ಇಂದಿರಾ ಗಾಂಧಿ ಭಾರತ ಮಾತೆ' ಎಂಬ ಹೇಳಿಕೆಗೆ ಸಚಿವ ಸುರೇಶ್ ಗೋಪಿ ಸ್ಪಷ್ಟನೆ

ಕರುಣಾಕರನ್ ಮತ್ತು ಮಾರ್ಕ್ಸ್ವಾದಿ ಹಿರಿಯ ನಾಯಕ ಇ ಕೆ ನಾಯನಾರ್ ನನ್ನ "ರಾಜಕೀಯ ಗುರುಗಳು" ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಹೇಳಿದ್ದಾರೆ.

Update: 2024-06-16 15:05 GMT
ಕೇಂದ್ರ ಸಚಿವ, ನಟ ಸುರೇಶ್‌ ಸುರೇಶ್ ಗೋಪಿ
Click the Play button to listen to article

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಭಾರತ ಮಾತೆ ಎಂದು ಉಲ್ಲೇಖಿಸಿರುವ ತಮ್ಮ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿವೆ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಭಾನುವಾರ (ಜೂ.16) ಸ್ಪಷ್ಟಪಡಿಸಿದ್ದಾರೆ. ಅವರು ದೇಶದ ಕಾಂಗ್ರೆಸ್ ಪಕ್ಷದ ಮಾತೃ ಸಮಾನ ಎಂರ್ಥದಲ್ಲಿ ತಾವು ಹೇಳಿರುವುದಾಗಿ ಹೇಳಿದ್ದಾರೆ. 

ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, "ಭಾಷೆಯ ಸಾಂದರ್ಭಿಕ ಅರ್ಥ" ಅರ್ಥವಾಗುತ್ತಿಲ್ಲವೇ ಎಂದು ಸುದ್ದಿಗಾರರನ್ನು ಕೇಳಿದರು. ನಾನು ಹೃದಯದಿಂದ ಮಾತನಾಡುವ ವ್ಯಕ್ತಿ. ನಾನು ಇಂದಿರಾಗಾಂಧಿ ಬಗ್ಗೆ ಈ ರೀತಿ ಹೇಳುವುದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ನಾನು ದೃಢವಾಗಿ ನಂಬುತ್ತೇನೆ ಎಂದು ಅವರು ಹೇಳಿದ್ದಾರೆ.

'ನನ್ನ ಹೃದಯದಿಂದ'

"ನಾನೇನು ಹೇಳೋದು? ಕಾಂಗ್ರೆಸ್ಸಿನ ಮಟ್ಟಿಗೆ... ಯಾರಾದ್ರೂ ಇಷ್ಟ ಪಡಲಿ, ಇಲ್ಲದಿರಲಿ... ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ತಂದೆ ಕೆ ಕರುಣಾಕರನ್. ಭಾರತದಲ್ಲಿ ಅದರ ತಾಯಿ ಇಂದಿರಾ ಗಾಂಧಿ. ನಾನು ಇದನ್ನು ಹೇಳಿದ್ದು. ನನ್ನ ಹೃದಯದಿಂದ ಹೇಳಿದ್ದು" ಎಂದು ಸುರೇಶ್ ಗೋಪಿ ಹೇಳಿದ್ದಾರೆ.

"ಸ್ವಾತಂತ್ರ್ಯದ ನಂತರ ಮತ್ತು ಅವರ ಮರಣದವರೆಗೂ ಇಂದಿರಾ ಗಾಂಧಿ ಅವರು ಭಾರತದ ನಿಜವಾದ ವಾಸ್ತುಶಿಲ್ಪಿ. ನಾನು ಹೇಗಾದರೂ ಈ ಗುಣಲಕ್ಷಣಗಳನ್ನು ಹೊಂದಬೇಕಾಗಿದೆ. ನಾನು ರಾಜಕೀಯ ಪ್ರತಿಸ್ಪರ್ಧಿ ಪಕ್ಷಕ್ಕೆ ಸೇರಿದ ಮಾತ್ರಕ್ಕಾಗಿ ದೇಶಕ್ಕಾಗಿ ಪ್ರಾಮಾಣಿಕವಾಗಿ ದುಡಿದ ವ್ಯಕ್ತಿಯನ್ನು ನಾನು ಮರೆಯಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

ಶನಿವಾರ ತ್ರಿಶೂರ್‌ನಲ್ಲಿ ಕಾಂಗ್ರೆಸ್‌ನ ದಿವಂಗತ ಮುಖ್ಯಮಂತ್ರಿ ಕೆ ಕರುಣಾಕರನ್ ಅವರ ಸ್ಮಾರಕಕ್ಕೆ ಭೇಟಿ ನೀಡಿದ್ದ ಗೋಪಿ ಅವರು ಇಂದಿರಾ ಗಾಂಧಿ ಅವರನ್ನು "ಭಾರತದ ಮಾತೆ" ಮತ್ತು ಕರುಣಾಕರನ್ ಅವರನ್ನು "ಧೈರ್ಯಶಾಲಿ ಆಡಳಿತಗಾರ" ಎಂದು ಬಣ್ಣಿಸಿದ್ದರು.

'ರಾಜಕೀಯ ಗುರುಗಳು'

ಕರುಣಾಕರನ್ ಮತ್ತು ಮಾರ್ಕ್ಸ್‌ವಾದಿ ಹಿರಿಯ ಇಕೆ ನಾಯನಾರ್ ಅವರನ್ನು ತಮ್ಮ "ರಾಜಕೀಯ ಗುರುಗಳು" ಎಂದು ಪರಿಗಣಿಸುವುದಾಗಿ ಸುರೇಶ್‌ ಗೋಪಿ ತಿಳಿಸಿದ್ದು, ಇಂದಿರಾ ಗಾಂಧಿಯನ್ನು  ಭಾರತದ ಮಾತೆ , ಕರುಣಾಕರನ್  "ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪಿತಾಮಹ" ಎಂದು ಹೇಳಿದ್ದರು.

ಕರುಣಾಕರನ್ ಅವರನ್ನು ಕೇರಳದಲ್ಲಿ ಕಾಂಗ್ರೆಸ್‌ನ "ಪಿತಾಮಹ" ಎಂದು ಬಣ್ಣಿಸಿರುವುದು ರಾಜ್ಯದ ಹಳೆಯ ಪಕ್ಷದ ಸ್ಥಾಪಕರು ಅಥವಾ ಸಹ ಸಂಸ್ಥಾಪಕರಿಗೆ ಅಗೌರವವಲ್ಲ ಎಂದು ಅವರು ವಿವರಿಸಿದರು.

ಇತ್ತೀಚೆಗಷ್ಟೇ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಗೋಪಿ ಗೆಲುವು ಸಾಧಿಸಿದ್ದು, ಕೇರಳದಲ್ಲಿ ಬಿಜೆಪಿಯ ಚುನಾವಣಾ ಖಾತೆಯನ್ನು ತೆರೆದಿದ್ದಾರೆ. ತ್ರಿಶೂರ್ ಲೋಕಸಭೆ ಚುನಾವಣೆಗೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಸಿಪಿಐನ ಪ್ರಮುಖ ಅಭ್ಯರ್ಥಿಗಳು ಕಣಕ್ಕಿಳಿದ್ದು, ಸಮರ ಸಾಧಿಸಿದ್ದರು. 

Tags:    

Similar News