ಯುವ ರಾಜ್‌ಕುಮಾರ್ ಬಿರುದಿನ ಬಗ್ಗೆ ಬಿಸಿಬಿಸಿ ಚರ್ಚೆ
ಇದೀಗ ಯುವ ರಾಜ್‌ಕುಮಾರ್ ಪಟ್ಟಾಭಿಷೇಕ ಮಾಡಬೇಕು, ಒಂದು ಬಿರುದು ಕೊಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭಿಸಿದ್ದಾರೆ.;
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಯುವ' ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಯುವ ಅವರ ಚೊಚ್ಚಲ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ಇದೀಗ ಯುವ ರಾಜ್‌ಕುಮಾರ್ ಪಟ್ಟಾಭಿಷೇಕ ಮಾಡಬೇಕು, ಒಂದು ಬಿರುದು ಕೊಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭವಾಗಿದೆ.
ನಟಸಾರ್ವಭೌಮ ಡಾ. ರಾಜ್‌ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಶ್, ಕರಾಟೆ ಕಿಂಗ್ ಶಂಕರ್ ನಾಗ್, ಕ್ರೇಜಿಸ್ಟಾರ್ ರವಿಚಂದ್ರನ್, ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿನಯ ಚಕ್ರವರ್ತಿ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ರಾಕಿಂಗ್ ಸ್ಟಾರ್ ಯಶ್ ಹೀಗೆ ಪ್ರತಿಯೊಬ್ಬರನ್ನು ಅಭಿಮಾನಿಗಳು ಒಂದೊಂದು ಬಿರುದಿನ ಜೊತೆ ಗುರುತಿಸುತ್ತಾರೆ.
ಕೆಲ ಅಭಿಮಾನಿಗಳು ಯುವ ರಾಜ್‌ಕುಮಾರ್ ಅವರಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನು ನೋಡುತ್ತಿದ್ದಾರೆ. ಜ್ಯೂನಿಯರ್ ಪವರ್ ಸ್ಟಾರ್ ಅಂತೆಲ್ಲಾ ಕರೆಯಲು ಆರಂಭಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇನ್ನು ಕೆಲವರು ತರಹೇವಾರಿ ಬಿದುರುಗಳನ್ನು ಸೂಚಿಸುತ್ತಿದ್ದಾರೆ. ಯುವ ರಾಜ್‌ಕುಮಾರ್ ಪಟ್ಟಾಭಿಷೇಕ ನಡೆಯಬೇಕು, ಬಿರುದು ಕೊಡಬೇಕು ಅಂತ ಚರ್ಚಿಸುತ್ತಿದ್ದಾರೆ. ಪಟ್ಟಾಭಿಷೇಕ ಅಂದ್ರೆ ಕಾರ್ಯಕ್ರಮ ನಡೆಸಿ ಯುವರಾಜ್‌ಕುಮಾರ್ ಅವರನ್ನು ಆಹ್ವಾನಿಸಿ ಬಿರುದು ಘೋಷಿಸಿಬೇಕು ಎನ್ನುತ್ತಿದ್ದಾರೆ. ಈಗಾಗಲೇ ಕೆಲ ಇಂಟ್ರೆಸ್ಟಿಂಗ್ ಬಿರುದುಗಳನ್ನು ಸೂಚಿಸುತ್ತಿದ್ದಾರೆ.
ಪ್ರಿನ್ಸ್, ಉಸ್ತಾದ್, ಮೆಗಾ ಪವರ್ ಸ್ಟಾರ್, ಯಂಗ್ ಟೈಗರ್, ಪವರ್ ಪ್ರಿನ್ಸ್, ಜ್ಯೂ. ಪವರ್ ಸ್ಟಾರ್ ಹೀಗೆ ಸಾಕಷ್ಟು ಬಿರುದುಗಳು ಸೋಶಿಯಲ್ ಮೀಡಿಯಾದಲ್ಲಿ ಚಾಲ್ತಿಗೆ ಬಂದಿದೆ. ಆದರೆ ಕೆಲವರು ಮಾತ್ರ ಸದ್ಯಕ್ಕೆ ಯಾವುದೇ ಬಿರುದು ಬೇಡ, ಮೊದಲ ಚಿತ್ರ ಬಿಡುಗಡೆಯಾಗಿ ವಾರ ಕಳೆದಿಲ್ಲ, ಇಷ್ಟು ಬೇಗ ಬಿರುದು ಬೇಕಾಗಿಲ್ಲ ಎಂದು ಹೇಳುತ್ತಿದ್ದಾರೆ.
ಒಟ್ಟಾರೆ ಯುವ ರಾಜ್‌ಕುಮಾರ್ ಮೊದಲ ಪ್ರಯತ್ನದಲ್ಲೇ ಅಭಿಮಾನಿಗಳ ಮನಗೆದ್ದಿದ್ದಾರೆ. ಯುವ 2ನೇ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.