ಸಿನಿಮಾ ಜುಲೈ 26ಕ್ಕೆ 'ರಾಜಾಹುಲಿ' ಸಿನಿಮಾ ರೀ- ರಿಲೀಸ್‌

ರಾಕಿಂಗ್ ಸ್ಟಾರ್ ಯಶ್ ನಟನೆಯ ಸೂಪರ್ ಹಿಟ್ 'ರಾಜಾಹುಲಿ' ಸಿನಿಮಾ ಮತ್ತೆ ತೆರೆಗೆ ಬರುತ್ತಿದೆ.

Update: 2024-07-14 07:21 GMT
ರಾಜಾಹುಲಿ
Click the Play button to listen to article

ರಾಕಿಂಗ್ ಸ್ಟಾರ್ ಯಶ್ ನಟನೆಯ ಸೂಪರ್ ಹಿಟ್ 'ರಾಜಾಹುಲಿ' ಸಿನಿಮಾ ಮತ್ತೆ ತೆರೆಗೆ ಬರುತ್ತಿದೆ.

ಗುರು ದೇಶ್‌ಪಾಂಡೆ ನಿರ್ದೇಶನದ 'ರಾಜಾಹುಲಿ' ಸಿನಿಮಾ 11 ವರ್ಷಗಳ ಹಿಂದೆ ತೆರೆಗೆ ಬಂದಿತ್ತು. ಕೆ. ಮಂಜು ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಮೇಘನಾ ರಾಜ್ ನಾಯಕಿಯಾಗಿ ನಟಿಸಿದ್ದರು. ತಮಿಳಿನ 'ಸುಂದರ ಪಾಂಡಿಯನ್' ರೀಮೆಕ್ ಆಗಿದ್ದ ಕನ್ನಡದ ನೇಟಿವಿಟಿಗೆ ತಕ್ಕಂತೆ 'ರಾಜಾಹುಲಿ'ಯನ್ನು ಸಿದ್ಧಪಡಿಸಲಾಗಿತ್ತು. ಯಶ್ ಅದೇ ಮೊದಲ ಬಾರಿಗೆ ಗಿರಿಜಾ ಮೀಸೆ ಬಿಟ್ಟು ಅಬ್ಬರಿಸಿದ್ದರು.

ಮಂಡ್ಯ ಹಿನ್ನೆಲೆಯಲ್ಲಿ 'ರಾಜಾಹುಲಿ' ಸಿನಿಮಾ ಕಟ್ಟಿಕೊಡಲಾಗಿತ್ತು. ಕಾಮಿಡಿ, ಆಕ್ಷನ್, ರಿವೇಂಜ್ ಡ್ರಾಮಾ ಬೆರೆಸಿದ್ದ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ನಾದಬ್ರಹ್ಮ ಹಂಸಲೇಖ ಸಂಗೀತ, ಸಾಹಿತ್ಯ ಚಿತ್ರಕ್ಕೆ ದೊಡ್ಡ ಶಕ್ತಿ ಆಗಿತ್ತು. ಎಲ್ಲಾ ಹಾಡುಗಳು ಹಿಟ್ ಆಗಿತ್ತು. ಸಿನಿಮಾ ಬಾಕ್ಸಾಫೀಸ್ ಭರ್ಜರಿ ಕಲೆಕ್ಷನ್ ಮಾಡಿತ್ತು.

'ರಾಜಾಹುಲಿ' ಯಶ್ ವೃತ್ತಿ ಜೀವನಕ್ಕೆ ದೊಡ್ಡ ತಿರುವು ಕೊಟ್ಟ ಸಿನಿಮಾ. ಅದಾಗಲೇ 'ಗೂಗ್ಲಿ' ಸಿನಿಮಾ ಹಿಟ್ ಆಗಿದ್ದರೂ ಕಮರ್ಷಿಯಲ್ ಆಗಿ ಈ ಸಿನಿಮಾ ದೊಡ್ಡ ಪ್ಲಸ್ ಆಗಿತ್ತು. ಬೆಂಗಳೂರಿನ ಕಪಾಲಿ, ವೀರೇಶ್, ಪಿವಿಆರ್, ರಾಕ್ ಲೈನ್ ಮಾಲ್ ಸೇರಿದಂತೆ ರಾಜ್ಯದಾದ್ಯಂತ 26 ಚಿತ್ರಮಂದಿರಗಳಲ್ಲಿ ಅಂದು ಸಿನಿಮಾ ಅರ್ಧ ಶತಕ ಬಾರಿಸಿತ್ತು. ಮೊದಲ ವಾರವೇ ಸಿನಿಮಾ 7 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.

ಜುಲೈ 26ರಿಂದ 'ರಾಜಾಹುಲಿ' ಸಿನಿಮಾ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದೆ. ಭೂಮಿ ಫಿಲಂಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಲು ಮುಂದಾಗಿದೆ. ಈ ಸುದ್ದಿ ಕೇಳಿ ರಾಕಿಂಗ್ ಸ್ಟಾರ್ ಅಭಿಮಾನಿಗಳು ಖುಷಿಯಾಗಿದ್ದಾರೆ.

Tags:    

Similar News