ರಶ್ಮಿಕಾ ಮಂದಣ್ಣಗೆ ಬಿಡದ ಡೀಪ್ ಫೇಕ್ ಕಾಟ
ಡೀಪ್ ಫೇಕ್ ತಂತ್ರಜ್ಞಾನವನ್ನ ಹೇಗೆಲ್ಲ ದುರ್ಬಳಕೆ ಮಾಡಿಕೊಳ್ಳಬಹುದು ಅನ್ನುವುದಕ್ಕೆ ಸಾಕ್ಷಿಯಂತೆ ಇರುವ ಈ ವಿಡಿಯೋದಲ್ಲಿ, ರಶ್ಮಿಕಾ ಅವರ ಮುಖವನ್ನ ಅಂಟಿಸಲಾಗಿದೆ.;
ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂರುವ ರಶ್ಮಿಕಾ ಮಂದಣ್ಣ ಅವರಿಗೆ ಮತ್ತೆ ಡೀಪ್ ಫೇಕ್ ಕಾಟ ಎದುರಾಗಿದೆ. ಕಳೆದ ಕಳೆದ ವರ್ಷದ ಅಂತ್ಯದಲ್ಲಿ ರಶ್ಮಿಕಾ ಮಂದಣ್ಣ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ರಶ್ಮಿಕಾ ಮಂದಣ್ಣ ಅವರ ಮುಖವನ್ನ ಮಾರ್ಫಿಂಗ್ ಮಾಡಿದ ನಕಲಿ ವಿಡಿಯೋ ಅದು. ಈಗ ಅಂಥಹದ್ದೇ ಒಂದು ವಿಡಿಯೋ ಮತ್ತೆ ವೈರಲ್ ಆಗಿದೆ.
ಡೀಪ್ ಫೇಕ್ ತಂತ್ರಜ್ಞಾನವನ್ನ ಬಳಸಿ ರಶ್ಮಿಕಾ ಅವರ ಮುಖವನ್ನ ಅಂಟಿಸಲಾಗಿದೆ. ಮೇಲ್ನೋಟಕ್ಕೆ ಇದು ರಶ್ಮಿಕಾ ಮಂದಣ್ಣ ಅವರದ್ದೇ ವಿಡಿಯೋ ಎಂಬಂತೆ ಕಾಣುತ್ತದೆ.
ಕೊಲಂಬಿಯಾದ ಸ್ಯಾಂಟ್ಯಾಂಡರ್ ಮೂಲದ ಮಾಡೆಲ್ ಮತ್ತು ಕಂಟೆಂಟ್ ಕ್ರಿಯೇಟರ್ ಡೇನಿಯಲಾ ವಿಲ್ಲಾರ್ರಿಯಲ್ ಅವರಿಗೆ ಸೇರಿದ ಇನ್‌ಸ್ಟಾಗ್ರಾಮ್ ಖಾತೆಯಿಂದ ವೈರಲ್ ವೀಡಿಯೊವನ್ನು ಪತ್ತೆಹಚ್ಚಲಾಗಿದೆ.
ಏಪ್ರಿಲ್ 19, 2024 ರಂದು ಡೇನಿಯಲಾ ತಮ್ಮ ಬಿಕಿನಿ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ ಆ ನಂತರ ಆ ವಿಡಿಯೋ ಸೈಬರ್ ಕಿರಾತಕರ ಕಣ್ಣಿಗೆ ಬಿದ್ದಿದೆ. ಡೇನಿಯಲಾ ಅವರ ಮುಖಚಹರೆಯನ್ನ ರಶ್ಮಿಕಾ ಮಂದಣ್ಣ ಅವರ ಮುಖದ ಜೊತೆ ಬದಲಿಸಲಾಗಿದೆ. ಫೇಸ್‌ಬುಕ್ , ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಕೂಡ ಈ ನಕಲಿ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ
ಕೆಲ ದಿನಗಳ ಹಿಂದೆ ರಶ್ಮಿಕಾ ಹೆಸರಿನಲ್ಲಿ ಹರಿದಾಡಿದ್ದ ಡೀಪ್ ಫೇಕ್ ವಿಡಿಯೋ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಜರಾ ಪಟೇಲ್ ಅವರ ಮುಖವನ್ನು ರಶ್ಮಿಕಾ ಮಂದಣ್ಣ ಮುಖವಾಗಿ ಮಾರ್ಫ್ ಮಾಡಿ ಫೇಕ್ ವಿಡಿಯೋವನ್ನು ಹರಿಬಿಟ್ಟಿದ್ದರು. ಈ ಡೀಪ್ ಫೇಕ್ ವಿಡಿಯೋ ವಿರುದ್ಧ ಸೈಬರ್ ಕ್ರೈಮ್ಗೆ ದೂರು ಸಹ ದಾಖಲಾಗಿತ್ತು. ಈ ಕೇಸ್ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.