ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಹೃದಯಾಘಾತದಿಂದ ಸಾವು

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ‌ ನಿಟ್ಟೆಯಲ್ಲಿ ಸಂಬಂಧಿಕರೊಬ್ಬರ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ರಾಕೇಶ್ ಪೂಜಾರಿ ಅವರಿಗೆ ಹೃದಯಾಘಾತವಾಗಿದೆ.;

Update: 2025-05-12 03:27 GMT

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಕಲಾವಿದ ರಾಕೇಶ್ ಪೂಜಾರಿ ಅವರು ಸೋಮವಾರ ಮುಂಜಾನೆ 2ಗಂಟೆ ಸುಮಾರಿಗೆ ಹೃದಯಾಘಾತದಿಂದ ನಿಧಾನರಾಗಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ‌ ನಿಟ್ಟೆಯಲ್ಲಿ ಸಂಬಂಧಿಕರೊಬ್ಬರ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಅವರಿಗೆ ಹೃದಯಾಘಾತವಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ‌ ನಿಟ್ಟೆಯಲ್ಲಿ ರಾಕೇಶ್ ಅವರು ಮೆಹಂದಿ ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು.

2018 ರಲ್ಲಿ ಜೀ ಕನ್ನಡ ‘ಕಾಮಿಡಿ ಕಿಲಾಡಿಗಳು ಸೀಸನ್ -2’ರಲ್ಲಿ ರನ್ನರ್ ಅಪ್ ತಂಡದಲ್ಲಿದ್ದರು.  ಸೀಸನ್-3ರಲ್ಲಿ ವಿಜೇತರಾಗಿದ್ದರು.

ಕಾಮಿಡಿ ಕಿಲಾಡಿಗಳು ಶೋ ನಂತರ ನಟ ಕಿಚ್ಚ ಸುದೀಪ್ ನಟನೆಯ ‘ಪೈಲ್ವಾನ್’ ಚಿತ್ರದಲ್ಲಿನಟಿಸಿದ್ದರು. ಅಲ್ಲದೇ ‘ಇದು ಎಂಥಾ ಲೋಕವಯ್ಯ’ ಚಿತ್ರದಲ್ಲೂ ಅಭಿನಯಿಸಿದ್ದರು. ತುಳು ಭಾಷೆಯ ‘ಪೆಟ್ಕಮ್ಮಿ’, ‘ಅಮ್ಮೆರ್ ಪೊಲೀಸ್’ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿದ್ದರು.

ರಾಕೇಶ್ ಅವರು ಮೇ 11ರ ಬೆಳಿಗ್ಗೆ ‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ​ನಲ್ಲಿ ಭಾಗವಹಿಸಿದ್ದರು. ಸಂಜೆ ಆಪ್ತರೊಬ್ಬರ ಮೆಹಂದಿ ಶಾಸ್ತ್ರಕ್ಕೆ ಹೋಗಿದ್ದರು. ಮಧ್ಯ ರಾತ್ರಿ ವೇಳೆಗೆ ಹೃದಯಾಘಾತ ಸಂಭವಿಸಿತು. ಇತ್ತೀಚೆಗೆ ರಾಕೇಶ್ ಅವರಿಗೆ ಅಪಘಾತವೂ ಸಂಭವಿಸಿತ್ತು. ಆದರೆ, ಯಾವುದೇ ಹೆಚ್ಚಿನ ತೊಂದರೆ ಆಗಿರಲಿಲ್ಲ ಎಂದು ಅವರ ಆಪ್ತ ಗೋವಿಂದೇ ಗೌಡ ಹೇಳಿದ್ದಾರೆ.

ರಾಕೇಶ್ ಪೂಜಾರಿ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

Tags:    

Similar News