ಅಮೇಜಾನ್ ಪ್ರೈಮ್ ಓಟಿಟಿ ಯಲ್ಲಿ `ಅಮೃತಮತಿ' ಸಿನಿಮಾ ಬಿಡುಗಡೆ
`ಅಮೃತ ಮತಿ' ಚಿತ್ರವು ಹದಿಮೂರನೇ ಶತಮಾನದ ಖ್ಯಾತ ಕನ್ನಡ ಕವಿ ಜನ್ನನ `ಯಶೋಧರ ಚರಿತೆ' ಕಾವ್ಯ ಪ್ರಸಂಗವನ್ನು ಆಧರಿಸಿ ರೂಪುಗೊಂಡಿದೆ. ಈ ಚಿತ್ರದಲ್ಲಿ ಮೂಲ ಕಥನವನ್ನು ಮರುಸೃಷ್ಟಿ ಮಾಡಿ ನಿರೂಪಿಸಲಾಗಿದೆ.;
ಅಮೃತ ಮತಿ
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ `ಅಮೃತಮತಿ' ಸಿನಿಮಾ ಅಮೆಜಾನ್ ಪ್ರೈಮ್‍ನ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ.
`ಅಮೃತ ಮತಿ' ಚಿತ್ರವು ಹದಿಮೂರನೇ ಶತಮಾನದ ಖ್ಯಾತ ಕನ್ನಡ ಕವಿ ಜನ್ನನ `ಯಶೋಧರ ಚರಿತೆ' ಕಾವ್ಯ ಪ್ರಸಂಗವನ್ನು ಆಧರಿಸಿ ರೂಪುಗೊಂಡಿದೆ. ಈ ಚಿತ್ರದಲ್ಲಿ ಮೂಲ ಕಥನವನ್ನು ಮರುಸೃಷ್ಟಿ ಮಾಡಿ ನಿರೂಪಿಸಲಾಗಿದೆ.
ಬರಗೂರು ರಾಮಚಂದ್ರಪ್ಪ ನಿರ್ದೇಶನದ ಜೊತೆಗೆ ಚಿತ್ರಕತೆ, ಸಂಭಾಷಣೆ ಮತ್ತು ಗೀತರಚನೆ ಮಾಡಿದ್ದಾರೆ. ನಟಿ ಹರಿಪ್ರಿಯಾ `ಅಮೃತಮತಿ'ಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಕಿಶೋರ್ `ಯಶೋಧರ'ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಹಿರಿಯ ನಟ ಸುಂದರರಾಜ್, ಪ್ರಮೀಳಾ ಜೋಷಾಯ್, ತಿಲಕ್, ಅಂಬರೀಶ್ ಸಾರಂಗಿ, ವತ್ಸಲಾ ಮೋಹನ್, ಸುಪ್ರಿಯಾ ರಾವ್ ಮುಂತಾದವರು ತಾರಾಗಣದಲ್ಲಿದ್ದಾರೆ. ಸುರೇಶ್ ಅರಸು ಅವರು ಸಂಕಲನ, ನಾಗರಾಜ್ ಆದವಾನಿಯವರು ಛಾಯಾಗ್ರಹಣ, ಶಮಿತಾ ಮಲ್ನಾಡ್ ಅವರು ಸಂಗೀತ ನಿರ್ದೇಶನ, ತ್ರಿಭುವನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾವನ್ನು ಇಂಚರ ಪುಟ್ಟಣ್ಣ ಪ್ರೊಡಕ್ಷನ್ ಲಾಂಛನದಲ್ಲಿ ಪುಟ್ಟಣ್ಣ ಅವರು ನಿರ್ಮಿಸಿದ್ದಾರೆ.