ನಟ ನಾಗ ಚೈತನ್ಯ-ಶೋಭಿತಾ ನಿಶ್ಚಿತಾರ್ಥ

ತೆಲುಗು ಸೂಪರ್‌ ಸ್ಟಾರ್‌ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ಇಬ್ಬರೂ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Update: 2024-08-08 11:26 GMT
ನಾಗಾರ್ಜುನ ಅವರೊಂದಿಗೆ ನಾಗ ಚೈತನ್ಯ- ಶೋಭಿತಾ
Click the Play button to listen to article

ತೆಲುಗು ನಟ  ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ಇಬ್ಬರೂ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಾಗ ಚೈತನ್ಯ ತಂದೆ  ಅಕ್ಕಿನೇನಿ ನಾಗಾರ್ಜುನ ಟ್ವೀಟ್ ಮಾಡಿ ಮಗನ ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹಂಚಿಕೊಂಡಿರುವ ನಾಗಾರ್ಜುನ,  "ಇವತ್ತು ಬೆಳಗ್ಗೆ ನನ್ನ ಮಗ ನಾಗಚೈತನ್ಯ ಹಾಗೂ ಶೋಭಿತಾ ದುಲಿಪಾಲ ಎಂಗೇಜ್‌ಮೆಂಟ್ ನಡೆಯಿತು. ಈ ವಿಚಾರವನ್ನು ಹಂಚಿಕೊಳ್ಳಲು ಬಹಳ ಖುಷಿಯಾಗುತ್ತಿದೆ. ಶೋಭಿತಾಳನ್ನು ನಮ್ಮ ಮನೆಗೆ ಸ್ವಾಗತಿಸಲು ಖುಷಿಯಾಗುತ್ತಿದೆ. ಜೋಡಿಗೆ ಶುಭಾಶಯ" ಎಂದು ನಾಗ್ ಪೋಸ್ಟ್‌ ಮಾಡಿದ್ದಾರೆ. 

ಹಿಂದೆ ನಾಗಚೈತನ್ಯ ನಟಿ ಸಮಂತಾ ಅವರನ್ನು 2017ರಲ್ಲಿ ಪ್ರೀತಿಸಿ ಮನೆಯವರಿಗೆ ಒಪ್ಪಿಸಿ ಮದುವೆಯಾಗಿದ್ದರು. ಗೋವಾದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದ್ದರು. ಆದರೆ 4 ವರ್ಷಗಳ ಬಳಿಕ ಪರಸ್ಪರ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಿದ್ದರು. 2021ರ ಅಕ್ಟೋಬರ್​ನಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ದೂರ ಆದರು. ಈಗ ನಾಗ ಚೈತನ್ಯ ಬೇರೆ ನಟಿಯ ಜೊತೆ ಹೊಸ ಬಾಳು ಆರಂಭಿಸುತ್ತಿದ್ದಾರೆ.

ನಾಗ ಚೈತನ್ಯ- ಶೋಭಿತಾ ಕದ್ದು ಮುಚ್ಚಿ ಆಗಾಗ್ಗೆ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದರು. ಇತ್ತೀಚೆಗೆ ಇಬ್ಬರೂ ಸಫಾರಿಗೆ ಹೋಗಿದ್ದ ಫೋಟೊಗಳನ್ನು ಹಂಚಿಕೊಂಡಿದ್ದರು. ಒಂದೇ ಲೊಕೇಶನ್‌ನಲ್ಲಿದ್ದ ಫೋಟೊಗಳನ್ನು ಪೋಸ್ಟ್ ಮಾಡಿದ್ದು ಇಬ್ಬರ ಡೇಟಿಂಗ್ ಬಗ್ಗೆ ಮತ್ತಷ್ಟು ಸುಳಿವು ನೀಡಿತ್ತು. ಇದೀಗ ಅಂತಿಮವಾಗಿ ಇಬ್ಬರೂ ಮದುವೆ ಆಗಲು ಸಿದ್ಧರಾಗಿದ್ದಾರೆ. ಮದುವೆ ಯಾವಾಗ ಎನ್ನುವ ಮಾಹಿತಿ ಇನ್ನಷ್ಟೆ ಹೊರಬರಬೇಕಾಗಿದೆ. 

Tags:    

Similar News