'ಕೋಟಿ' ಟ್ರೇಲರ್​​ಗೆ ಸಿನಿಪ್ರಿಯರು ಫಿದಾ

ಡಾಲಿ ಧನಂಜಯ್​​​​ ಮುಖ್ಯ ಭೂಮಿಕೆಯ ಮುಂದಿನ ಬಹು ನಿರೀಕ್ಷಿತ ಚಿತ್ರ ''ಕೋಟಿ'' ಸಿನಿಮಾದ ಆಫೀಶಿಯಲ್ ಟ್ರೇಲರ್ ಬುಧವಾರ ( ಜೂನ್‌ 5) ಸರಿಗಮ ಕನ್ನಡ ಯೂಟ್ಯೂಬ್ ಚಾನಲ್​​​​​ನಲ್ಲಿ ಅನಾವರಣಗೊಂಡಿದೆ.;

Update: 2024-06-06 08:40 GMT
ಬಹುನಿರೀಕ್ಷಿತ ಕೋಟಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ.
Click the Play button to listen to article

ಡಾಲಿ ಧನಂಜಯ್​​​​ ಮುಖ್ಯ ಭೂಮಿಕೆಯ ಮುಂದಿನ ಬಹು ನಿರೀಕ್ಷಿತ ಚಿತ್ರ ''ಕೋಟಿ'' ಸಿನಿಮಾದ ಆಫೀಶಿಯಲ್ ಟ್ರೇಲರ್ ಬುಧವಾರ ( ಜೂನ್‌ 5) ಸರಿಗಮ ಕನ್ನಡ ಯೂಟ್ಯೂಬ್ ಚಾನಲ್​​​​​ನಲ್ಲಿ ಅನಾವರಣಗೊಂಡಿದೆ.

ಸಿನಿಮಾದಲ್ಲಿ ನಟ ಧನಂಜಯ್ 'ಕೋಟಿ' ಎಂಬ ಒಬ್ಬ ಸಾಮಾನ್ಯ ಡ್ರೈವರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾರಿಗೂ ಮೋಸ ಮಾಡದೇ, ನೋವು ನೀಡದೇ ಒಂದು ಕೋಟಿ ರೂಪಾಯಿ ದುಡಿದು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ ಈತನದ್ದು. ಕೋಟಿ ಪಯಣದ ಒಂದು ಸಣ್ಣ ನೋಟವನ್ನು ಈ ಟ್ರೇಲರ್​​ ಒಳಗೊಂಡಿದೆ.

Full View

ಧನಂಜಯ್​​ ಸಾಮಾನ್ಯ ವ್ಯಕ್ತಿಯ ಗೆಟಪ್, ರಮೇಶ್ ಇಂದಿರಾ ಅವರ ನಟೋರಿಯಸ್ ವಿಲನ್ ಪಾತ್ರ, ತಾರಾ ಅವರ ತಾಯಿಯ ಪಾತ್ರ, ಕ್ವಾಲಿಟಿ ವಿಶುವಲ್ಸ್, ಮತ್ತೆ ಮತ್ತೆ ಕೇಳಬೇಕೆನಿಸುವ ಹಿನ್ನೆಲೆ ಸಂಗೀತ, ಹುಲಿವೇಷ ಈ ಟ್ರೇಲರ್​ನಲ್ಲಿ ಹೈಲೆಟ್ಸ್‌ ಆಗಿದೆ. 


ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಧನಂಜಯ್‌, "ಇದೊಂದು ಮಿಡಲ್ ಕ್ಲಾಸ್ ಸಾಮಾನ್ಯ ವ್ಯಕ್ತಿಯ ಕಥೆ. ಎಲ್ಲರಿಗೂ ಕನೆಕ್ಟ್ ಆಗುವ ಫ್ಯಾಮಿಲಿ ಎಂಟರ್​​ಟೈನರ್​​​" ಎಂದು ಹೇಳಿದರು.

ನಿರ್ದೇಶಕ ಪರಮ್ ಮಾತನಾಡಿ, "ಇದೊಂದು ಕಂಟೆಂಟ್ ಇರುವ ಕಮರ್ಷಿಯಲ್ ಸಿನಿಮಾ. ಒಂದೊಳ್ಳೆ ಕಥೆ, ಒಳ್ಳೆ ಮನರಂಜನೆ ಗ್ಯಾರಂಟಿ'' ಎಂದು ಭರವಸೆ ನೀಡಿದರು.

ಡಾಲಿ ಧನಂಜಯ್ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ, ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮೊದಲಾದವರು ಚಿತ್ರದ ತಾರಾ ಬಳಗದಲ್ಲಿದ್ದಾರೆ.

ಕೋಟಿ ಚಿತ್ರವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

Tags:    

Similar News