ವಿಜಯ್‌-ರಶ್ಮಿಕಾ ಪ್ರೀತಿ ಅಧಿಕೃತ : 'ದ ಗರ್ಲ್‌ಫ್ರೆಂಡ್' ಸಮಾರಂಭದಲ್ಲಿ ರಶ್ಮಿಕಾಗೆ ಮುತ್ತಿಟ್ಟ ವಿಜಯ್‌ ದೇವರಕೊಂಡ

ಸಮಾರಂಭಕ್ಕೂ ಮುನ್ನವೇ ಅಂದರೆ ಅಕ್ಟೋಬರ್ 3, ರಂದು ವಿಜಯ್ ದೇವರಕೊಂಡ ಅವರ ಹೈದರಾಬಾದ್ ನಿವಾಸದಲ್ಲಿ ಅತ್ಯಂತ ಖಾಸಗಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದ್ದು, ಈ ಸುದ್ದಿಗಳಿಗೆ ವಿಜಯ್ ದೇವರಕೊಂಡ ಅವರ ತಂಡವೇ ದೃಢೀಕರಣ ನೀಡಿದೆ.

Update: 2025-11-13 04:41 GMT

ರಶ್ಮಿಕಾ ಕೈಗೆ ಮುತ್ತಿಟ್ಟ ದೇವರಕೊಂಡ

Click the Play button to listen to article

ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಮತ್ತು 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಅವರ ವರ್ಷಗಳ ಪ್ರೇಮ ಪಯಣಕ್ಕೆ ಈಗ ಅಧಿಕೃತ ಮುದ್ರೆ ಬಿದ್ದಿದೆ.

ಕಳೆದ ಹಲವು ವರ್ಷಗಳಿಂದ ಗಾಸಿಪ್‌ಗೆ ಕಾರಣವಾಗಿದ್ದ ಈ ಜೋಡಿ, ಹೈದರಾಬಾದ್‌ನಲ್ಲಿ ನಡೆದ ರಶ್ಮಿಕಾ ಅವರ ಇತ್ತೀಚಿನ ಚಿತ್ರ 'ದ ಗರ್ಲ್‌ಫ್ರೆಂಡ್' ಯಶಸ್ಸಿನ ಸಮಾರಂಭದಲ್ಲಿ ತಮ್ಮ ಪ್ರೀತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

ಸಮಾರಂಭಕ್ಕೂ ಮುನ್ನವೇ ಅಂದರೆ ಅಕ್ಟೋಬರ್ 3 ರಂದು ವಿಜಯ್ ದೇವರಕೊಂಡ ಅವರ ಹೈದರಾಬಾದ್ ನಿವಾಸದಲ್ಲಿ ಅತ್ಯಂತ ಖಾಸಗಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದ್ದು, ಈ ಸುದ್ದಿಯನ್ನು ವಿಜಯ್ ದೇವರಕೊಂಡ ಅವರ ತಂಡ ದೃಢಪಡಿಸಿದೆ.

ರಶ್ಮಿಕಾ ಕೈಗೆ ಪ್ರೀತಿಯ ಮುತ್ತು

'ದ ಗರ್ಲ್‌ಫ್ರೆಂಡ್' ಚಿತ್ರದ ಯಶಸ್ಸಿನ ಆಚರಣೆಯ ವೇಳೆ ರಶ್ಮಿಕಾ ಅವರ ಬಳಿ ಬಂದ ವಿಜಯ್, ವೇದಿಕೆಯ ಮೇಲೆ ಎಲ್ಲರೆದುರು ತಮ್ಮ ಪ್ರೀತಿಯ ಗೆಳತಿಯ ಕೈ ಹಿಡಿದು ಮುತ್ತಿಟ್ಟರು.

ಈ ಅನಿರೀಕ್ಷಿತ ಮತ್ತು ಪ್ರಾಮಾಣಿಕವಾದ ಪ್ರೀತಿಯ ಪ್ರದರ್ಶನಕ್ಕೆ ನಟಿ ರಶ್ಮಿಕಾ ಮುಜುಗರದಿಂದ ನಕ್ಕರು. ಅಲ್ಲಿ ನೆರೆದಿದ್ದ ಅಭಿಮಾನಿಗಳಿಂದ ಜೋರಾದ ಹರ್ಷೋದ್ಗಾರ ಕೇಳಿಬಂದಿತು ಮತ್ತು ಈ ವಿಡಿಯೊ ತುಣುಕು ತಕ್ಷಣವೇ ಆನ್‌ಲೈನ್‌ನಲ್ಲಿ ವೈರಲ್ ಆಗಿ ಇಡೀ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.

ಫೆಬ್ರವರಿ 2026ರಲ್ಲಿ ವಿವಾಹ?

ಖಾಸಗಿ ನಿಶ್ಚಿತಾರ್ಥದ ನಂತರ, ಈ ಪ್ರೇಮಿಗಳು ಮುಂದಿನ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಜೋರಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಈ ತಾರೆ ಜೋಡಿ ಫೆಬ್ರವರಿ 26, 2026 ರಂದು ರಾಜಸ್ಥಾನದ ಉದಯಪುರದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್  ಮೂಲಕ ವಿವಾಹವಾಗಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

Tags:    

Similar News