ರಿಯಲ್ ಸ್ಟಾರ್ ಉಪ್ಪಿ UI ಸಿನಿಮಾದಿಂದ ಬಂತು ಟ್ರೋಲ್‌ ಹಾಡು

UI ಸಿನಿಮಾದ ಹಾಡನ್ನು ಟ್ರೋಲ್ ಪ್ರಿಯರಿಗಾಗಿಯೇ ಮಾಡಿದಂತಿದೆ. ಹಾಗಾಗಿಯೇ ಈ ಗೀತೆ ಮಜಾ ಕೊಡುತ್ತಿದೆ. ಈಗೀನ ಹುಡುಗರಿಗೂ ಇದು ಕನೆಕ್ಟ್ ಆಗುವಂತಿದೆ.;

Update: 2024-03-04 14:03 GMT
ಸ್ಯಾಂಡಲ್‌ವುಡ್‌ UI ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ.
Click the Play button to listen to article

ಸ್ಯಾಂಡಲ್‌ವುಡ್‌ UI ಸಿನಿಮಾದ ಮೊದಲ ಹಾಡು ಇಂದು(ಮಾ.4) ರಿಲೀಸ್‌ ಆಗಿದೆ.

ನರೇಶ್ ಕುಮಾರ್ ಬರೆದಿರೋ ಈ ಹಾಡನ್ನು ಬಹುಭಾಷೆಯಲ್ಲಿಯೇ ರಿಲೀಸ್ ಮಾಡಲಾಗಿದೆ. ಹರ್ಷಿಕಾ ದೇವನಾಥ್, ಅನೂಪ್ ಭಂಡಾರಿ, ಐಶ್ವರ್ಯಾ ರಂಗರಾಜನ್ ಹಾಗೂ ಅಜನೀಶ್ ಲೋಕನಾಥ್, ಅನೂಪ್ ಭಂಡಾರಿ ಈ ಹಾಡಿಗೆ ಜೀವ ತುಂಬಿದ್ದಾರೆ.

ಮುಂಬೈನಲ್ಲಿರುವ ಗೂಗಲ್ ಕಚೇರಿಯಿಂದಲೇ ಈ ಹಾಡನ್ನು ರಿಲೀಸ್ ಮಾಡಲಾಗಿದೆ. ಬಹು ಭಾಷೆಯಲ್ಲಿ ಬಂದಿರುವ ಈ ಹಾಡು ಮಜಾವಾಗಿಯೇ ಇದೆ.

UI ಸಿನಿಮಾದ ಈ ಒಂದು ಹಾಡಿನಲ್ಲಿ ನಿಖಿಲ್ ಎಲ್ಲಿದ್ದಿಯಪ್ಪ ಡೈಲಾಗ್ ಕೂಡ ಬಳಕೆ ಆಗಿದೆ. ವಿಶೇಷಾಗಿಯೆ ಈ ಹಾಡನ್ನು ಟ್ರೋಲ್ ಪ್ರಿಯರಿಗೆ ಮಾಡಿದಂತಿದೆ. ಹಾಗಾಗಿಯೇ ಈ ಗೀತೆ ಮಜಾ ಕೊಡುತ್ತಿದೆ. ಈಗಿನ ಹುಡುಗರಿಗೂ ಇದು ಕನೆಕ್ಟ್ ಆಗುವಂತೆ ಇದೆ.

ಟ್ರೆಂಡ್ ಆಗಿರುವ ಪ್ರತಿ ವಿಷಯವೂ ಇಲ್ಲಿ ಸಾಲುಗಳಾಗಿವೆ. ಕರಿಮಣಿ ಮಾಲೀಕ ಮತ್ತು ಬೊಳ್ಳೊಳ್ಳಿ ಕಬಾಬ್ ಕೂಡ ಇಲ್ಲಿ ಬಂದು ಹೋಗುತ್ತದೆ. ಒಂದು ರೀತಿ ವೈರಲ್ ಮ್ಯಾಟರ್‌ ಅನ್ನೇ ಇಲ್ಲಿ ಹಾಡು ಮಾಡಿದಂತೆ ಇದೆ.

Tags:    

Similar News