2020ನೇ ಸಾಲಿನ ಅತ್ಯುತ್ತಮ ನಟ-ನಟಿ ಪ್ರಜ್ವಲ್‍ ದೇವರಾಜ್, ಅಕ್ಷತಾ; ರಾಜ್ಯ ಪ್ರಶಸ್ತಿ ಪ್ರಕಟ

‘ಜಂಟಲ್‍ಮ್ಯಾನ್‍’ ಚಿತ್ರದ ಅಭಿನಯಕ್ಕಾಗಿ ಪ್ರಜ್ವಲ್‍ ದೇವರಾಜ್‍ ಮತ್ತು ‘ಪಿಂಕಿ ಎಲ್ಲಿ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅಕ್ಷತಾ ಪಾಂಡವಪುರ ಅವರಿಗೆ 2020ನೇ ಸಾಲಿನ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಸಿಕ್ಕಿದೆ. ತೀರ್ಪುಗಾರರ ವಿಶೇಷ ಪ್ರಶಸ್ತಿ ನಟ ಸಂಚಾರಿ ವಿಜಯ್‍ ಅವರಿಗೆ ನಟನೆಗಾಗಿ ಮರಣೋತ್ತರವಾಗಿ ಲಭಿಸಿದೆ. ಉಳಿದೆ ಪ್ರಶಸ್ತಿಗಳ ವಿವರ ಈ ಕೆಳಗಿದೆ...;

Update: 2025-03-11 15:43 GMT

‘ಜಂಟಲ್‍ಮ್ಯಾನ್‍’ ಚಿತ್ರದ ಅಭಿನಯಕ್ಕಾಗಿ ಪ್ರಜ್ವಲ್‍ ದೇವರಾಜ್‍ ಮತ್ತು ‘ಪಿಂಕಿ ಎಲ್ಲಿ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅಕ್ಷತಾ ಪಾಂಡವಪುರ ಅವರಿಗೆ 2020ನೇ ಸಾಲಿನ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಸಿಕ್ಕಿದೆ. ಪೃಥ್ವಿ ಕೊಣನೂರು ನಿರ್ದೇಶನದ ‘ಪಿಂಕಿ ಎಲ್ಲಿ’ ಚಿತ್ರವು ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದರೆ, ‘ವರ್ಣಪಟಲ’ ಮತ್ತು ‘ಹರಿವ ನದಿಗೆ ಮೈಯೆಲ್ಲಾ ಕಾಲು’ ಚಿತ್ರಗಳು ಅತ್ಯುತ್ತಮ ದ್ವಿತೀಯ ಮತ್ತು ತೃತೀಯ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿವೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಿ.ಎಸ್‍. ಲಿಂಗದೇವರು ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿಯು 2020ನೇ ಸಾಲಿನಲ್ಲಿ ಒಟ್ಟು 66 ಚಿತ್ರಗಳನ್ನು ವೀಕ್ಷಿಸಿ, ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದೆ. ಈ ಸಮಿತಿಯಲ್ಲಿ ಬಿ.ಎಸ್‍. ಲಿಂಗದೇವರು ಜೊತೆಗೆ ಪದ್ಮಾ ಶಿವಮೊಗ್ಗ, ಉಮೇಶ್ ನಾಯಕ್, ಡಿ.ಆರ್. ಸಂಪತ್, ಪದ್ಮಾ ವಾಸಂತಿ, ಮಂಜುನಾಥ್ ಆರ್, ಐವಾನ್ ಡಿ ಸಿಲ್ವಾ ಮತ್ತು ಗುರುರಾಜ್ ಅಲ್ಲದೆ, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರು ನವೀನ್ ಆರ್.ಸಿ ಈ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದರು.

ಮೊದಲ ಮೂರು ಅತ್ಯುತ್ತಮ ಚಿತ್ರಗಳ ಜೊತೆಗೆ ‘ಗಿಳಿಯು ಪಂಜರದೊಳಿಲ್ಲ’ ಮತ್ತು ‘ಈ ಮಣ್ಣು’ ವಿಶೇಷ ಸಾಮಾಜಿಕ ಕಾಳಜಿಯ ಚಿತ್ರಕ್ಕೆ ಆಯ್ಕೆಯಾದರೆ, ‘ಫೋರ್ ವಾಲ್ಸ್’ ಚಿತ್ರವು ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರವಾಗಿದೆ. ‘ಪದಕ’ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಯನ್ನು ಪಡೆದರೆ, ತುಳು ಚಿತ್ರ ‘ಜೀಟಿಗೆ’ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ವಿಶೇಷವೆಂದರೆ, ಈ ವರ್ಷ ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ನಾಲ್ವರಿಗೆ ನೀಡಲಾಗಿದೆ. ನಟ ಸಂಚಾರಿ ವಿಜಯ್‍ ಅವರಿಗೆ ನಟನೆಗಾಗಿ ಮರಣೋತ್ತರವಾಗಿ ಪ್ರಶಸ್ತಿ ನೀಡಿದರೆ, ‘ಸಾರವಜ್ರ’ದ ವಸ್ತ್ರ ವಿನ್ಯಾಸಕ್ಕಾಗಿ ಶ್ರೀವಲ್ಲಿ, ‘ತಲೆದಂಡ’ ಚಿತ್ರದ ಪ್ರಸಾಧನಕ್ಕಾಗಿ ರಮೇಶ್‍ ಬಾಬು ಮತ್ತು ಅಮೃತ್‍ ಅಪಾರ್ಟ್‍ಮೆಂಟ್ಸ್ ಚಿತ್ರದ ಶಬ್ಧಗ್ರಹಣಕ್ಕಾಗಿ ವಿ.ಜಿ. ರಾಜನ್ ಅವರಿಗೆ ನೀಡಲಾಗಿದೆ. ಜೊತೆಗೆ ‘ಅರಬ್ಬೀ’ ಚಿತ್ರಕ್ಕಾಗಿ ವಿಶ್ವಾಸ್‍ ಕೆ.ಎಸ್ ಅವರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ (ವಿಶೇಷಚೇತನ ಪ್ರಶಸ್ತಿ - ಪ್ರಮಾಣ ಪತ್ರ)ಯನ್ನು ನೀಡಲಾಗಿದೆ.

ಪ್ರಶಸ್ತಿ ಪಟ್ಟಿ ಈ ಕೆಳಕಂಡಂತೆ ಇದೆ:

ಅತ್ಯುತ್ತಮ ಅತ್ಯುತ್ತಮ ಚಿತ್ರ: ಪಿಂಕಿ ಎಲ್ಲಿ

ದ್ವಿತೀಯ ಅತ್ಯುತ್ತಮ ಚಿತ್ರ: ವರ್ಣಪಟಲ

ಮೂರನೇ ಅತ್ಯುತ್ತಮ ಚಿತ್ರ: ಹರಿವ ನದಿಗೆ ಮೈಯೆಲ್ಲಾ ಕಾಲು

ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಗಿಳಿಯು ಪಂಜರದೊಳಿಲ್ಲ ಮತ್ತು ಈ ಮಣ್ಣು

ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಫೋರ್ ವಾಲ್ಸ್

ಅತ್ಯುತ್ತಮ ಮಕ್ಕಳ ಚಿತ್ರ: ಪದಕ

ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ನೀಲಿ ಹಕ್ಕಿ (ಗಣೇಶ್‍ ಹೆಗ್ಡೆ)

ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ಜೀಟಿಗೆ (ತುಳು ಭಾಷೆ)

ಅತ್ಯುತ್ತಮ ನಟ: ಪ್ರಜ್ವಲ್‍ ದೇವರಾಜ್‍

ಅತ್ಯುತ್ತಮ ನಟಿ: ಅಕ್ಷತಾ ಪಾಂಡವಪುರ

ಅತ್ಯುತ್ತಮ ಪೋಷಕ ನಟ: ರಮೇಶ್‍ ಪಂಡಿತ್‍ (ತಲೆದಂಡ)

ಅತ್ಯುತ್ತಮ ಪೋಷಕ ನಟಿ: ಮಂಜುಳಮ್ಮ (ದಂತ ಪುರಾಣ)

ಅತ್ಯುತ್ತಮ ಕಥೆ: ಶಶಿಕಾಂತ್‍ ಗಟ್ಟಿ (ರಾಂಚಿ)

ಅತ್ಯುತ್ತಮ ಚಿತ್ರಕಥೆ: ರಾಘವೇಂದ್ರ ಕುಮಾರ್ (ಚಾಂದಿನಿ ಬಾರ್)

ಅತ್ಯುತ್ತಮ ಸಂಭಾಷಣೆ: ವೀರಪ್ಪ ಮರಳವಾಡಿ (ಹೂವಿನ ಹಾರ)

ಅತ್ಯುತ್ತಮ ಛಾಯಾಗ್ರಹಣ: ಅಶೋಕ್ ಕಶ್ಯಪ್‍ (ತಲೆದಂಡ)

ಅತ್ಯುತ್ತಮ ಸಂಗೀತ ನಿರ್ದೇಶನ: ಗಗನ್‍ ಬಡೇರಿಯಾ (ಮಾಲ್ಗುಡಿ ಡೇಸ್‍)

ಅತ್ಯುತ್ತಮ ಸಂಕಲನ: ನಾಗೇಂದ್ರ ಕೆ. ಉಜ್‍ಜರಿ (ಆ್ಯಕ್ಟ್ 1978)

ಅತ್ಯುತ್ತಮ ಬಾಲನಟ: ಅಹಿಲ್‍ ಅನ್ಸಾರಿ (ದಂತ ಪುರಾಣ)

ಅತ್ಯುತ್ತಮ ಬಾಲನಟಿ: ಬೇಬಿ ಹಿತೈಷಿ ಪೂಜಾರ್ (ಪಾರು)

ಅತ್ಯುತ್ತಮ ಕಲಾ ನಿರ್ದೇಶನ: ಗುಣಶೇಖರ್ (ಬಿಚ್ಚುಗತ್ತಿ)

ಅತ್ಯುತ್ತಮ ಗೀತ ರಚನೆ: ಗಾರ್ಗಿ ಕಾರೆಹಕ್ಲು (‘ಪರ್ಜನ್ಯ’ ಚಿತ್ರದ ‘ಮೌನವು ಮಾತಾಗಿದೆ’) ಮತ್ತು ಸಚಿನ್‍ ಶೆಟ್ಟಿ ಕುಂಬ್ಳೆ (‘ಈ ಮಣ್ಣು’ ಚಿತ್ರದ ‘ದಾರಿಯೊಂದು ಹುಡುಕುತ್ತಿದೆ’

ಅತ್ಯುತ್ತಮ ಹಿನ್ನೆಲೆ ಗಾಯಕ: ಅನಿರುದ್ಧ್ ಶಾಸ್ತ್ರಿ (ಆಚಾರ್ಯ ಶ್ರೀ ಶಂಕರ)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಅರುಂಧತಿ ವಸಿಷ್ಠ (ದಂತ ಪುರಾಣ)

ತೀರ್ಪುಗಾರರ ವಿಶೇಷ ಪ್ರಶಸ್ತಿ: ಸಂಚಾರಿ ವಿಜಯ್‍ (ನಟನೆಗಾಗಿ - ಮರಣೋತ್ತರವಾಗಿ), ಶ್ರೀ ವಲ್ಲಿ (ವಸ್ತ್ರ ವಿನ್ಯಾಸ – ‘ಸಾರವಜ್ರ’), ರಮೇಶ್‍ ಬಾಬು (ಪ್ರಸಾಧನ – ‘ತಲೆದಂಡ’) ಮತ್ತು ವಿ.ಜಿ. ರಾಜನ್ (ಶಬ್ಧಗ್ರಹಣ – ಅಮೃತ್‍ ಅಪಾರ್ಟ್‍ಮೆಂಟ್ಸ್)

ತೀರ್ಪುಗಾರರ ವಿಶೇಷ ಪ್ರಶಸ್ತಿ (ಪ್ರಮಾಣ ಪತ್ರ): ವಿಶ್ವಾಸ್‍ ಕೆ.ಎಸ್ (ವಿಶೇಷಚೇತನ ನಟ – ಅರಬ್ಬೀ)

Tags:    

Similar News