Bagheera Movie Trailer | ಬಹುನಿರೀಕ್ಷಿತ ʼಬಘೀರʼ ಟ್ರೇಲರ್ ಬಿಡುಗಡೆ
ಚಿಕ್ಕಂದಿನಲ್ಲಿ ತಾಯಿಯನ್ನು ಕಳೆದುಕೊಂಡ ಹುಡುಗ ದೊಡ್ಡವನಾದಾಗ ಪೋಲೀಸ್ ಆಗುತ್ತಾನೆ. ನ್ಯಾಯ ಸಿಗದ ಕಾರಣ ಮುಖವಾಡ ಹಾಕಿಕೊಂಡು ‘ಬಘೀರಾ’ ಗೆಟಪ್‌ನಲ್ಲಿ ವಿಲನ್ ಗಳನ್ನು ಸಾಯಿಸುತ್ತಾನೆ.;
ಉಗ್ರಂ ಖ್ಯಾತಿಯ ಶ್ರೀಮುರಳಿ ನಟನೆಯ ಬಹುನಿರೀಕ್ಷಿತ ಬಘೀರಾ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
ಈ ಸಿನಿಮಾ ಅಕ್ಟೋಬರ್ 31 ರಂದು ರಿಲೀಸ್ ಆಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರಕ್ಕೆ, ಡಾ. ಸೂರಿ ಅವರು ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಶ್ರೀಮುರಳಿ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಅವರು ಕಥೆ ಬರೆದಿದ್ದಾರೆ.
ಶ್ರೀಮುರಳಿ ಪೊಲೀಸ್ ಅಧಿಕಾರಿಯಾಗಿ ಹಾಗೂ ಮತ್ತೊಂದರಲ್ಲಿ ಮುಖಕ್ಕೆ ಮುಖವಾಡ ಧರಿಸಿದ ಬಘೀರನಾಗಿ ಎರಡು ಶೇಡ್‌ಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
"ಅಮ್ಮ.. ದೇವರು ಯಾಕೆ ರಾಮಾಯಣ, ಮಹಾಭಾರತ ಅಂತ ಬರ್ತಾನೆ. ಯಾವಾಗಲೂ ಯಾಕಮ್ಮ ಬರಲ್ಲ ಎಂದು ಪುಟ್ಟ ಹುಡುಗ ಅಮ್ಮನ್ನನ್ನು ಕೇಳುತ್ತಾನೆ. ಆಗ, ದೇವರು ಯಾವಾಗಲೂ ಬರಲ್ಲ. ಸಮಾಜದಲ್ಲಿ ಪಾಪಗಳು ಮೀತಿ ಮೀರಿದಾಗ, ಒಳ್ಳೆಯದರ ಮೇಲೆ ಕೆಟ್ಟದ್ದು ಆವಿಯಾದಾಗ, ಸಮಾಜ ಕುಲಗೆಟ್ಟಾಗ, ಮನುಷ್ಯರು ಮೃಗಗಳಾದಾಗ, ಅವನು ಅವತಾರ ಎತ್ತುತ್ತಾನೆ. ಅವನು ಯಾವಾಗಲೂ ದೇವರಾಗಿಯೇ ಬರಲ್ಲ, ರಾಕ್ಷಸನಾಗಿಯೂ ಬರಬಹುದು" ಎಂದು ನಾಯಕನ ಬಗ್ಗೆ ಪೀಠಿಕೆ ಕಾಣಿಸುತ್ತೆ.
ಚಿಕ್ಕಂದಿನಲ್ಲಿ ತಾಯಿಯನ್ನು ಕಳೆದುಕೊಂಡ ಹುಡುಗ ದೊಡ್ಡವನಾದಾಗ ಪೋಲೀಸ್ ಆಗುತ್ತಾನೆ. ನ್ಯಾಯ ಸಿಗದ ಕಾರಣ ಮುಖವಾಡ ಹಾಕಿಕೊಂಡು ‘ಬಘೀರಾ’ ಗೆಟಪ್‌ನಲ್ಲಿ ವಿಲನ್ ಗಳನ್ನು ಸಾಯಿಸುತ್ತಾನೆ. ಕೊನೆಗೂ ಬಘೀರಾ ಪೊಲೀಸರ ಕೈಗೆ ಸಿಕ್ಕಿಬಿದ್ದಾನೋ ಇಲ್ಲವೋ ಎಂಬುದೇ ಕಥೆಯಂತೆ. "ಸಾವೇ ಎದುರುಗಡೆ ನಿಂತಿದೆ ಭಯ ಆಗ್ತಿಲ್ವಾ? ಎಂದು ಖಳನ ಬಾಯಿಂದ ಮಾತು ಬಂದರೆ, ಅದಕ್ಕೆ ಪ್ರತಿಯಾಗಿ, "ಕನ್ನಡಿಯಲ್ಲಿ ನನ್ನನ್ನು ನಾನು ನೋಡಿಕೊಂಡರೇ ಭಯ ಪಡಲ್ಲ. ಇನ್ನು ನೀನ್ಯಾರೋ" ಡೈಲಾಗ್‌ಗಳು ಖಡಕ್ ಆಗಿವೆ. ಅಕ್ಟೋಬರ್ 31 ರಂದು ದೀಪಾವಳಿ ಸಂದರ್ಭದಲ್ಲಿ ಸಿನಿಮಾವು ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲಿ ರುಕ್ಮಿಣಿ ವಸಂತ್, ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಗರುಡಾ ರಾಮ್, ಸುಧಾರಾಣಿ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.