೆ.
`ಪುಷ್ಪ 2’ ನಾಯಕ ಅಲ್ಲು ಅರ್ಜುನ್ ಹಾಗೂ ನಾಯಕಿ ರಶ್ಮಿಕಾ ಮಂದಣ್ಣ ಅವರು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಅವರ ಈ ಹಾಡಿಗೆ ಅಲ್ಲು ಅರ್ಜುನ್ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಪುಷ್ಪ-1 ಸಿನಿಮಾದ ಮುಂದುವರೆದ ಭಾಗವಾಗಿ 'ಪುಷ್ಪ 2' ಸಿನಿಮಾ ತೆರೆಗೆ ಬರಲಿದೆ. ನಿರ್ದೇಶಕ ಸುಕುಮಾರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ಮೈತ್ರಿ ಮೂವೀ ಮೇಕರ್ಸ್ ದುಬಾರಿ ಬಜೆಟ್‌ನಲ್ಲಿ ಚಿತ್ರ ನಿರ್ಮಿಸುತ್ತಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜತೆಯಾಗಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹದ್ ಫಾಸಿಲ್, ಡಾಲಿ ಧನಂಜಯ್, ಅನಸೂಯಾ ಭಾರದ್ವಾಜ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.