‘ಪಪ್ಪಿ’: ಮಕ್ಕಳ ಅಭಿನಯ ಮೆಚ್ಚಿ ಸೈಕಲ್ ಗಿಫ್ಟ್‌ ಮಾಡಿದ ರಮ್ಯಾ!

‘ಮನದ ಕಡಲು’ ಚಿತ್ರದ ಹಾಡು ಬಿಡುಗಡೆ ಮಾಡಿದ ನಂತರ ರಮ್ಯಾ ಯಾವೊಂದು ಸಿನಿಮಾ ಸಮಾರಂಭದಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಅವರು ಮತ್ತೊಂದು ಚಿತ್ರತಂಡಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರದಲ್ಲಿ ಮಕ್ಕಳ ಕೆಲಸ ಇಷ್ಟವಾಗಿ ಅವರು ಉಡುಗೊರೆ ನೀಡಿದ್ದಾರೆ.;

Update: 2025-05-04 00:30 GMT

‘ಮನದ ಕಡಲು’ ಚಿತ್ರದ ಹಾಡು ಬಿಡುಗಡೆ ಮಾಡಿದ ನಂತರ ರಮ್ಯಾ ಯಾವೊಂದು ಸಿನಿಮಾ ಸಮಾರಂಭದಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಅವರು ಮತ್ತೊಂದು ಚಿತ್ರತಂಡಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರದಲ್ಲಿ ಮಕ್ಕಳ ಕೆಲಸ ಇಷ್ಟವಾಗಿ ಅವರು ಉಡುಗೊರೆ ನೀಡಿದ್ದಾರೆ.

ಮೇ 01ರಂದು ‘ಪಪ್ಪಿ’ ಎಂಬ ಮಕ್ಕಳ ಚಿತ್ರ ಬಿಡುಗಡೆಯಾಗಿದೆ. ಶ್ವಾನದ ಸುತ್ತ ಸಾಗುವ ಜವಾರಿ ಭಾಷೆಯ ಈ ಚಿತ್ರದ ಟ್ರೇಲರನ್ನು ಮಚ್ಚಿ ಧ್ರುವ ಸರ್ಜಾ ಬೆಂಬಲ ನೀಡಿದ್ದರು. ರಮ್ಯಾ ಸಹ ಚಿತ್ರದ ಟ್ರೇಲರ್‍ ನೋಡಿ ಖುಷಿಯಾಗಿದ್ದಾರೆ. ರಮ್ಯಾ ಶ್ವಾನಗಳನ್ನು ಎಷ್ಟು ಇಷ್ಟಪಡುತ್ತಾರೆ ಎಂದು ಗೊತ್ತಿರುವ ವಿಷಯವೇ. ಶ್ವಾನದ ಕುರಿತಾದ ‘ಪಪ್ಪಿ’ ಚಿತ್ರವನ್ನೂ ರಮ್ಯಾ ನೋಡುವ ಆಸೆ ವ್ಯಕ್ತಪಡಿಸಿದ್ದಾರೆ.

ಅದಕ್ಕೂ ಮೊದಲು ಟ್ರೇಲರ್‍ ನೋಡಿ ಮೆಚ್ಚಿಕೊಂಡಿರುವ ಅವರು, ಮಕ್ಕಳ ನಟನೆಗೆ ಮನಸೋತು ಅವರಿಗೆ ಸೈಕಲ್‌ ಗಿಫ್ಟ್‌ ಮಾಡಿದ್ದಾರೆ. ‘ಪಪ್ಪಿ’ ಸಿನಿಮಾದಲ್ಲಿ ಬಾಲ ಕಲಾವಿದರಾದ ಜಗದೀಶ್ ಕೊಪ್ಪಳ ಮತ್ತು ಆದಿತ್ಯ ಸಿಂಧನೂರು ತಮ್ಮ ಪಾತ್ರಕ್ಕೆ ಅದ್ಭುತವಾಗಿ ಜೀವ ತುಂಬಿದ್ದಾರೆ. ಈ ಮಕ್ಕಳ ನಟನೆ ಇಷ್ಟಪಟ್ಟು ರಮ್ಯಾ ಅವರಿಗೆ ಸೈಕಲ್‌ ಉಡುಗೊರೆಯಾಗಿ ನೀಡಿದ್ದಾರೆ.

ಅಪ್ಪಟ ಉತ್ತರ ಕರ್ನಾಟಕದ ಜವಾರಿ ಭಾಷೆ ಇರುವ ‘ಪಪ್ಪಿ’ ಚಿತ್ರ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ಧ್ರುವ ಸರ್ಜಾ ಅರ್ಪಿಸಿರುವ ಈ ಚಿತ್ರವನ್ನು ಆಯುಷ್‌ ಮಲ್ಲಿ ನಿರ್ದೇಶನ ಮಾಡಿದ್ದಾರೆ. ಹಾಸ್ಯದ ಜೊತೆಗೆ ಗಂಭೀರ ವಿಷಯದ ಮೇಲೆ ಬೆಳಕು ಚೆಲ್ಲುವ ‘ಪಪ್ಪಿ’ ಚಿತ್ರವನ್ನು ಅಂದಪ್ಪ ಸಂಕನೂರು ನಿರ್ಮಿಸಿದ್ದಾರೆ.

‘ಪಪ್ಪಿ’ ಚಿತ್ರದಲ್ಲಿ ಜಗದೀಶ್ ಕೊಪ್ಪಳ, ಆದಿತ್ಯ ಸಿಂಧನೂರು ಜೊತೆಗೆ ಅದೃಷ್ಟ ಸಂಕನೂರು, ಋತ್ವಿಕ್ ಬಳ್ಳಾರಿ, ದುರುಗಪ್ಪ ಕಾಂಬ್ಳಿ, ರೇಣುಕಾ, ಆರಾವ ಲೋಹಿತ್ ನಾಗರಾಜ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶ್ರೀಧರ್ ಕಶ್ಯಪ್ ಮತ್ತು ರವಿ ಬಿಲ್ಲೂರ್ ಸಂಗೀತ ಸಂಯೋಜಿಸಿದ್ದು, ಬಿ. ಸುರೇಶ್‌ ಬಾಬು ಛಾಯಗ್ರಹಣವಿದೆ.

Tags:    

Similar News