ಜಪಾನ್ ಭಾಷೆಯಲ್ಲಿ ರಿಲೀಸ್ ಆದ ‘777 ಚಾರ್ಲಿʼ

ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿರುವ ಸಿನಿಮಾ ‘777 ಚಾರ್ಲಿ’ ಸಿನಿಮಾ ಜಪಾನ್​ ಭಾಷೆಯಲ್ಲಿ ಡಬ್‌ ಆಗಿ ರಿಲೀಸ್ ಆಗಿದೆ. ಅಲ್ಲಿಯೂ ಸಿನಿಮಾ ಮೆಚ್ಚುಗೆ ಪಡೆದಿದೆ.;

Update: 2024-06-29 12:53 GMT
‘777 ಚಾರ್ಲಿʼ ಜಪಾನ್‌ನಲ್ಲಿ ಬಿಡುಗಡೆಗೊಂಡಿದೆ.
Click the Play button to listen to article

ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿರುವ ಸಿನಿಮಾ ‘777 ಚಾರ್ಲಿ’ ಸಿನಿಮಾ ಜಪಾನ್​ನಲ್ಲಿ ರಿಲೀಸ್ ಆಗಿದೆ. ಅಲ್ಲಿಯ ಭಾಷೆಗೆ ಡಬ್ ಆಗಿ ಚಿತ್ರ ರಿಲೀಸ್ ಆಗಿದೆ. ಅಲ್ಲಿಯೂ ಸಿನಿಮಾ ಮೆಚ್ಚುಗೆ ಪಡೆದಿದೆ.

ಈ ಸಿನಿಮಾ 2022ರ ಜೂನ್ 10ರಂದು ಕರ್ನಾಟಕದಾದ್ಯಂತ ಬಿಡುಗಡೆ ಕಂಡಿತ್ತು. ವಿದೇಶದಲ್ಲೂ ಚಿತ್ರ ಈಗ ಮೆಚ್ಚುಗೆ ಪಡೆಯುತ್ತಿದೆ.

ಭಾರತದ ಅನೇಕ ಸಿನಿಮಾಗಳು ಜಪಾನ್​ನಲ್ಲಿ ರಿಲೀಸ್ ಆಗುತ್ತವೆ. ‘ಕೆಜಿಎಫ್ 2’, ‘ಆರ್​ಆರ್​ಆರ್’ ಮೊದಲಾದ ಸಿನಿಮಾಗಳು ಜಪಾನ್​ನಲ್ಲಿ ಬಿಡುಗಡೆ ಆಗಿ ಮೆಚ್ಚುಗೆ ಪಡೆದಿವೆ. ಈಗ ‘777 ಚಾರ್ಲಿ’ ಸಿನಿಮಾ ಸಮಯ. ಈ ಚಿತ್ರ ಜಪಾನ್ ಭಾಷೆಯಲ್ಲಿ ರಿಲೀಸ್ ಆಗಿದೆ.

ಸಿನಿಮಾ ಜೂನ್ 28ರಂದು ಜಪಾನ್​ನಲ್ಲಿ ರಿಲೀಸ್ ಆಗಿದೆ. ಸಿನಿಮಾ ನೋಡಿದ ಅನೇಕರು ಈ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. ಇದನ್ನು ರಕ್ಷಿತ್ ಶೆಟ್ಟಿ ಅವರು ರೀ-ಟ್ವೀಟ್ ಮಾಡಿಕೊಳ್ಳುತ್ತಿದ್ದಾರೆ. ಜಪಾನ್ ಮಂದಿಗೆ ಸಿನಿಮಾ ತುಂಬಾ ಇಷ್ಟ ಆಗುತ್ತಿದೆ ಎಂದು ಶೆಟ್ಟಿ ಹೇಳಿಕೊಂಡಿದ್ದಾರೆ.

Tags:    

Similar News