ಪಿಂಚಣಿ ಹೆಚ್ಚಳ, ವಿಶಾಖಪಟ್ಟಣಕ್ಕೆ ರಾಜಧಾನಿ ಸ್ಥಾನ: ವೈಎಸ್‌ಆರ್‌ಸಿಪಿ ಭರವಸೆ

Update: 2024-04-27 13:14 GMT

ಅಮರಾವತಿ, ಏಪ್ರಿಲ್‌ 27- ಪಿಂಚಣಿಗಳನ್ನು ಮಾಸಿಕ 3,000 ರೂ.ನಿಂದ 3,500 ರೂ.ಗೆ ಹೆಚ್ಚಳ ಮತ್ತು ವಿಶಾಖಪಟ್ಟಣವನ್ನು ಕಾರ್ಯಕಾರಿ ರಾಜಧಾನಿಯಾಗಿ ಮಾಡುವುದಾಗಿ ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ. 

ಪಿಂಚಣಿಗಳನ್ನು 2028 ರ ಜನವರಿಯಿಂದ 3,250 ರೂ. ಮತ್ತು 2029 ರ ಜನವರಿಯಿಂದ 3,500 ರೂ.ಗೆ ಏರಿಸಲಾಗುವುದು. 2024 ರಲ್ಲಿ ಸರ್ಕಾರ ರಚಿಸಿದ ತಕ್ಷಣ, ವಿಶಾಖಪಟ್ಟಣವನ್ನು ಕಾರ್ಯಕಾರಿ ರಾಜಧಾನಿಯನ್ನಾಗಿ ಮಾಡಿ, ರಾಜ್ಯದ ಬೆಳವಣಿಗೆಯ ಎಂಜಿನ್ ಆಗಿ ಅಭಿವೃದ್ಧಿಪಡಿಸಲಾಗುವುದುʼ ಎಂದು ಪತ್ರಿಕಾಗೋಷ್ಠಿಯನ್ನು ಶನಿವಾರ ಹೇಳಿದರು. 

ʻಅಮರಾವತಿಯನ್ನು ಶಾಸಕಾಂಗ ರಾಜಧಾನಿ ಮತ್ತು ಕರ್ನೂಲನ್ನು ನ್ಯಾಯಾಂಗ ರಾಜಧಾನಿಯಾಗಿ ಅಭಿವೃದ್ಧಿಪಡಿಸಲಾಗುವುದುʼ ಎಂದು ಹೇಳಿದರು. 

ಪ್ರಣಾಳಿಕೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಪರಿಚಯಿಸಿದ ಎಲ್ಲಾ ಯೋಜನೆಗಳನ್ನು ಮುಂದುವರಿಸಲಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ತಾಯಂದಿರಿಗೆ ಆರ್ಥಿಕ ನೆರವು ನೀಡುವ ಯೋಜನೆಯಾದ ಅಮ್ಮ ವೋಡಿಗೆ ನೆರವು ವಾರ್ಷಿಕ 15,000 ರೂ.ನಿಂದ 17,000 ರೂ.ಗೆ ಹೆಚ್ಚಿಸಲಾಗಿದೆ.  ರಾಜಕೀಯ ಪಕ್ಷವೊಂದರ ಪ್ರಣಾಳಿಕೆಯು ಅವರ ಸರ್ಕಾರದಲ್ಲಿ ಮಾತ್ರ ತನ್ನ ನಿಜವಾದ ಅರ್ಥವನ್ನು ಕಂಡುಕೊಂಡಿದೆ. ಅದನ್ನು ಬೈಬಲ್, ಕುರಾನ್ ಮತ್ತು ಭಗವದ್ಗೀತೆಯಂತಹ ಪವಿತ್ರ ಪುಸ್ತಕವೆಂದು ಪರಿಗಣಿಸಿದೆ ಎಂದು ಜಗನ್‌ ಹೇಳಿದರು.

ಆಂಧ್ರಪ್ರದೇಶದಲ್ಲಿ ಲೋಕಸಭೆ ಚುನಾವಣೆಯೊಂದಿಗೆ ಏಕಕಾಲದಲ್ಲಿ ವಿಧಾನಸಭೆ ಚುನಾವಣೆ ಮೇ 13 ರಂದು ನಡೆಯಲಿದೆ .

Tags:    

Similar News