'ಕೋಟಿ' ಸಿನಿಮಾದ ವಿತರಣಾ ಹಕ್ಕು KRG ಸ್ಟುಡಿಯೋಸ್ ಪಾಲು
ಡಾಲಿ ಧನಂಜಯ ಅಭಿನಯದ ಕೋಟಿ ಚಿತ್ರದ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ.;
ಕೆಜಿಎಫ್- ಅಧ್ಯಾಯ 1, ಕಾಂತಾರ, 777 ಚಾರ್ಲಿ, ಬಡವ ರಾಸ್ಕಲ್, ಪೈಲ್ವಾನ್, 12th ಫೇಲ್, ಮತ್ತು ಹನುಮಾನ್ ಸೇರಿದಂತೆ ಇಲ್ಲಿಯವರೆಗೆ 100 ಕ್ಕೂ ಹೆಚ್ಚು ಚಲನಚಿತ್ರಗಳನ್ನು ವಿತರಿಸಿರುವ KRG ಸ್ಟುಡಿಯೋಸ್ ಇದೀಗ ಡಾಲಿ ಧನಂಜಯ ಅಭಿನಯದ ʻಕೋಟಿʼ ಚಿತ್ರದ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಚೊಚ್ಚಲ ಚಿತ್ರನಿರ್ಮಾಪಕ ಪರಮೇಶ್ವರ ಗುಂಡ್ಕಲ್ ನಿರ್ದೇಶನದ ಈ ಚಿತ್ರ ಜೂನ್ 14 ರಂದು ಥಿಯೇಟರ್‌ಗೆ ಬರಲಿದೆ.
ವಿತರಣಾ ಸಂಸ್ಥೆಯು 250 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್ ಗೌಡ ಮಾತನಾಡಿ, ಧನಂಜಯ ಅವರೊಂದಿಗಿನ ನಮ್ಮ ಸಂಬಂಧ ಕೋಟಿ ಮೂಲಕ ಮತ್ತಷ್ಟು ವಿಸ್ತರಿಸಿದೆ. ನಾನು ಚಿತ್ರವನ್ನು ನೋಡಿದೆ ಮತ್ತು ಪರಮ್ ಅವರ ಬರವಣಿಗೆ ಮತ್ತು ಅವರು ಚಿತ್ರಕಥೆಯನ್ನು ಹೆಣೆದಿರುವ ಚಮತ್ಕಾರ ನೋಡಿ ಭಾವುಕನಾದೆ. ಇದನ್ನು ಪ್ರೇಕ್ಷಕರ ಮುಂದೆ ಇಡಲು ನಾವು ಉತ್ಸುಕರಾಗಿದ್ದೇವೆ ಮತ್ತು 250 ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.
ಥ್ರಿಲ್ಲರ್ ಆಗಿ ನಿರ್ಮಿಸಲಾದ ಕೋಟಿ ಸಿನಿಮಾಗೆ ಜ್ಯೋತಿ ದೇಶಪಾಂಡೆ ಅವರು ಬಂಡವಾಳ ಹೂಡಿದ್ದಾರೆ. ಇದು ಜಿಯೋ ಸ್ಟುಡಿಯೋಸ್ ನಿರ್ಮಾಣದ ಮೊದಲ ಕನ್ನಡ ಸಿನಿಮಾವಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಚಿತ್ರದಲ್ಲಿ ಧನಂಜಯ ಜೊತೆಗೆ ರಮೇಶ್ ಇಂದಿರಾ, ಮೋಕ್ಷ ಕುಶಾಲ್, ರಂಗಾಯಣ ರಘು, ತಾರಾ ಮುಂತಾದವರು ನಟಿಸಿದ್ದಾರೆ.
ಕಲರ್ಸ್ ಕನ್ನಡದಲ್ಲಿ ತಮ್ಮ ಕೈಚಳಕಕ್ಕೆ ಹೆಸರುವಾಸಿಯಾದ ಪರಮ್, ಚಿತ್ರದ ಪ್ರಚಾರದ ಮೂಲಕ, ವಿಶೇಷವಾಗಿ ಅದರ ಪೋಸ್ಟರ್ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆಗಳನ್ನು ಮೂಡಿಸಿದ್ದಾರೆ. ಚಿತ್ರದ ಆರಂಭಿಕ ಪ್ರದರ್ಶನ ವೀಕ್ಷಿಸಿದವರು ನಿರೀಕ್ಷೆಗಳು ಸರಿಯಾದ ಹಾದಿಯಲ್ಲಿವೆ ಎಂದು ಒಪ್ಪಿಕೊಂಡಿದ್ದಾರೆ.
ಕೋಟಿ ಭಾವನಾತ್ಮಕ ಥ್ರಿಲ್ಲರ್ ಎಂದು ಬಣ್ಣಿಸಿದರು. ಐಪಿಎಲ್ ಮತ್ತು ಚುನಾವಣಾ ನಂತರ ಕುಟುಂಬ ಪ್ರೇಕ್ಷಕರಿಗೆ ಪರಿಪೂರ್ಣವಾದ ಮನರಂಜನೆ ನೀಡುವ ಚಿತ್ರ ಇದಾಗಿದೆ. ವಾಸುಕಿ ವೈಭವ್ ಮತ್ತು ನೋಬಿನ್ ಪಾಲ್ ಅವರು ಕೋಟಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.