National Film Awards| ಅತ್ಯುತ್ತಮ ನಟ ʼಕಾಂತಾರʼ ರಿಷಭ್ ಶೆಟ್ಟಿ; ಚಂದನವನಕ್ಕೆ ಒಲಿದ ತ್ರಿವಳಿ ಪ್ರಶಸ್ತಿ
‘ಕಾಂತಾರ’ ಸಿನಿಮಾದ ಅತ್ಯುತ್ತಮ ಮನರಂಜನಾ ಚಲನಚಿತ್ರ ವಿಭಾಗದಲ್ಲಿ ಆಯ್ಕೆಯಾದರೆ, ಕನ್ನಡದ್ದೇ ಆದ ಕೆಜಿಎಫ್ 2 ಸಿನಿಮಾಗೆ ಕನ್ನಡದ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಪ್ರಶಸ್ತಿಗಳು ಬಂದಿವೆ.;
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ನೀಡುವ ರಾಷ್ಟ್ರಮಟ್ಟದ ಮೂರು ಪ್ರಶಸ್ತಿಗಳ ಗರಿ ಚಂದನವನದ ಮುಡಿಗೇರಿವೆ. ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ್ದ ಕಾಂತಾರಾ ಸಿನಿಮಾದ ಅಭಿನಯಕ್ಕಾಗಿ ನಟ ರಿಷಬ್ ಶೆಟ್ಟಿಗೆ ʼಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿʼ ದೊರೆತಿದೆ. ‘ಕಾಂತಾರ’ ಸಿನಿಮಾದ ಅತ್ಯುತ್ತಮ ಮನರಂಜನಾ ಚಲನಚಿತ್ರ ವಿಭಾಗದಲ್ಲಿ ಆಯ್ಕೆಯಾದರೆ, ಕನ್ನಡದ್ದೇ ಆದ ಕೆಜಿಎಫ್ 2 ಸಿನಿಮಾಗೆ ಕನ್ನಡದ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಪ್ರಶಸ್ತಿಗಳು ಬಂದಿವೆ.
ಶುಕ್ರವಾರ 70ನೇ ರಾಷ್ಟ್ರೀಯ ಪಶಸ್ತಿ 2022ರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮಳೆಯಾಳಂ ನಟ ಮಮ್ಮುಟ್ಟಿ ಮತ್ತು ಕನ್ನಡದ ರಿಷಬ್ ಶೆಟ್ಟಿ ರಾಷ್ಟ್ರಮಟ್ಟದ ಅತ್ಯುತ್ತಮ ನಟ ಪ್ರಶಸ್ತಿ ರೇಸ್‌ನಲ್ಲಿದ್ದರು. ಆದರೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಒಲಿದಿದೆ. ಅದಲ್ಲದೆ ಕಾಂತಾರ ಸಿನಿಮಾ 'ಕನ್ನಡದ ಅತ್ಯುತ್ತಮ ಮನರಂಜನಾ ಚಿತ್ರ' ಎಂಬ ಪ್ರಶಸ್ತಿಗೂ ಪಾತ್ರರಾಗಿದೆ. ಕೆಜಿಎಫ್ 2ಗೆ ಅತ್ತುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ಲಭಿಸಿದೆ.
ದಶಕಗಳ ಹಿಂದೆ ನಟ ಕಮಲ್ ಹಾಸನ್ ಸಹೋದರ ತಮಿಳು ನಟ ಚಾರುಹಾಸನ್ ಅವರಿಗೆ ಕನ್ನಡದ ‘ತಬರನ ಕತೆ’ ಸಿನಿಮಾದ ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ದೊರೆತಿತ್ತು. ಬಳಿಕ ‘ನಾನು ಅವನಲ್ಲ ಅವಳು’ ಸಿನಿಮಾದ ನಟನೆಗೆ ಸಂಚಾರಿ ವಿಜಯ್ಗೆ ರಾಷ್ಟ್ರಪ್ರಶಸ್ತಿ ಬಂದಿತ್ತು. ಅದಾದ ಬಳಿಕ ಕನ್ನಡ ಸಿನಿಮಾದಲ್ಲಿ ನಟಿಸಿದ್ದಕ್ಕೆ ಇನ್ಯಾವುದೇ ನಟರಿಗೆ ರಾಷ್ಟ್ರಪ್ರಶಸ್ತಿ ದೊರೆತಿರಲಿಲ್ಲ. ಇದೀಗ ಆ ಬಹು ಸಮಯದ ಬರವನ್ನು ರಿಷಬ್ ಶೆಟ್ಟಿ ನೀಗಿಸಿ, ರಿಷಬ್ ಶೆಟ್ಟಿ ಈ ಅತ್ಯುತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೆಜಿಎಫ್ 2 ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ
ಪ್ರಶಾಂತ್ ನೀಲ್ ನಿರ್ದೇಶನದ ನಟ 'ಯಶ್' ಅಭಿನಯದ 'ಕೆಜಿಎಫ್ 2 ' ಸಿನಿಮಾಗೆ 'ಅತ್ಯುತ್ತಮ ಮನರಂಜನಾತ್ಮಕ ಸಿನಿಮಾ' ವಿಭಾಗದಲ್ಲಿ ಹಾಗೂ ಅತ್ಯತ್ತಮ ಸಾಹಸ ನಿರ್ದೇಶನ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಘೋಷಣೆ ಆಗಿದೆ. ಸಿನಿಮಾದ ಆಕ್ಷನ್ ದೃಶ್ಯಗಳ ಗುಣಮಟ್ಟವನ್ನು ಮೆಚ್ಚಿ, ಅತ್ಯುತ್ತಮ ಸ್ಟಂಟ್ ಕೊರಿಯೋಗ್ರಫಿ ಪ್ರಶಸ್ತಿಯನ್ನು ‘ಕೆಜಿಎಫ್ 2’ ಸಿನಿಮಾಕ್ಕೆ ನೀಡಲಾಗಿದೆ. ಎರಡು ಅತ್ಯುತ್ತಮ ಪ್ರಶಸ್ತಿಗಳನ್ನು ಬಾಚಿಕೊಂಡ ‘ಕೆಜಿಎಫ್ 2’ ಹಾಗೂ ‘ಕಾಂತಾರ’ ಸಿನಿಮಾಗಳು ಹೊಂಬಾಳೆಯದ್ದೇ ನಿರ್ಮಾಣದ ಸಿನಿಮಾಗಳು ಎಂಬುವುದು ವಿಶೇಷ.
ವಿಶ್ವದ ಗಮನ ಸೆಳೆದಿದ್ದ ಕಾಂತಾರ ಸಿನಿಮಾ
ತುಳುನಾಡಿನ ವಿಶಿಷ್ಟ ಭೂತಾರಾಧನೆಯ ಸಂಸ್ಕೃತಿಯನ್ನು ಜಗತ್ತಿಗೇ ಸಾರಿದ ಸಿನಿಮಾ ಕಾಂತಾರ. 2022ರಲ್ಲಿ ಕಾಂತಾರ ಸಿನಿಮಾ ತೆರಕಂಡು ವಿಶ್ವ ಮಟ್ಟದಲ್ಲಿ ಗಮನ ಸೆಳೆದಿತ್ತು. ಈ ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದರು. ಈಗಾಗಲೇ ಈ ಸಿನಿಮಾಗೆ ಹಲವು ಪ್ರಶಸ್ತಿಗಳು ಲಭಿಸಿದ್ದವು. ʼಕಾಂತಾರʼ ಚಿತ್ರದ ಶಿವ ಪಾತ್ರದ ಮೂಲಕ ಅತ್ಯುತ್ತಮ ನಟ ವಿಭಾಗದಲ್ಲಿ ರಿಷಬ್ ಶೆಟ್ಟಿ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ಈ ಸಿನಿಮಾ ಮೇಕಿಂಗ್‌ನಿಂದಲೇ ಪ್ರೇಕ್ಷಕರ ಗಮನ ಸೆಳೆದಿತ್ತು. ಅದರಲ್ಲಿಯೂ ನಾಯಕನಾಗಿ ರಿಷಭ್ ಶೆಟ್ಟಿ ಎಲ್ಲರ ಮೆಚ್ಚುಗೆ ಗಳಿಸಿದ್ದರು.
ಪೃಥ್ವಿರಾಜ್ ಸುಕುಮಾರ್ ನಟನೆಯ ‘ಜನ ಗಣ ಮನ’, ಮಲಯಾಳಂ ನ ಇತರೆ ಕೆಲವು ಸಿನಿಮಾಗಳಾದ, ‘ರೊರಸಾಚ್’, ‘ಮುಕುಂದನ್ ಉನ್ನಿ ಅಸೋಸಿಯೇಟ್ಸ್’, ‘ಜಯ ಜಯ ಜಯ ಹೇ’, ‘ಪುಜು’, ‘ಅರಿಪ್ಪು’, ‘ಸಲ್ಯೂಟ್’ ಇನ್ನೂ ಕೆಲವು ಸಿನಿಮಾಗಳಿವೆ. ‘ಸೀತಾ ರಾಮಂ’ ಸಿನಿಮಾ 2022ರಲ್ಲಿ ಬಿಡುಗಡೆ ಆಗಿದ್ದು ಈ ಸಿನಿಮಾಗಳು ಸ್ಪರ್ಧೆಯಲ್ಲಿತ್ತು.
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು 2024ಗಾಗಿ, ತೆಲುಗು ಚಿತ್ರ ಪುಷ್ಪ: ದಿ ರೈಸ್‌ಗಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದರು. ಮತ್ತು ಅತ್ಯುತ್ತಮ ನಟಿ ಗೌರವವನ್ನು ಆಲಿಯಾ ಮತ್ತು ಕೃತಿ ಗೆದ್ದಿದ್ದರು. ಮೂವರೂ ನಟರಿಗೆ ಇದು ಮೊದಲ ರಾಷ್ಟ್ರೀಯ ಪ್ರಶಸ್ತಿಯಾಗಿತ್ತು.