ಐಪಿಎಲ್ 2026 ಹರಾಜು: ದಾಖಲೆ ಬೆಲೆಗೆ ಮಾರಾಟವಾದ ಕ್ಯಾಮರೂನ್ ಗ್ರೀನ್
ಒಟ್ಟಾರೆ ಐಪಿಎಲ್ ಇತಿಹಾಸವನ್ನು ಗಮನಿಸುವುದಾದರೆ, ಅತಿ ಹೆಚ್ಚು ಬೆಲೆ ಪಡೆದ ಆಟಗಾರರ ಪಟ್ಟಿಯಲ್ಲಿ ಗ್ರೀನ್ ಮೂರನೇ ಸ್ಥಾನದಲ್ಲಿದ್ದಾರೆ.
ಮಂಗಳವಾರ (ಡಿಸೆಂಬರ್ 16) ನಡೆದ ಬಹುನಿರೀಕ್ಷಿತ ಐಪಿಎಲ್ 2026ರ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಐತಿಹಾಸಿಕ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಗ್ರೀನ್ ಅವರನ್ನು ಬರೋಬ್ಬರಿ 25.20 ಕೋಟಿ ರೂ. ನೀಡಿ ಖರೀದಿಸಿದೆ.
ಈ ಮೂಲಕ ಕ್ಯಾಮರೂನ್ ಗ್ರೀನ್ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾದ 'ವಿದೇಶಿ ಆಟಗಾರ' ಎಂಬ ದಾಖಲೆ ಬರೆದಿದ್ದಾರೆ. ಈ ಹಿಂದೆ ಮಿಚೆಲ್ ಸ್ಟಾರ್ಕ್ (24.75 ಕೋಟಿ ರೂ.) ಹೆಸರಿನಲ್ಲಿದ್ದ ದಾಖಲೆಯನ್ನು ಗ್ರೀನ್ ಮುರಿದಿದ್ದಾರೆ.
ಒಟ್ಟಾರೆ ಐಪಿಎಲ್ ಇತಿಹಾಸವನ್ನು ಗಮನಿಸುವುದಾದರೆ, ಅತಿ ಹೆಚ್ಚು ಬೆಲೆ ಪಡೆದ ಆಟಗಾರರ ಪಟ್ಟಿಯಲ್ಲಿ ಗ್ರೀನ್ ಮೂರನೇ ಸ್ಥಾನದಲ್ಲಿದ್ದಾರೆ. ರಿಷಬ್ ಪಂತ್ (27 ಕೋಟಿ ರೂ.) ಮತ್ತು ಶ್ರೇಯಸ್ ಅಯ್ಯರ್ (26.75 ಕೋಟಿ ರೂ.) ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ.ಐಪಿಎಲ್ 2026 ಹರಾಜಿನಲ್ಲಿ ಮಾರಾಟವಾದ ಪ್ರಮುಖ ಆಟಗಾರರ ಪಟ್ಟಿ:
ಗಮನಿಸಿ: ಹರಾಜು ಪ್ರಕ್ರಿಯೆ ಇನ್ನೂ ಮುಂದುವರಿದಿದ್ದು, ಆಟಗಾರರು ಮಾರಾಟವಾದಂತೆ ಈ ಪಟ್ಟಿಯನ್ನು ನವೀಕರಿಸಲಾಗುತ್ತದೆ)
* ಕ್ಯಾಮರೂನ್ ಗ್ರೀನ್: ಕೋಲ್ಕತ್ತಾ ನೈಟ್ ರೈಡರ್ಸ್ (KKR) - 25.20 ಕೋಟಿ ರೂ.
* ಮತೀಶ ಪತಿರಾನ: ಕೋಲ್ಕತ್ತಾ ನೈಟ್ ರೈಡರ್ಸ್ (KKR) - 18 ಕೋಟಿ ರೂ.
* ರವಿ ಬಿಷ್ಣೋಯಿ: ರಾಜಸ್ಥಾನ್ ರಾಯಲ್ಸ್ (RR) - 7.20 ಕೋಟಿ ರೂ.
* ವೆಂಕಟೇಶ್ ಅಯ್ಯರ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) - 7 ಕೋಟಿ ರೂ.
* ಡೇವಿಡ್ ಮಿಲ್ಲರ್: ಡೆಲ್ಲಿ ಕ್ಯಾಪಿಟಲ್ಸ್ (DC) - 2 ಕೋಟಿ ರೂ.
* ವನಿಂದು ಹಸರಂಗ: ಲಕ್ನೋ ಸೂಪರ್ ಜೈಂಟ್ಸ್ (LSG) - 2 ಕೋಟಿ ರೂ.
* ಬೆನ್ ಡಕೆಟ್: ಡೆಲ್ಲಿ ಕ್ಯಾಪಿಟಲ್ಸ್ (DC) - 2 ಕೋಟಿ ರೂ.
* ಫಿನ್ ಅಲೆನ್: ಕೋಲ್ಕತ್ತಾ ನೈಟ್ ರೈಡರ್ಸ್ (KKR) - 2 ಕೋಟಿ ರೂ.
* ಜಾಕೋಬ್ ಡಫಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) - 2 ಕೋಟಿ ರೂ.
* ಆನ್ರಿಚ್ ನಾರ್ಟ್ಜೆ: ಲಕ್ನೋ ಸೂಪರ್ ಜೈಂಟ್ಸ್ (LSG) - 2 ಕೋಟಿ ರೂ.
* ಅಕೀಲ್ ಹೊಸೈನ್: ಚೆನ್ನೈ ಸೂಪರ್ ಕಿಂಗ್ಸ್ (CSK) - 2 ಕೋಟಿ ರೂ.
* ಕ್ವಿಂಟನ್ ಡಿ ಕಾಕ್: ಮುಂಬೈ ಇಂಡಿಯನ್ಸ್ (MI) - 1 ಕೋಟಿ ರೂ.