ಆರ್ಆರ್ಆರ್, 'ಕೆಜಿಎಫ್-2 ಹಿಂದಿಕ್ಕಿ ಅತಿ ಹೆಚ್ಚು ಗಳಿಕೆಯಲ್ಲಿ 3ನೇ ಸ್ಥಾನ ಪಡೆದ 'ಪುಷ್ಪ 2-ದಿ ರೂಲ್'
ಚಿತ್ರದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಪ್ರಕಾರ, 'ಪುಷ್ಪ 2' ವಿಶ್ವಾದ್ಯಂತ ₹ 1,409 ಕೋಟಿ ಗಳಿಸಿದೆ ಮತ್ತು ಶೀಘ್ರದಲ್ಲೇ ₹ 1,500 ಕೋಟಿ ಕ್ಲಬ್ಗೆ ಪ್ರವೇಶಿಸುವ ನಿರೀಕ್ಷೆಯಿದೆ.;
ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ , 'ಪುಷ್ಪ 2' ವಿಶ್ವಾದ್ಯಂತ ₹ 1,409 ಕೋಟಿ ಗಳಿಸಿದೆ. ಶೀಘ್ರದಲ್ಲೇ ₹ 1,500 ಕೋಟಿ ಕ್ಲಬ್ಗೆ ಪ್ರವೇಶಿಸುವ ನಿರೀಕ್ಷೆಯಿದೆ. ಅಲ್ಲು ಅರ್ಜುನ್ ಅವರ ಆಕ್ಷನ್ ಡ್ರಾಮಾ 'ಪುಷ್ಪ 2-ದಿ ರೂಲ್' ಎಸ್ಎಸ್ ರಾಜಮೌಳಿ ಅವರ 'ಆರ್ಆರ್ಆರ್ ' ಮತ್ತು ಕನ್ನಡದ 'ಕೆಜಿಎಫ್ -2' ಅನ್ನು ಹಿಂದಿಕ್ಕಿ 3 ನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಿತ್ರ ಎನಿಸಿಕೊಂಡಿದೆ. ಡಿಸೆಂಬರ್ 5ರಂದು ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದೆ.
'ಪುಷ್ಪ 2-ದಿ ರೂಲ್' ತೆಲುಗು ಚಿತ್ರ 'ಪುಷ್ಪ-ದಿ ರೈಸ್' ನ ಮುಂದುವರಿದ ಭಾಗವಾಗಿದ್ದು, ಇದು ರಕ್ತರಚಂದನ ಕಳ್ಳ ಪುಷ್ಪಾನ ಕತೆಯಾಗಿದೆ. ಸೀಕ್ವೆಲ್ ಭಾರತೀಯ ಚಲನಚಿತ್ರಕ್ಕೆ ಬಂಪರ್ ಓಪನಿಂಗ್ ಅನ್ನು ಹೊಂದಿತ್ತು. ಮೊದಲ ದಿನದಂದು ದೇಶೀಯವಾಗಿ ₹ 165 ಕೋಟಿ ನಿವ್ವಳ ಮತ್ತು ವಿಶ್ವಾದ್ಯಂತ ₹ 294 ಕೋಟಿ ಒಟ್ಟು ಗಳಿಸಿತ್ತು.
ಚಿತ್ರದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಪ್ರಕಾರ, 'ಪುಷ್ಪ 2' ವಿಶ್ವಾದ್ಯಂತ ₹ 1,409 ಕೋಟಿ ಗಳಿಸಿದೆ ಮತ್ತು ಶೀಘ್ರದಲ್ಲೇ ₹ 1,500 ಕೋಟಿ ಕ್ಲಬ್ಗೆ ಪ್ರವೇಶಿಸುವ ನಿರೀಕ್ಷೆಯಿದೆ.
'ಬಾಹುಬಲಿ 2-ದಿ ಕನ್ಕ್ಲೂಷನ್ ' ಮೀರುವ ಹಾದಿಯಲ್ಲಿ?
ಚಿತ್ರವು ಎಸ್.ಎಸ್.ರಾಜಮೌಳಿ ಅವರ 'ಬಾಹುಬಲಿ 2-ದಿ ಕನ್ ಕ್ಲೂಷನ್' ಅನ್ನು 1,790 ಕೋಟಿ ರೂ.ಗಳ ಗರಿಷ್ಠ ಸಂಗ್ರಹವನ್ನು ದಾಟಲು ಸಜ್ಜಾಗಿದೆ. ಅಲ್ಲಿಗೆ 'ಪುಷ್ಪ 2' ಎರಡನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಿತ್ರವಾಗಲಿದೆ.
ಬಾಕ್ಸ್ ಆಫೀಸ್ ಕಲೆಕ್ಷನ್ ಟ್ರ್ಯಾಕ್ ಮಾಡುವ ಸಕ್ನಿಲ್ಕ್ ವೆಬ್ಸೈಟ್ ಪ್ರಕಾರ, 'ಪುಷ್ಪಾ ಸೀಕ್ವೆಲ್ ಎಸ್ಎಸ್ ರಾಜಮೌಳಿ ಅವರ 'ಆರ್ಆರ್ಆರ್ ' (1,230 ಕೋಟಿ ರೂ.) ಮತ್ತು ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' (1,215 ಕೋಟಿ ರೂ.) ಗರಿಷ್ಠ ಸಂಗ್ರಹವನ್ನು ದಾಟಿದೆ.
ತೆಲುಗು ಆವೃತ್ತಿಯನ್ನು ಹಿಂದಿಕ್ಕಿದ ಹಿಂದಿ ಆವೃತ್ತಿ
'ಪುಷ್ಪಾ 2-ದಿ ರೂಲ್' ಹಿಂದಿ ಆವೃತ್ತಿಯು ಗಳಿಕೆಯಲ್ಲಿ ತೆಲುಗು ಮೀರಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಈ ಚಿತ್ರವು ತನ್ನ ಎರಡನೇ ಭಾನುವಾರ (11 ನೇ ದಿನ) ಹಿಂದಿ ಆವೃತ್ತಿಯಲ್ಲಿ ₹ 500 ಕೋಟಿ ಸಂಗ್ರಹ ಮಾಡಿದೆ. ಇದು 7 ನೇ ಮತ್ತು ವೇಗವಾಗಿ ಮಾಡಿದ ಚಿತ್ರವಾಗಿದೆ. ಈ ಹಿಂದೆ ಶಾರುಖ್ ಖಾನ್ ಅವರ 'ಜವಾನ್' 18 ದಿನಗಳಲ್ಲಿ 500 ಕೋಟಿ ರೂ.ಗಳ ಗಳಿಕೆಯನ್ನು ವೇಗವಾಗಿ ತಲುಪಿತ್ತು.