ಮದುವೆಯಾದರೆ ಮಾತ್ರ ಸಿಹಿ ಊಟ ಹಾಕಿಸಬೇಕಾ? ರಮ್ಯಾ ಪ್ರಶ್ನೆ

ರಮ್ಯಾ ಇತ್ತೀಚೆಗೆ ತಮ್ಮ ಎಡಗೈಗೆ ಬರಳಿಗೆ ಉಂಗುರ ತೊಟ್ಟಿರುವುದು ಸೋಷಿಯಲ್‍ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದಾರೆ. ರಮ್ಯಾ ಸದ್ಯದಲ್ಲೇ ಮದುವೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.;

Update: 2025-02-14 04:12 GMT

ನಟಿ ರಮ್ಯಾ ಸಿನಿಮಾ ಸಮಾರಂಭದಲ್ಲಿ ಕಾಣಿಸಿಕೊಳ್ಳದೆ ಕೆಲವು ವರ್ಷಗಳೇ ಆಗಿದ್ದವು. ಅವರು ತಮ್ಮದೇ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಪತ್ರಿಕಾಗೋಷ್ಠಿಗೂ ಬಂದಿರಲಿಲ್ಲ. ಇದೀಗ ಅವರು ಬಹಳ ಸಮಯದ ನಂತರ ಈ ವಾರ ಬಿಡುಗಡೆಯಾಗುತ್ತಿರುವ ಗುರುನಂದನ್‍ ನಾಯಕನಾಗಿ ಅಭಿನಯಿಸಿದರುವ ‘ರಾಜು ಜೇಮ್ಸ್ ಬಾಂಡ್‍’ ಚಿತ್ರದ ಪ್ರೀ-ರಿಲೀಸ್‍ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ರಮ್ಯಾ, ಒಂದೊಳ್ಳೆಯ ಸ್ಕ್ರಿಪ್ಟ್ನ ಹುಡುಕಾಟದಲ್ಲಿರುವುದಾಗಿ ಹೇಳಿದ್ದಾರೆ. ಒಳ್ಳೆಯ ಕಥೆ ಸಿಕ್ಕಿರೆ ನಟನೆಗೆ ಮರಳುವುದಾಗಿ ಹೇಳಿದ್ದಾರೆ.

ಸದ್ಯಕ್ಕೆ ಯಾವುದೇ ಚಿತ್ರದಲ್ಲೂ ನಾನು ನಟಿಸುತ್ತಿಲ್ಲ ಎಂದ ಅವರು, ‘ನನಗೊಂದು ಒಳ್ಳೆಯ ಸ್ಕ್ರಿಪ್ಟ್ ಇನ್ನೂ ಸಿಕ್ಕಿಲ್ಲ. ಒಂದೊಳ್ಳೆಯ ಕಥೆ ಸಿಕ್ಕರೆ ಖಂಡಿತಾ ಮಾಡುತ್ತೇನೆ. ಇದುವರೆಗೂ ಯಾವುದೇ ಆಸಕ್ತಿಕರ ಸ್ಕ್ರಿಪ್ಟ್ ನನಗೆ ಸಿಕ್ಕಿಲ್ಲ. ನನಗೆ ಮಾಡಿದ್ದನ್ನೇ ಇನ್ನೊಮ್ಮೆ ಮಾಡುವುದಕ್ಕೆ ಇಷ್ಟವಿಲ್ಲ. ಯಾವುದಾದರೂ ಒಳ್ಳೆಯ ಪಾತ್ರ ಬಂದರೆ ಖಂಡಿತಾ ಮಾಡುತ್ತೇನೆ’ ಎಂದರು.

ರಮ್ಯಾ ಇತ್ತೀಚೆಗೆ ತಮ್ಮ ಎಡಗೈಗೆ ಬರಳಿಗೆ ಉಂಗುರ ತೊಟ್ಟಿರುವುದು ಸೋಷಿಯಲ್‍ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದಾರೆ. ರಮ್ಯಾ ಸದ್ಯದಲ್ಲೇ ಮದುವೆ ಆಗುವ ಸಾಧ್ಯತೆ ಇದೆ, ಅವರು ತಮ್ಮ ಅಭಿಮಾನಿಗಳಿಗೆ ಯಾವಾಗ ಸಿಹಿಊಟ ಹಾಕಿಸುತ್ತಾರೆ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಈ ಕುರಿತು ಮಾತನಾಡಿರುವ ಅವರು, ‘ನಾನು ರಿಂಗ್‍ ತೊಟ್ಟರೆ ಯಾಕೆ ಟ್ರೋಲ್‍ ಆಗಬೇಕು? ಮದುವೆಯಾದರೆ ಬಗ್ಗೆ ಮಾತ್ರ ಸಿಹಿ ಊಟ ಹಾಕಿಸಬೇಕಾ? ಅಭಿಮಾನಿಗಳಿಗೆ ಬೇಕಾದರೆ, ಹಾಗೆಯೇ ನಾನು ಸಿಹಿಊಟ ಹಾಕಿಸುತ್ತೇನೆ. ಯಾವಾಗ ಬೇಕಾದರೂ ಸಿಹಿಯೂಟ ಮಾಡಬಹುದು. ಅದಕ್ಕೆ ಮದುವೆ ಆಗಬೇಕೆಂದೇನೂ ಇಲ್ಲ’ ಎಂದರು.

ಇನ್ನು, ಚಿತ್ರ ನಿರ್ಮಾಣದ ಕುರಿತು ಮಾತನಾಡಿದ ರಮ್ಯಾ, ‘ಎರಡು ವರ್ಷಗಳ ಹಿಂದೆ ‘ಸ್ವಾತಿಮುತ್ತಿನ ಮಳೆ ಹನಿಯೇ’ ಚಿತ್ರ ನಿರ್ಮಾಣ ಮಾಡಿದೆ. ಅದರ ಬಗ್ಗೆ ಬಹಳ ಖುಷಿ ಇದೆ. ಕಮರ್ಷಿಯಲ್‍ ಆಗಿ ಚಿತ್ರ ಯಶಸ್ವಿಯಾಗಲಿಲ್ಲ. ಆ ಚಿತ್ರ ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಸಿರಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿದೆ. ಆ ಸಿನಿಮಾ ಮಾಡಿದ್ದಿಕ್ಕೆ ಖುಷಿ ಇದೆ. ಒಂದೊಳ್ಳೆಯ ಸ್ಕ್ರಿಪ್ಟ್ ಸಿಕ್ಕಿದರೆ, ಇನ್ನಷ್ಟು ಚಿತ್ರಗಳನ್ನು ನಿರ್ಮಿಸುವ ಆಸೆ ಇದೆ’ ಎಂದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲಿರುವ ದರ್ಶನ್ ಬಗ್ಗೆ ಎದುರಾದ ಪ್ರಶ್ನೆಗೆ ರಮ್ಯಾ, ನೋ ಕಾಮೆಂಟ್ಸ್, ಆ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.

Similar News