ದೆಹಲಿ ಕಾಂಗ್ರೆಸ್‌ಗೆ ಮತ್ತೊಂದು ಆಘಾತ: ಮಾಜಿ ಶಾಸಕರ ರಾಜೀನಾಮೆ

Update: 2024-05-01 06:57 GMT

ನವದೆಹಲಿ, ಮೇ 1- ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ ಅವರು ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಮಾಜಿ ಶಾಸಕರಾದ ನೀರಜ್ ಬಸೋಯಾ ಮತ್ತು ನಸೀಬ್ ಸಿಂಗ್ ಅವರು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. 

ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪ್ರತ್ಯೇಕ ಪತ್ರದಲ್ಲಿ ರಾಜೀನಾಮೆಗೆ ಕಾಂಗ್ರೆಸ್ ಮತ್ತು ಎಎಪಿ ಮೈತ್ರಿಯನ್ನು ದೂಷಿಸಿದ್ದಾರೆ. 

ಬಸೋಯ ಅವರು ತಮ್ಮ ಪತ್ರದಲ್ಲಿ, ʻಮೈತ್ರಿ ದೆಹಲಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರತಿದಿನವೂ ಅಪಖ್ಯಾತಿ ಮತ್ತು ಮುಜುಗರ ತರುತ್ತಿದೆ ಎಂದು ನಮ್ರವಾಗಿ ತಿಳಿಸುತ್ತೇನೆ. ಸ್ವಾಭಿಮಾನಿ ಪಕ್ಷದ ನಾಯಕನಾಗಿ ನಾನು ಅವರೊಂದಿಗೆ ಸಂಬಂಧವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ನಂಬುತ್ತೇನೆʼ ಎಂದು ಬರೆದಿದ್ದಾರೆ. ಕಾಂಗ್ರೆಸ್‌ನ ದೆಹಲಿ ಘಟಕದ ಮುಖ್ಯಸ್ಥ ಲವ್ಲಿ ಅವರು ತಮ್ಮ ರಾಜೀನಾಮೆಗೆ ಎಎಪಿ ಜೊತೆ ಮೈತ್ರಿ ಒಂದು ಕಾರಣ ಎಂದು ಹೇಳಿದ್ದರು.

ದೆಹಲಿ ಘಟಕದ ಹಂಗಾಮಿ ಅಧ್ಯಕ್ಷರಾಗಿ ಮಾಜಿ ಶಾಸಕ ದೇವೇಂದ್ರ ಯಾದವ್ ಅವರನ್ನು ಮಂಗಳವಾರ ಕಾಂಗ್ರೆಸ್‌ ನೇಮಿಸಿದೆ. ದೆಹಲಿಯ ಬದ್ಲಿ ವಿಧಾನಸಭೆ ಕ್ಷೇತ್ರದಿಂದ 2008 ಮತ್ತು 2013ರಲ್ಲಿ ಗೆದ್ದಿದ್ದ ಅವರು 2015ರಲ್ಲಿ ಎಎಪಿಯ ಅಜೇಶ್ ಯಾದವ್ ವಿರುದ್ಧ ಸೋತಿದ್ದರು. ಯಾದವ್ ಪ್ರಸ್ತುತ ಪಂಜಾಬ್‌ನ ಎಐಸಿಸಿ ಉಸ್ತುವಾರಿ ಆಗಿದ್ದಾರೆ.

Tags:    

Similar News