ನಿತಿನ್ ಕಾಮತ್‌ಗೆ ಲಘು ಆಘಾತ

ಗೊತ್ತುಗುರಿಯಿಲ್ಲದ ಸಲಹೆ ಅನುಸರಿಸದಿರಲು ವೈದ್ಯರ ಸೂಚನೆ

Update: 2024-02-28 11:20 GMT

ಆರು ವಾರಗಳ ಹಿಂದೆ ʻಸೌಮ್ಯ ಆಘಾತʼ ಅನುಭವಿಸಿರುವುದಾಗಿ ಹೇಳಿಕೊಂಡಿರುವ ಝೆರೋಧಾ ಸಹ ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಅವರಿಗೆ ʻಗೊತ್ತುಗುರಿಯಿಲ್ಲದ ಇನ್‌ ಫ್ಲ್ಯು ಯನ್ಸರ್‌ʼಗಳಿಂದ ದೂರವಿರಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. 

ʻಸುಮಾರು 6 ವಾರಗಳ ಹಿಂದೆ ನನಗೆ ಸೌಮ್ಯ ಆಘಾತವಾಯಿತು. ತಂದೆಯ ಸಾವು, ನಿದ್ರೆ ಮಾಡಲು ಸಾಧ್ಯವಾಗದೆ ಇದ್ದುದು, ನಿಶ್ಯಕ್ತಿ, ನಿರ್ಜಲೀಕರಣ ಮತ್ತು ಅತಿಯಾದ ಕೆಲಸ ಇದರಲ್ಲಿ ಯಾವುದಾದರೊಂದು ಕಾರಣ ಆಗಿರಬಹುದುʼ ಎಂದು ಕಾಮತ್ ಫೆ.26ರಂದು ಎಕ್ಸ್ ಬರೆದುಕೊಂಡಿದ್ದರು.

'ಫಿಟ್' ಕಾಮತ್:  ʻಮುಖ ಹೆಚ್ಚು ಜೋತು ಬಿದ್ದು, ಓದಲು ಅಥವಾ ಬರೆಯಲು ಸಾಧ್ಯವಾಗದ ಸ್ಥಿತಿಯಿಂದ ಓದಲು ಮತ್ತು ಬರೆಯಲು ಸಾಧ್ಯವಾಗುವ ಸ್ಥಿತಿ ತಲುಪಿದ್ದೇನೆ. ಅಸ್ಥಿರತೆಯಿಂದ ಸ್ವಸ್ಥ ಸ್ಥಿತಿ ತಲುಪಿದ್ದು, ಪೂರ್ಣ ಚೇತರಿಕೆಗೆ 3 ರಿಂದ 6 ತಿಂಗಳು ಬೇಕಾಗುತ್ತದೆʼ ಎಂದು ಬರೆದುಕೊಂಡಿದ್ದರು.

ದೈಹಿಕವಾಗಿ ದೃಢವಾಗಿರುವ ತಮಗೆ ಹೀಗೇಕಾಯಿತು ಎಂಬುದು ಅವರ ಪ್ರಶ್ನೆ. ʻಫಿಟ್ ಆಗಿರುವ ಮತ್ತು ತನ್ನನ್ನು ತಾನು ನೋಡಿಕೊಳ್ಳುವ ವ್ಯಕ್ತಿಗೆ ಏಕೆ ಹೀಗಾಯಿತು ಎಂದು ವೈದ್ಯರನ್ನು ಕೇಳಿದೆ. ಯಾವಾಗ ಗೇರ್ ಅನ್ನು ಬದಲಿಸಬೇಕು ಎಂಬುದು ಗೊತ್ತಿರಬೇಕು. ಕುಸಿದಿದ್ದರೂ, ಥ್ರೆಡ್‌ ಮಿಲ್‌ ಬಳಸುತ್ತಿದ್ದೇನೆʼ ಎಂದು ನಿತಿನ್‌ ಹೇಳಿದರು.

ಸಹೋದರ ನಿಖಿಲ್ ಕಾಮತ್ ಜೊತೆಗೆ ಡಿಸ್ಕೌಂಟ್ ಬ್ರೋಕಿಂಗ್ ವೇದಿಕೆಯಾದ ಝೆರೋಧಾವನ್ನು ಸ್ಥಾಪಿಸಿದ್ದಾರೆ.

ವೈದ್ಯರು ಹೇಳಿದ್ದೇನು?: ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎಸ್.‌ ಪ್ರಮೇಶ್, ಇಂತಹ ವೈದ್ಯಕೀಯ ಸಲಹೆ ʻಜೀವಕ್ಕೆ ಅಪಾಯಕಾರಿʼ ಎಂದು ಹೇಳಿದರು. 

ʻಸಾಮಾಜಿಕ ಮಾಧ್ಯಮಗಳು ಹೇಗೆ ಜೀವಕ್ಕೆ ಅಪಾಯವನ್ನುಂಟುಮಾಡುತ್ತವೆ ಎಂಬುದನ್ನು ತೋರಿಸುವ ಒಂದು ಎಳೆ... ʻನನ್ನನ್ನು ನಂಬಿ, ಬ್ರೋʼ ಎನ್ನುವ ಬೇಕಾಬಿಟ್ಟಿ ಪ್ರಭಾವಿಗಳನ್ನು ಅನುಸರಿಸಬೇಡಿ,ʼ ಎಂದು ಡಾ. ಪ್ರಮೇಶ್ ಹೇಳಿದರು. 

ʻಕೆಲವರು ದುರುದ್ದೇಶ ಅಥವಾ ಘಾತಕ ಪೃವೃತ್ತಿ ಹೊಂದಿರಬಹುದು. ಆದರೆ, ನಾನು ಮನುಷ್ಯರಲ್ಲಿನ ಅಂತರ್ಗತ ಒಳ್ಳೆಯತನವನ್ನು ನಂಬುತ್ತೇನೆ. ಒಳ್ಳೆಯ ಉದ್ದೇಶವಿರುವ ಜನ ನೀಡಿದ ಸಲಹೆಯನ್ನು ತಪ್ಪು ಎನ್ನುವುದಿಲ್ಲ. ಆದರೆ, ತಪ್ಪುಸಂಶೋಧನೆಯ ʻತಜ್ಞʼ ಸಲಹೆಗಳು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಹುಷಾರಾಗಿರಬೇಕು,ʼ ಎಂದು ಸೇರಿಸಿದರು.

ಕೆಲಸ-ಜೀವನದ ಸಮತೋಲನ ಅಗತ್ಯ: ಇನ್ನೊಬ್ಬ ವೈದ್ಯರು ಕೆಲಸ-ಜೀವನದ ಸಮತೋಲನದ ಮಹತ್ವದ ಬಗ್ಗೆ ಮಾತನಾಡಿದರು. ವಿರಾಮ, ವಿಶ್ರಾಂತಿ ಮತ್ತು ನಿದ್ರೆಗೆ ಸಮಯ ಬೇಕು ಎಂದು ಅವರು ಹೇಳಿದರು.

ʻನಾನು ವಾರಕ್ಕೆ 72 ಗಂಟೆ ಕೆಲಸದ ವಿರುದ್ಧ ಮಾತನಾಡಿದಾಗ, ತೋಳೇರಿಸಿ ಜಗಳಕ್ಕೆ ಬಂದರು. ನನ್ನನ್ನು ನಿಂದಿಸಿದರು. ಆದರೆ, ಕೆಲಸ- ಜೀವನದ ನೆಉವೆ ಸಮತೋಲನ ಇರಬೇಕು. ವಿರಾಮ, ವಿಶ್ರಾಂತಿ ಮತ್ತು ನಿದ್ರೆಗೆ ಸಮಯ ಬೇಕುʼ ಎಂದು ಬೆಂಗಳೂರಿನ ಕಾವೇರಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ದೀಪಕ್ ಕೃಷ್ಣಮೂರ್ತಿ. 

Tags:    

Similar News