ʼಪುಷ್ಪ 2ʼ ಸಿನಿಮಾದ ಎರಡನೇ ಹಾಡು ರಿಲೀಸ್‌ಗೆ ಮುಹೂರ್ತ ಫಿಕ್ಸ್‌

ʻಪುಷ್ಪ ಪುಷ್ಪʼ ಎಂದು ಶುರುವಾಗುವ ಹಾಡಿಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದು, ಇದರಲ್ಲಿನ ಹುಕ್ ಸ್ಟೆಪ್ ವೈರಲ್‌ ಆಗಿದೆ. ಇದೀಗ ಎರಡನೇ ಹಾಡಿನ ರಿಲೀಸ್‌ಗೆ ಮುಹೂರ್ತ ಫಿಕ್ಸ್‌ ಆಗಿದೆ.;

Update: 2024-05-28 11:23 GMT
ಪುಪ್ಪ ಸಿನಿಮಾದ ಎರಡನೇ ಹಾಡಿನ ರಿಲೀಸ್‌ಗೆ ಮುಹೂರ್ತ ಫಿಕ್ಸ್‌ ಆಗಿದೆ.
Click the Play button to listen to article

ಅಲ್ಲು ಅರ್ಜುನ್‌-ರಶ್ಮಿಕಾ ಮಂದಣ್ಣ ಅಭಿನಯದ ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಚಿತ್ರದ ಮೊದಲ ಹಾಡು ಈಗಾಗಲೇ ರಿಲೀಸ್‌ ಆಗಿ ಧೂಳೆಬ್ಬಿಸುತ್ತಿದೆ. ಅದರಲ್ಲಿಯೂ ಯೂಟ್ಯೂಬ್‌ನಲ್ಲಿ ದಾಖಲೆಯ ವೀಕ್ಷಣೆ ಕಂಡಿದೆ. ʻಪುಷ್ಪ ಪುಷ್ಪʼ ಎಂದು ಶುರುವಾಗುವ ಹಾಡಿಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದು, ಇದರಲ್ಲಿನ ಹುಕ್ ಸ್ಟೆಪ್ ವೈರಲ್‌ ಆಗಿದೆ. ಇದೀಗ ಎರಡನೇ ಹಾಡಿನ ರಿಲೀಸ್‌ಗೆ ಮುಹೂರ್ತ ಫಿಕ್ಸ್‌ ಆಗಿದೆ.

ʻಪುಷ್ಪ ಪುಷ್ಪʼ ಅಲ್ಲು ಅರ್ಜುನ್‌ ಪಾತ್ರವನ್ನು ಪರಿಚಯಿಸುವ ಹಾಡಾದರೆ ಇದೀಗ ರಿಲೀಸ್‌ ಆಗಲಿರುವ ಎರಡನೇ ಹಾಡಿನಲ್ಲಿ ನಾಯಕಿ ರಶ್ಮಿಕಾ ಮಂದಣ್ಣ ಕೂಡ ಇರಲಿದ್ದಾರೆ ಎನ್ನುವ ಸೂಚನೆ ಈಗಾಗಲೇ ಸಿಕ್ಕಿದೆ. ಈ ಬಗ್ಗೆ ರಶ್ಮಿಕಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

ʼಪುಷ್ಪ 2ʼ ಚಿತ್ರದ ಎರಡನೇ ಹಾಡು ನಾಳೆ (ಮೇ 29) ಬೆಳಿಗ್ಗೆ 11.07ಕ್ಕೆ ರಿಲೀಸ್‌ ಆಗಲಿದೆ ಎಂದು ರಶ್ಮಿಕಾ ತಿಳಿಸಿದ್ದಾರೆ. ರಶ್ಮಿಕಾ ಮತ್ತು ಅಲ್ಲು ಅರ್ಜುನ್‌ ಫೋಸ್‌ ಕೊಡುತ್ತಿರುವ ಪೋಸ್ಟರ್‌ ಈಗಾಗಲೇ ಗಮನ ಸೆಳೆದಿದೆ. ಗುಲಾಬಿ ಬಣ್ಣ, ಹಲವು ಡ್ಯಾನ್ಸರ್‌ಗಳ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ನಗುತ್ತಾ ಪೋಸ್‌ ನೀಡಿದ್ದಾರೆ. ದೇವಿಶ್ರೀ ಪ್ರಸಾದ್‌ ಸಂಗೀತ ನಿರ್ದೇಶನದಲ್ಲಿ ಈ ಹಾಡನ್ನು ಶ್ರೇಯಾ ಘೋಷಾಲ್‌ ಹಾಡಿದ್ದಾರೆ.

ʼಪುಷ್ಪ 2ʼ ಸಿನಿಮಾ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ. ಮೈತ್ರಿ ಮೂವೀ‌ ಮೇಕರ್ಸ್ ದುಬಾರಿ ಬಜೆಟ್‌ನಲ್ಲಿ ಚಿತ್ರ ನಿರ್ಮಿಸುತ್ತಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಜತೆಯಾಗಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹದ್ ಫಾಸಿಲ್, ಡಾಲಿ ಧನಂಜಯ್, ಅನಸೂಯಾ ಭಾರದ್ವಾಜ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

Tags:    

Similar News