ವಿಜಯ ದೇವರಕೊಂಡ ಸಹೋದರನಿಗೆ "ನೀನು ನನ್ನ ಫ್ಯಾಮಿಲಿ ಕಣೋʼʼ ಎಂದ ರಶ್ಮಿಕಾ ಮಂದಣ್ಣ
"ನೀನು ನನ್ನ ಫ್ಯಾಮಿಲಿ ಕಣೋ ಆನಂದ್.. ಯಾಕೋ ಹಿಂಗೆ ತಗ್ಲಾಕ್ತೀಯಾ? ಸರಿ ಬಿಡಪ್ಪಾ ನನ್ನ ಫೇವರಿಟ್ ಹೀರೊ ರೌಡಿನೇ ಎಂದು ರಶ್ಮಿಕಾ ಮಂದಣ್ಣ ತಿಳಿಸಿದ್ದಾರೆ.;
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಪರಸ್ಪರ ಡೇಟಿಂಗ್ ಮಾಡುತ್ತಿರುವ ವದಂತಿ ಇದೆ. ಇದೀಗ ಇದೇ ವಿಚಾರವಾಗಿ ವಿಜಯ್ ದೇವರಕೊಂಡ ಅವರ ಸಹೋದರ, ನಟ ಆನಂದ್ ದೇವರಕೊಂಡ ಜತೆ ರಶ್ಮಿಕಾ ಮಾತನಾಡಿದ್ದು, ವಿಡಿಯೊ ವೈರಲ್ ಆಗಿದೆ.
ಆನಂದ್ ದೇವರಕೊಂಡ ಹೊಸ ಚಿತ್ರ 'ಗಂ ಗಂ ಗಣೇಶ' ಪ್ರೀ ರಿಲೀಸ್ ಕಾರ್ಯಕ್ರಮ ಸೋಮವಾರ(ಮೇ 27) ರಾತ್ರಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ರಶ್ಮಿಕಾ ಮಂದಣ್ಣ ಅತಿಥಿಯಾಗಿ ಹೋಗಿದ್ದರು. ಇನ್ನು ಈ ವೇಳೆ ಆನಂದ್ ಕೆಲ ಇಂಟ್ರೆಸ್ಟಿಂಗ್ ಪ್ರಶ್ನೆಗಳನ್ನು ರಶ್ಮಿಕಾ ಮುಂದೆ ಇಟ್ಟರು. ಈ ವೇಳೆ ನಿಮ್ಮ ಫೇವರಿಟ್ ನಟ ಯಾರು ಎಂದು ಕೇಳಿದಾಗ ರಶ್ಮಿಕಾ ಉತ್ತರಿಸಲು ಹಿಂದು ಮುಂದು ನೋಡುತ್ತಿದ್ದರು.
ʼʼನಿಮ್ಮ ನೆಚ್ಚಿನ ಕೋಸ್ಟಾರ್ ಯಾರು?ʼʼ ಎಂದು ಆನಂದ್ ಕೇಳುತ್ತಿದ್ದಂತೆ ನೆರೆದಿದ್ದ ಜನರೆಲ್ಲ ರೌಡಿ.. ರೌಡಿ.. ರೌಡಿ(ವಿಜಯ್ ದೇರವಕೊಂಡ) ಕೂಗಲು ಆರಂಭಿಸಿದರು. ಆಗ ರಶ್ಮಿಕಾ "ನೀನು ನನ್ನ ಫ್ಯಾಮಿಲಿ ಕಣೋ ಆನಂದ್.. ಯಾಕೋ ಹಿಂಗೆ ತಗ್ಲಾಕ್ತೀಯಾ? ಸರಿ ಬಿಡಪ್ಪಾ ನನ್ನ ಫೇವರಿಟ್ ಹೀರೊ ರೌಡಿನೇ ಎಂದಿದ್ದಾರೆ. ಚಿಕ್ಕ ರೌಡಿ(ಆನಂದ್ ದೇವರಕೊಂಡ) ಅಂತ ಕೂಡ ಹೇಳಬಹುದು ಎಂದು ಹೇಳಿದ್ದಾರೆ. ಹೌದು ಚಿಕ್ಕ ರೌಡಿ ಕೂಡ ಎಂದು ನಕ್ಕಿದ್ದಾರೆ.
ಸದ್ಯ ಈ ಕ್ಯೂಟ್ ವಿಡಿಯೋ ವೃರಲ್ ಆಗಿದೆ. ಸದ್ಯ ರಶ್ಮಿಕಾ ಮಂದಣ್ಣ ಅವರ 'ಪುಷ್ಪ'-2 ನಿರೀಕ್ಷೆ ಮೂಡಿಸಿದೆ. 'ಅನಿಮಲ್' ಬಳಿಕ ಬಾಲಿವುಡ್‌ನಲ್ಲಿ ಕೂಡ ರಶ್ಮಿಕಾ ಕ್ರೇಜ್ ಹೆಚ್ಚಾಗಿದೆ. ಸಲ್ಮಾನ್ ಖಾನ್ ಜೊತೆ 'ಸಿಖಂದರ್' ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದೆ. 'ದಿ ಗರ್ಲ್‌ಫ್ರೆಂಡ್' ಹಾಗೂ 'ರೈನ್‌ಬೋ' ಎನ್ನುವ ಮಹಿಳಾ ಪ್ರಧಾನ ಸಿನಿಮಾಗಳು ಆಕೆಯ ಕೈಯಲ್ಲಿವೆ. ತಮಿಳಿನಲ್ಲಿ 'ಕುಬೇರ' ಚಿತ್ರಕ್ಕೆ ಧನುಷ್ ಜೊತೆಯಾಗಿದ್ದಾರೆ. ಪ್ರಶಾಂತ್ ನೀಲ್ ಹಾಗೂ ಜ್ಯೂ. ಎನ್‌ಟಿಆರ್ ಕಾಂಬಿನೇಷನ್ ಚಿತ್ರಕ್ಕೂ ರಶ್ಮಿಕಾ ನಾಯಕಿ ಎನ್ನುವ ಗುಸುಗುಸು ಕೇಳಿಬರ್ತಿದೆ.