ಹುಟ್ಟುಹಬ್ಬದಂದೇ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡಿದ ದರ್ಶನ್
ದರ್ಶನ್ D59 ಎಂಬ ಸಿನಿಮಾದಲ್ಲಿ ನಟಿಸಲಿದ್ದು, ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಗಿದೆ.;
By : The Federal
Update: 2024-02-16 11:35 GMT
ಇಂದು ಚಾಲೆಂಜಿಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅವರ ಹೊಸ ಸಿನಿಮಾವನ್ನು ಘೋಷಿಸಲಾಗಿದೆ.
ದರ್ಶನ್ D59 ಎಂಬ ಸಿನಿಮಾದಲ್ಲಿ ನಟಿಸಲಿದ್ದು, ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಗಿದೆ. ಈ ಚಿತ್ರವನ್ನು ಕಾಟೇರಾ ನಿರ್ದೇಶಕ ತರುಣ್ ಸುಧೀರ್ ಅವರು ನಿರ್ದೇಶನ ಮಾಡುತ್ತಿದ್ದು, ಶೈಲಜಾ ನಾಗ್, ಬಿ.ಸುರೇಶ್ ನಿರ್ಮಾಣ ಮಾಡುತ್ತಿದ್ದಾರೆ. ಈ ಕುರಿತು ನಿರ್ಮಾಪಕಿ ತಮ್ಮ ಸಾಮಾಜಿಕ ಜಾಲತಾಣ x ಖಾತೆಯಲ್ಲಿ ದರ್ಶನ್ ಮುಂದಿನ ಸಿನಿಮಾದ ಬಗ್ಗೆ ಘೋಷಣೆ ಮಾಡಿದ್ದಾರೆ.
ಈ D59 ಚಿತ್ರವು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸಿಂಧೂರ ಲಕ್ಷ್ಮಣನ ಸಾಹಸಗಾಧೆಯ ಕಥೆಯನ್ನು ಹೊಂದಿದ್ದು, ಕಾಟೇರಾ, ರಾಬರ್ಟ್ ನಿರ್ದೇಶನದ ಬಳಿಕ ತರುಣ್ ಸುಧೀರ್ ನಿರ್ದೇಶಿಸುತ್ತಿರುವ ದರ್ಶನ್ ಅವರ ಮೂರನೇ ಸಿನಿಮಾ ಇದಾಗಿದೆ.