Pallavi Anupallavi| ʻಪಲ್ಲವಿ ಅನು ಪಲ್ಲವಿʼ ಸಿನಿಮಾ ನೆನಪಿಸಿಕೊಂಡ ನಟ ಅನಿಲ್‌ ಕಪೂರ್‌

1983ರಲ್ಲಿ ಬಿಡುಗಡೆಯಾದ ‘ಪಲ್ಲವಿ ಅನು ಪಲ್ಲವಿ’ ಸಿನಿಮಾದಲ್ಲಿ ಅನಿಲ್ ಕಪೂರ್, ಲಕ್ಷ್ಮಿ ಮತ್ತು ಕಿರಣ್ ವೈರಾಲೆ ಮುಖ್ಯ ಭೂಮಿಕೆಯಲ್ಲಿದ್ದರು. ಈ ಸಿನಿಮಾವನ್ನು ಮಣಿರತ್ನಂ ಅವರು ನಿರ್ದೇನ ಮಾಡಿದ್ದರು.;

Update: 2025-02-18 10:19 GMT
ಪಲ್ಲವಿ ಅನುಪಲ್ಲವಿ ಸಿನಿಮಾವನ್ನು ನೆನಪಿಸಿಕೊಂಡ ಅನಿಲ್‌ ಕಪೂರ್‌

ಕನ್ನಡ ಸಿನಿಮಾ ‘ಪಲ್ಲವಿ ಅನು ಪಲ್ಲವಿ’ಗೆ 42 ವರ್ಷ ಪೂರೈಸಿದ್ದು, ಈ ಬಗ್ಗೆ ನಟ ಅನಿಲ್ ಕಪೂರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರದ ಸಣ್ಣ ಕ್ಲಿಪ್ ಶೇರ್​ ಮಾಡಿಕೊಂಡು  ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. 

1983ರಲ್ಲಿ ಬಿಡುಗಡೆಯಾದ ‘ಪಲ್ಲವಿ ಅನು ಪಲ್ಲವಿ’ ಸಿನಿಮಾದಲ್ಲಿ ಅನಿಲ್ ಕಪೂರ್, ಲಕ್ಷ್ಮಿ ಮತ್ತು ಕಿರಣ್ ವೈರಾಲೆ ಮುಖ್ಯ ಭೂಮಿಕೆಯಲ್ಲಿದ್ದರು. ಈ ಸಿನಿಮಾವನ್ನು ಮಣಿರತ್ನಂ ನಿರ್ದೇನ ಮಾಡಿದ್ದರು. ಅವರಿಗೆ ಅತ್ಯುತ್ತಮ ಚಿತ್ರಕಥೆಗಾಗಿ ಮತ್ತು ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಬಾಲು ಮಹೇಂದ್ರ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. 

ಇದೀಗ ನಟ ಅನಿಲ್‌ ಕಪೂರ್‌ ತಮ್ಮ  ಇನ್‌ಸ್ಟಾಗ್ರಾಂ ಖಾತೆಯಲ್ಲಿ 'ಪಲ್ಲವಿ ಅನು ಪಲ್ಲವಿ ಚಿತ್ರದ ಸಣ್ಣ ಕ್ಲಿಪ್ ಅನ್ನು ಹಂಚಿಕೊಂಡು '42 ವರ್ಷ ಕಳೆದಿದೆ ಮತ್ತು ಇಳಯರಾಜ ಸರ್ ಅವರ ಮಧುರ ಗೀತೆಗಳು ಇನ್ನೂ ಶಕ್ತಿಯುತವಾಗಿ ಪ್ರತಿಧ್ವನಿಸುತ್ತಿವೆ. ಪಲ್ಲವಿ ಅನು ಪಲ್ಲವಿ ಚಿತ್ರ 42 ವರ್ಷಗಳನ್ನು ಪೂರೈಸಿದೆ. ಆದರೆ, ಚಿತ್ರದ ಸಂಗೀತವು ಶಾಶ್ವತವಾಗಿ ಉಳಿದಿದೆ!' ಎಂದು ಬರೆದಿದ್ದಾರೆ.

 ಪಲ್ಲವಿ ಅನು ಪಲ್ಲವಿ ಚಿತ್ರವು ಹಲವಾರು ಕಾರಣಗಳಿಗಾಗಿ ವಿಶಿಷ್ಟವಾಗಿದ್ದು, ಈ ಚಿತ್ರದ ಮೂಲಕ ಮಣಿರತ್ನಂ ಅವರು ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ತಮಿಳು ಚಿತ್ರರಂಗದ ಮತ್ತೊಬ್ಬ ದಿಗ್ಗಜ ಬಾಲು ಮಹೇಂದ್ರ ಅವರ ಛಾಯಾಗ್ರಹಣವಿದೆ. ಅಲ್ಲದೆ, ಬಿ ಲೆನಿನ್ ಅವರ ಸಂಕಲನವಿದೆ.  ಈ ಚಿತ್ರಕ್ಕೆ ಇಳಯರಾಜ ಅವರ ಸಂಗೀತ ಸಂಯೋಜನೆ ಮಾಡಿದ್ದರು.

‘ಪಲ್ಲವಿ ಅನು ಪಲ್ಲವಿ’ ಸಿನಿಮಾ ಈಗಲೂ ಅನೇಕರ ಅಚ್ಚುಮೆಚ್ಚಿನ ಸಿನಿಮಾವಾಗಿದೆ. ಅನಿಲ್ ಕಪೂರ್ ಅವರ ವೃತ್ತಿ ಜೀವನದಲ್ಲಿ ಈ ಸಿನಿಮಾ ಮುಖ್ಯ ಎನಿಸಿಕೊಂಡಿದೆ. ಅವರು ನಟಿಸಿದ ಏಕೈಕ ಕನ್ನಡ ಸಿನಿಮಾ ಇದಾಗಿದೆ. 

Tags:    

Similar News