69ನೇ ಫಿಲಂಫೇರ್ ಘೋಷಣೆ | ಅತಿ ಹೆಚ್ಚು ಪ್ರಶಸ್ತಿ ಗೆದ್ದ ಕಾಂತಾರ

ಚಿತ್ರರಂಗದಲ್ಲಿಯೇ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದು ಎನಿಸಿರುವ, ಬಹುತೇಕ ಎಲ್ಲಾ ತಾರೆಯರ ಕನಸಾಗಿರುವ ಪ್ರತಿಷ್ಠಿತ ಫಿಲಂ ಫೇರ್ 69ನೇ ಅವಾರ್ಡ್​ ಲಿಸ್ಟ್​ ಬಿಡುಗಡೆಯಾಗಿದೆ.

Update: 2024-07-13 13:40 GMT
ಪ್ರತಿಷ್ಠಿತ ಫಿಲಂ ಫೇರ್ 69ನೇ ಅವಾರ್ಡ್​ ಲಿಸ್ಟ್​ ಬಿಡುಗಡೆಯಾಗಿದೆ.
Click the Play button to listen to article

ಭಾರತೀಯ ಚಿತ್ರರಂಗದಲ್ಲಿಯೇ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದು ಎನಿಸಿರುವ, ಬಹುತೇಕ ಎಲ್ಲಾ ತಾರೆಯರ ಕನಸಾಗಿರುವ ಪ್ರತಿಷ್ಠಿತ ಫಿಲಂ ಫೇರ್ 69ನೇ ಅವಾರ್ಡ್​ ಲಿಸ್ಟ್​ ಬಿಡುಗಡೆಯಾಗಿದೆ.

ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳ ಸಿನಿಮಾಗಳಿಗೆ ಆಯಾ ಭಾಷೆಯ ಸಿನಿಮಾಗಳೊಟ್ಟಿಗೆ ಹೋಲಿಸಿ ನೋಡಿ ಪ್ರಶಸ್ತಿ ಘೋಷಿಸಲಾಗಿದೆ.

ಆನ್​ಲೈನ್ ವೋಟಿಂಗ್ ಹಾಗೂ ವಿಮರ್ಶಕರ‌ ಮೆಚ್ಚುಗೆ ಆಧಾರದಲ್ಲಿ ಈ ಪ್ರಶಸ್ತಿ ನೀಡಲಾಗಿದೆ. ಕನ್ನಡದ ಕೆಲವು ಸಿನಿಮಾಗಳು ಪ್ರಶಸ್ತಿ ಪಡೆದುಕೊಂಡಿದ್ದು, ಹೆಚ್ಚಿನ ಪ್ರಶಸ್ತಿಗಳು ‘ಕಾಂತಾರ’ ಪಾಲಾಗಿವೆ.

ಯಾವ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದೆ ಎನ್ನುವ ಫುಲ್​ ಡಿಟೇಲ್ಸ್​ ಇಲ್ಲಿದೆ;

* ಅತ್ಯುತ್ತಮ ನಟ- ರಿಷಬ್ ಶೆಟ್ಟಿ (ಕಾಂತಾರ)

* ಅತ್ಯುತ್ತಮ ನಟಿ- ಚೈತ್ರಾ ಆಚಾರ್ (ತಲೆ ದಂಡ)

* ಅತ್ಯುತ್ತಮ ಸಿನಿಮಾ- (ಕಾಂತಾರ)

* ಅತ್ಯುತ್ತಮ ನಟಿ- ವಿಮರ್ಶಕರ ಆಯ್ಕೆ- ಸಪ್ತಮಿ ಗೌಡ (ಕಾಂತಾರ)

* ಅತ್ಯುತ್ತಮ ಪೋಷಕ ನಟ- ಅಚ್ಯುತ್ ಕುಮಾರ್ (ಕಾಂತಾರ)

* ಅತ್ಯುತ್ತಮ ಹಿನ್ನೆಲೆ ಗಾಯಕ- ವಿಘ್ನೇಶ್ (ವರಾಹ ರೂಪಂ-ಕಾಂತಾರ)

* ಅತ್ಯುತ್ತಮ ಪೋಷಕ ನಟಿ- ಮಂಗಳ ಎನ್ (ತಲೆದಂಡ)

* ಅತ್ಯುತ್ತಮ ಸಿನಿಮಾ- ವಿಮರ್ಶಕರ ಆಯ್ಕೆ (ಧರಣಿ ಮಂಡಲ ಮಧ್ಯದೊಳಗೆ)

* ಅತ್ಯುತ್ತಮ ನಿರ್ದೇಶಕ- ಕಿರಣ್ ರಾಜ್ (777 ಚಾರ್ಲಿ)

* ಅತ್ಯುತ್ತಮ ನಟ- ವಿಮರ್ಶಕರ ಆಯ್ಕೆ- ನವೀನ್ ಶಂಕರ್ (ಧರಣಿ ಮಂಡಲ ಮಧ್ಯದೊಳಗೆ)

* ಅತ್ಯುತ್ತಮ ಸಂಗೀತ- ಅಜನೀಶ್ ಲೋಕನಾಥ್ (ಕಾಂತಾರ)

* ಅತ್ಯುತ್ತಮ ಗೀತ ಸಾಹಿತ್ಯ- ವಿ ನಾಗೇಂದ್ರ ಪ್ರಸಾದ್ (ಬೆಳಕಿನ ಕವಿತೆ-ಬನಾರಸ್)

* ಅತ್ಯುತ್ತಮ ಹಿನ್ನೆಲೆ ಗಾಯಕಿ- ಸುನಿಧಿ ಚೌಹಾಣ್ (ರಾ ರಾ ರಕ್ಕಮ್ಮ-ವಿಕ್ರಾಂತ್​ರೋಣ)

ಕಾಂತಾರ ಚಿತ್ರದಲ್ಲಿನ ವರಾಹ ರೂಪಂಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಯೂ ಸಿಕ್ಕಿದೆ. ವಿಘ್ನೇಶ್ ಅವರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಮಾತ್ರವಲ್ಲದೇ, ಅತ್ಯುತ್ತಮ ಸಂಗೀತ ಇದೇ ಚಿತ್ರಕ್ಕಾಗಿ ಅಜನೀಶ್ ಲೋಕನಾಥ್ ಅವರ ಪಾಲಾಗಿದೆ.

Tags:    

Similar News