ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ "ಕೆರೆಬೇಟೆ"

ಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಒಂದಾಗಿರುವ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಕನ್ನಡದ ಕೆರೆಬೇಟೆ ಸಿನಿಮಾ ಆಯ್ಕೆಯಾಗಿದ್ದು, ಗೋವಾ ಫೆಸ್ಟಿವಲ್ ಪನೋರಮಾ ಫೀಚರ್ ಫಿಲ್ಮ್ ವಿಭಾಗದಲ್ಲಿ ಕನ್ನಡದ ಕೆರೆಬೇಟೆ ಸಿನಿಮಾ ಪ್ರದರ್ಶನ ಕಂಡಿದೆ.;

Update: 2024-11-27 13:37 GMT
ಕೆರೆಬೇಟೆ ಸಿನಿಮಾ ಗೋವಾದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ.
Click the Play button to listen to article

ಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಒಂದಾಗಿರುವ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಕನ್ನಡದ ಕೆರೆಬೇಟೆ ಸಿನಿಮಾ ಆಯ್ಕೆಯಾಗಿದ್ದು, ಗೋವಾ ಫೆಸ್ಟಿವಲ್ ಪನೋರಮಾ ಫೀಚರ್ ಫಿಲ್ಮ್ ವಿಭಾಗದಲ್ಲಿ ಕನ್ನಡದ ಕೆರೆಬೇಟೆ ಸಿನಿಮಾ ಪ್ರದರ್ಶನ ಕಂಡಿದೆ. 

ಸಿನಿಮಾದ ನಿರ್ಮಾಪಕ ಹಾಗೂ ನಾಯಕ ಗೌರಿಶಂಕರ್, ನಿರ್ದೇಶಕ ರಾಜ್ ಗುರು ಸೇರಿದಂತೆ ಇಡೀ ಸಿನಿಮಾತಂಡ ಭಾಗಿಯಾಗಿದ್ದು, ಮೆಚ್ಚುಗೆಯ ಪ್ರಶಸ್ತಿ ಪುರಸ್ಕೃತಗಳನ್ನು ಸ್ವೀಕರಿಸಿದ್ದಾರೆ. 

ಗೋವಾ ಪಣಜಿಯಲ್ಲಿ ನಡೆಯುತ್ತಿರುವ 55ನೇ 'ಭಾರತದ ಅಂತಾರಾಷ್ಟ್ರೀಯಾ ಚನಲಚಿತ್ರೋತ್ಸವ' ನವೆಂಬರ್ 20ರಿಂದ ಪ್ರಾರಂಭವಾಗಿದ್ದು, 28ರ ವರೆಗೆ ನಡೆಯಲಿದೆ. ಚಿತ್ರೋತ್ಸವಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅನೇಕ ಸಿನಿ ಗಣ್ಯರು ಸಾಕ್ಷಿಯಾಗಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಗೋವಾ ಚಿತ್ರೋತ್ಸವದಲ್ಲಿ ಕನ್ನಡದ ಕೆರೆಬೇಟೆ ಸಿನಿಮಾ ಪ್ರದರ್ಶನ ಕಂಡಿರುವುದು  ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಕೆರೆಬೇಟೆ ಸಿನಿಮಾವನ್ನು ಜೂರಿ ಮೆಂಬರ್ ಮೆಚ್ಚಿಕೊಂಡಿದ್ದು, ಪ್ರಪಂಚದ ವಿವಿಧ ಚಿತ್ರ ಪ್ರೇಮಿಗಳಿಂದ ಸಹ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಈ ಬಗ್ಗೆ ಸಿನಿಮಾತಂಡ ಸಂತಸ ವ್ಯಕ್ತಪಡಿಸಿದೆ. 

 

ಗೋವಾ ಫಿಲ್ಡ್ ಫೆಸ್ಟಿವಲ್‌ನಲ್ಲಿ 'ಭಾರತೀಯ ಪನೋರಮಾ' ವಿಭಾಗ ಮುಖ್ಯವಾಗಿದ್ದು, ಅದರಲ್ಲಿ 25 ಚಲನಚಿತ್ರ ಹಾಗೂ 20 ನಾನ್-ಫೀಚರ್ ಸಿನಿಮಾಗಳು ಪ್ರದರ್ಶನ ಕಾಣಲಿವೆ. ಪನೋರಮಾ ವಿಭಾಗದ ಬಾಲಿವುಡ್‌ನ 'ಸ್ವಾತಂತ್ರ್ಯ ವೀರ್ ಸಾವರ್ಕರ್'  ಕನ್ನಡದ 'ಕೆರೆಬೇಟೆ' ಮತ್ತು ಕನ್ನಡದ 'ವೆಂಕ್ಯಾ' ಸಿನಿಮಾ ಕೂಡ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿದೆ. 'ವೆಂಕ್ಯಾ' ಸಿನಿಮಾಗೆ ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದಾರೆ.

 ವಿಭಿನ್ನ ಸಿನಿಮಾ 'ಕೆರೆಬೇಟೆ'

ಈ ಸಿನಿಮಾ ಶಿವಮೊಗ್ಗದ ಮಲೆನಾಡು ಭಾಗದ ಜನಜೀವನ, ಭಾಷೆ, ಸಂಸ್ಕೃತಿ, ಆಚರಣೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಶಿವಮೊಗ್ಗ, ಸಾಗರ, ಸೊರಬ ಭಾಗದಲ್ಲಿ ಮೀನು ಬೇಟೆಯಾಡುವ ಪದ್ಧತಿಯನ್ನು 'ಕೆರೆಬೇಟೆ' ಎನ್ನುವ ಹೆಸರಿನಲ್ಲಿ ಕರೆಯುತ್ತಾರೆ. ನಿರ್ದೇಶಕ ಗುರುರಾಜ್ ಅವರು ನಟ ಗೌರಿ ಶಂಕರ್ ಅವರ ಅಪ್ಪಟ ಮಲೆನಾಡು ಜನರ ಆಡುಮಾತಿನ ಸಂಭಾಷಣೆಯೊಂದಿಗೆ ಈ ಸಿನಿಮಾವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. 'ಕೆರೆಬೇಟೆ' ಚಿತ್ರ ಇದೇ ವರ್ಷದ ಮಾರ್ಚ್ 15ಕ್ಕೆ ರಾಜ್ಯದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿತ್ತು. ಗೌರಿ ಶಂಕರ್ ಅವರ ಜನಮನ ಸಿನಿಮಾ ಸಂಸ್ಥೆಯಲ್ಲಿ ಈ ಸಿನಿಮಾ ನಿರ್ಮಾಣ ಆಗಿತ್ತು. ಮಲೆನಾಡಿನ ಮೀನು ಬೇಟೆಯ ಪದ್ಧತಿಯನ್ನು ಈ ಸಿನಿಮಾದಲ್ಲಿ ಪರಿಚಯ ಮಾಡಲಾಗಿತ್ತು. ಗೌರಿಶಂಕರ್, ನಾಯಕಿ ಬಿಂದು ಗೌಡ, ಪೋಷಕ ಪಾತ್ರದಲ್ಲಿ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್, ಹರಿಣಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

Tags:    

Similar News