ಸಂಸದ, ಶಾಸಕ ರಾಜೀನಾಮೆ: ಬಿಆರ್‌ಎಸ್‌ಗೆ ಹೊಡೆತ

Update: 2024-03-17 11:19 GMT
ಚೆವೆಲ್ಲಾ ಸಂಸದ ರಂಜಿತ್ ರೆಡ್ಡಿ ಮತ್ತು ಖೈರತಾಬಾದ್ ಶಾಸಕ ದಾನಂ ನಾಗೇಂದರ್ ಅವರೊಡನೆ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಹಾಗೂ ಇನ್ನಿತರರು

ಚೆವೆಲ್ಲಾ ಕ್ಷೇತ್ರದ ಹಾಲಿ ಸಂಸದ ರಂಜಿತ್ ರೆಡ್ಡಿ ಮತ್ತು ಖೈರತಾಬಾದ್ ಶಾಸಕ ಡಿ. ನಾಗೇಂದ್ರ ಅವರ ರಾಜೀನಾಮೆಯಿಂದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್‌ಗೆ ಭಾರಿ ಹಿನ್ನಡೆಯಾಗಿದೆ. ಈ ಇಬ್ಬರು ಭಾನುವಾರ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು. 

ʻನಾನು ಬಿಆರ್‌ಎಸ್‌ಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ನನಗೆ ನೀಡಿದ ಅವಕಾಶ ಮತ್ತು ಸಹಕಾರಕ್ಕಾಗಿ ಪಕ್ಷಕ್ಕೆ ಕೃತಜ್ಞತೆ ತಿಳಿಸಲು ಬಯಸುತ್ತೇನೆ. ರಾಜಕೀಯ ಸನ್ನಿವೇಶಗಳಿಂದಾಗಿ ರಾಜೀನಾಮೆ ನಿರ್ಧಾರ ಕೈಗೊಂಡಿದ್ದೇನೆʼ ಎಂದು ರಂಜಿತ್ ರೆಡ್ಡಿ ಎಕ್ಸ್‌ ನಲ್ಲಿ ಬರೆದಿದ್ದಾರೆ. 

ಮುಖ್ಯಮಂತ್ರಿ ರೇವಂತ್ ರೆಡ್ಡಿಪ್ರತಿಕ್ರಿಯಿಸಿ, ನಾವು ಇತರ ಪಕ್ಷದ ನಾಯಕರಿಗೆ ಬಾಗಿಲು ತೆರೆದಿದ್ದೇವೆ ಎಂದು ಹೇಳಿದರು. ಮತ್ತೊಬ್ಬ ಸಂಸದ ಪಸುನೂರಿ ದಯಾಕರ್ (ವಾರಂಗಲ್) ಶನಿವಾರ ಕಾಂಗ್ರೆಸ್ ಸೇರಿದರು. 

ಈಮೊದಲು ಜಹೀರಾಬಾದ್ ಮತ್ತು ನಾಗರಕರ್ನೂಲ್‌ನ ಬಿಆರ್‌ಎಸ್ ಸಂಸದರಾದ ಬಿ.ಬಿ. ಪಾಟೀಲ್ ಮತ್ತು ಪಿ. ರಾಮುಲು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

Tags:    

Similar News