ಲೈಂಗಿಕ ಕಿರುಕುಳ ಪ್ರಕರಣ: ಯಡಿಯೂರಪ್ಪ ಧ್ವನಿ ಮಾದರಿ ಸಂಗ್ರಹ

ಪ್ರಕರಣ ದಾಖಲಾಗಿ ೨೯ ದಿನಗಳ ಬಳಿಕ ಯಡಿಯೂರಪ್ಪ ಸಿಐಡಿ ಮುಂದೆ ಹಾಜರಾಗಿದ್ದಾರೆ. ಸಂತ್ರಸ್ತೆ, ಆಕೆಯ ತಾಯಿಯ ಹೇಳಿಕೆಗಳನ್ನು ವಿವರವಾಗಿ ದಾಖಲಿಸಿಕೊಳ್ಳಲಾಗಿದ್ದರೂ, ಅರೋಪಿ ಸ್ಥಾನದಲ್ಲಿರುವ ಯಡಿಯೂರಪ್ಪ ಅವರ ಹೇಳಿಕೆಯನ್ನು ಪೊಲೀಸರು ಇನ್ನೂ ದಾಖಲಿಸಿಲ್ಲ.;

Update: 2024-04-13 08:47 GMT
ಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
Click the Play button to listen to article

ಬೆಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ದಾಖಲಾಗಿರುವ ಪೊಕ್ಸೊ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಶುಕ್ರವಾರ( ಏಪ್ರಿಲ್‌ 12) ಸಿಐಡಿ ಎದುರು ಹಾಜರಾಗಿದ್ದಾರೆ.  ಪ್ರಕರಣ ದಾಖಲಾಗಿ ೨೯ ದಿನಗಳ ಬಳಿಕ ಯಡಿಯೂರಪ್ಪ ಸಿಐಡಿ ಮುಂದೆ ಹಾಜರಾಗಿದ್ದಾರೆ.

ಸಂತ್ರಸ್ತೆ, ಆಕೆಯ ತಾಯಿಯ ಹೇಳಿಕೆಗಳನ್ನು ವಿವರವಾಗಿ ದಾಖಲಿಸಿಕೊಳ್ಳಲಾಗಿದ್ದರೂ,  ಅರೋಪಿ ಸ್ಥಾನದಲ್ಲಿರುವ ಯಡಿಯೂರಪ್ಪ ಅವರ  ಹೇಳಿಕೆಯನ್ನು ಪೊಲೀಸರು ಇನ್ನೂ ದಾಖಲಿಸಿಲ್ಲ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಯಡಿಯೂರಪ್ಪರ ಧ್ವನಿ ಮಾದರಿ(ವಾಯ್ಸ್ ಸ್ಯಾಂಪಲ್)ಯನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಸಹಾಯ ಕೋರಿ ಯಡಿಯೂರಪ್ಪರ ಮನೆಗೆ ತೆರಳಿದ್ದ 17 ವರ್ಷದ ಬಾಲಕಿಯೊಬ್ಬಳಿಗೆ ಯಡಿಯೂರಪ್ಪ ಕಿರುಕುಳ ನೀಡಿರುವುದಾಗಿ ಆರೋಪಿಸಿ ಬಾಲಕಿಯ ತಾಯಿ ಸದಾಶಿವ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಯಡಿಯೂರಪ್ಪರ ವಿರುದ್ಧ ಪೊಕ್ಸೋ ಕಾಯ್ದೆಯ ಸೆಕ್ಷನ್ 8 ಮತ್ತು ಐಪಿಸಿ ಸೆಕ್ಷನ್ 354(ಎ) ಅಡಿಯಲ್ಲಿ ಮಾರ್ಚ್ 14ರಂದು ಪ್ರಕರಣ ದಾಖಲಾಗಿತ್ತು.

ಬಳಿಕ ಪ್ರಕರಣವನ್ನು ಸಿಐಡಿಗೆ ವಹಿಸಿ ಸರಕಾರ ಆದೇಶಿಸಿತ್ತು. ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಯಡಿಯೂರಪ್ಪರಿಗೆ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು.

Tags:    

Similar News