ಕರಿಮಣಿ ಮಾಲೀಕ ನಾನಲ್ಲ ಎಂದ ರಮೇಶ್‌; ಶಿವರಾಜಕುಮಾರ್ ಇಂಪ್ರೆಸ್

ಸಿನಿಮಾ ಶೂಟಿಂಗ್ ಆದ್ಮೇಲೆ ಕರಿಮಣಿ ಮಾಲೀಕ ನಾನಲ್ಲ..ನಾನಲ್ಲ ಅಂತ ಎಲ್ಲರೂ ಹೊರಟು ಹೋಗ್ತಾರೆ.

Update: 2024-03-03 04:10 GMT
ಕರಿಮಣಿ ಮಾಲೀಕನ ಬಗ್ಗೆ ಮಾತನಾಡಿದ ರಮೇಶ್‌
Click the Play button to listen to article

ಸ್ಯಾಂಡಲ್‌ವುಡ್‌ನಲ್ಲಿ ಉಪೇಂದ್ರ ಸಿನಿಮಾದ ಕರಿಮಣಿ ಮಾಲೀಕ ಹಾಡು ತುಂಬಾನೆ ವೈರಲ್ ಆಗಿದೆ. ಇದೀಗ ನಟ ರಮೇಶ್‌ ಅರವಿಂದ್‌ ನಿರ್ಮಾಪಕರ ಸ್ಥಿತಿ, ಕಷ್ಟ, ನಷ್ಟಗಳನ್ನು ಈ ಹಾಡಿಗೆ ಹೋಲಿಸಿ ಉತ್ತಮ ವಿಚಾರನ್ನು ಹಂಚಿಕೊಂಡಿದ್ದಾರೆ. ಈ ಮಾತುಗಳನ್ನು ಕೇಳಿ ಸ್ವತಃ ಶಿವರಾಜಕುಮಾರ್ ಇಂಪ್ರೆಸ್ ಆಗಿದ್ದಾರೆ.

ಡಾ. ರಾಜಕುಮಾರ್‌ ಜನ್ಮದಿನದಂದು ಕನ್ನಡ ಚಲನ ಚಿತ್ರ ನಿರ್ಮಾಪಕರ ಸಂಘದ ಕಟ್ಟಡ ಉದ್ಘಾಟನೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಈ ವಿಷಯ ತಿಳಿಸಲು ಒಂದು ಕಾರ್ಯಕ್ರಮ ಮಾಡಲಾಗಿತ್ತು. ಈ ಸಮಯದಲ್ಲಿಯೇ ರಮೇಶ್ ಅರವಿಂದ್ ನಿರ್ಮಾಪಕರ ಕಷ್ಟಗಳನ್ನು ಹೇಳೋಕೆ ಕರಿಮಣಿ ಮಾಲೀಕ ಹಾಡಿನ ಸಾಲುಗಳನ್ನು ಬಳಸಿ ಆ ವೇದಿಕೆಯಲ್ಲಿ ಮಾತನಾಡಿದ್ದಾರೆ.

ಡೈರೆಕ್ಟರ್ ಒಂದು ಅದ್ಭುತ ಕಲ್ಪನೆ ಕಂಡಿರ್ತಾರೆ. ಡ್ರೋನ್ ದೃಶ್ಯ ಪ್ಲಾನ್ ಮಾಡಿರ್ತಾರೆ. ಮೇಲಿಂದ ಕೆಳಗೆ ಒಂದು ಅದ್ಭುತ ದೃಶ್ಯ ತೆಗೆಯಲಾಗುತ್ತದೆ. ಎಲ್ಲವೂ ಸೂಪರ್ ಆಗಿಯೇ ನಡೆಯುತ್ತದೆ. ಹೀರೋ ಕೂಡ ಅದ್ಭುತವಾಗಿಯೇ ಮೂಡಿ ಬಂದಿರುತ್ತಾರೆ.

ಆದರೆ ಸಂಜೆ ಒಬ್ಬ ಹುಡುಗ ಬರ್ತಾನೆ. ಒಂದು ಪಟ್ಟಿ ಹಿಡಿದುಕೊಂಡೇ ಬರ್ತಾನೆ. ಡ್ರೋನ್‌ಗೆ ಇಷ್ಟ ದುಡ್ಡು, ಡ್ರೋನ್ ಕ್ಯಾಮರಾಗೆ ಇಷ್ಟು ದುಡ್ಡು, ಲೋಕೇಷನ್ ಚಾರ್ಜ್ ಇಷ್ಟು…ಹೀಗೆ ಖರ್ಚಿನ ಒಟ್ಟು ಲೆಕ್ಕದ ಪಟ್ಟಿ ಅದು ಆಗಿರುತ್ತದೆ. ಆಗ ಅದನ್ನ ಕಟ್ಟೋರು ಯಾರು? ಸಿನಿಮಾ ಶೂಟಿಂಗ್ ಆದ್ಮೇಲೆ ಕರಿಮಣಿ ಮಾಲೀಕ ನಾನಲ್ಲ..ನಾನಲ್ಲ ಅಂತ ಎಲ್ಲರೂ ಹೊರಟು ಹೋಗ್ತಾರೆ. ಆದರೆ ಆ ಪಟ್ಟಿಯನ್ನ ಅರ್ಥ ಮಾಡಿಕೊಂಡು ದುಡ್ಡು ಕೊಡೊ ಆ ಕರಿಮಣಿ ಮಾಲೀಕ ಬೇರೆ ಯಾರೋ ಅಲ್ಲ. ಅದು ನಿರ್ಮಾಪಕರೇ ಆಗಿದ್ದಾರೆ. ಅವರ ಕಷ್ಟ ಹೇಳೋಕೆ ಆಗೋದೇ ಇಲ್ಲ. ಅದನ್ನ ಅರ್ಥ ಮಾಡಿಕೊಳ್ಳಬೇಕು ಅನ್ನೋದನ್ನು ಈ ರೀತಿ ರಮೇಶ್ ಅರವಿಂದ್ ಹೇಳಿದ್ದಾರೆ.

Tags:    

Similar News