ಕ್ರಿಸ್ಟಿನಾ ಪಿಸ್ಕೋವಾ ವಿಶ್ವ ಸುಂದರಿ

Update: 2024-03-10 14:30 GMT

ಶನಿವಾರ (ಮಾರ್ಚ್ 9)- ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ 71ನೇ ವಿಶ್ವ ಸುಂದರಿ ಕಿರೀಟವನ್ನು ಧರಿಸಿ ದರು. ಮಿಸ್ ಲೆಬನಾನ್ ಯಾಸ್ಮಿನಾ ಜೈಟೌನ್ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾದರು. ಭಾರತದ ಸಿನಿ ಶೆಟ್ಟಿ ಅಗ್ರ 8 ರೊಳಗೆ ಸ್ಥಾನ ಪಡೆದರು. 

2023ರ ವಿಶ್ವ ಸುಂದರಿ ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ, ಕ್ರಿಸ್ಟಿನಾ ಅವರಿಗೆ ಕಿರೀಟ ವರ್ಗಾಯಿಸಿದರು. 2006 ರಲ್ಲಿ ವಿಜೇತರಾದ ಟಟಾನಾ ಕುಚರೋವಾ ನಂತರ ಪಿಸ್ಕೋವಾ, ಜೆಕ್ ಗಣರಾಜ್ಯದ ಎರಡನೇ ವಿಶ್ವ ಸುಂದರಿ. 

ಮಕ್ಕಳ ಶಿಕ್ಷಣಕ್ಕಾಗಿ ಕೆಲಸ: ಪಿಸ್ಕೋವಾ 

ʻಕನಸು ನನಸಾಗಿದೆ. ಆದರೆ ಗೆಲ್ಲುವ ನಿರೀಕ್ಷೆ ಇರಲಿಲ್ಲʼ ಎಂದು 20ರ ಹರೆಯದ ಪಿಸ್ಕೋವಾ ಹೇಳಿದ್ದಾರೆ. ʻಮಕ್ಕಳಿಗೆ ಗುಣಮಟ್ಟದ ಶಿಕ್ಷಣʼ ಕುರಿತು ಮತ್ತಷ್ಟು ಜಾಗೃತಿ ಮೂಡಿಸಲು ವೇದಿಕೆಯನ್ನು ಬಳಸಿಕೊಳ್ಳುವುದಾಗಿ ಹೇಳಿದರು. 

ʻಇಲ್ಲಿಯವರೆಗೆ, ನಾವು 320 ಮಕ್ಕಳಿಗೆ ಸಹಾಯ ಮಾಡಿದ್ದೇವೆ. ಮಿಸ್ ವರ್ಲ್ಡ್ ಪ್ಲಾಟ್‌ಫಾರ್ಮ್ ಮೂಲಕ, ಸಾಧ್ಯವಾದಷ್ಟು ಮಕ್ಕಳಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇನೆ. ಭಾರತಕ್ಕೆ ಶೀಘ್ರದಲ್ಲೇ ಹಿಂತಿರುಗಲು ಇಷ್ಟಪಡುತ್ತೇನೆ, ʼಎಂದು ಪಿಸ್ಕೋವಾ ಸುದ್ದಿಗಾರರಿಗೆ ತಿಳಿಸಿದರು. 

ಪಿಸ್ಕೋವಾ ಯಾರು?: 

ಪಿಸ್ಕೋವಾ ವೃತ್ತಿಯಲ್ಲಿ ರೂಪದರ್ಶಿ. ಕಾನೂನು ಮತ್ತು ವ್ಯವಹಾರ ಆಡಳಿತದಲ್ಲಿ ಪ್ರತ್ಯೇಕ ಪದವಿ ಪಡೆಯುತ್ತಿದ್ದು, ಕ್ರಿಸ್ಟಿನಾ ಪಿಸ್ಕೊ ಫೌಂಡೇಶನ್‌ನ ಸ್ಥಾಪಕಿ. ಇಂಗ್ಲಿಷ್, ಪೋಲಿಷ್, ಸ್ಲೋವಾಕ್ ಮತ್ತು ಜರ್ಮನ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತಾಡಬಲ್ಲರು.

ಮೊದಲ 8 ರೊಳಗೆ ಸ್ಥಾನ: 

28 ವರ್ಷಗಳ ನಂತರ ಸ್ಪರ್ಧೆಯ ಆತಿಥ್ಯ ವಹಿಸಿದ್ದ ಭಾರತವನ್ನು 22 ವರ್ಷದ ಸಿನಿ ಶೆಟ್ಟಿ ಪ್ರತಿನಿಧಿಸಿದ್ದರು. 2022 ರಲ್ಲಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ ಧರಿಸಿದ್ದರು. 112 ದೇಶಗಳ ಸ್ಪರ್ಧಿಗಳು ಪಾಲ್ಗೊಂಡಿದ್ದು, ಸ್ಪರ್ಧೆ ಬಿಕೆಸಿಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು. 

ಚಿತ್ರ ನಿರ್ಮಾಪಕ ಸಾಜಿದ್ ನಾಡಿಯಾಡ್‌ ವಾಲಾ, ನಟಿಯರಾದ ಕೃತಿ ಸನೋನ್, ಪೂಜಾ ಹೆಗ್ಡೆ, ಕ್ರಿಕೆಟಿಗ ಹರ್ಭಜನ್ ಸಿಂಗ್; ಪತ್ರಕರ್ತ ರಜತ್ ಶರ್ಮಾ, ಸಮಾಜ ಸೇವಕಿ ಅಮೃತಾ ಫಡ್ನವಿಸ್, ವಿನೀತ್ ಜೈನ್, ವಿಶ್ವ ಸುಂದರಿ ಸಂಸ್ಥೆ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮಾರ್ಲೆ, ಜಮಿಲ್ ಸೈದಿ, ಚಿಲ್ಲರ್ ಸೇರಿದಂತೆ ಮೂವರು ಮಾಜಿ ವಿಶ್ವ ಸುಂದರಿಯರು ಆಯ್ಕೆ ಸಮಿತಿಯಲ್ಲಿದ್ದರು. ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಮತ್ತು ಮಾಜಿ ವಿಶ್ವ ಸುಂದರಿ ಮೆಗಾನ್ ಯಂಗ್ ಕಾರ್ಯ ಕ್ರಮವನ್ನು ಸಂಯೋಜಿಸಿದ್ದರು. ಗಾಯಕರಾದ ಶಾನ್, ನೇಹಾ ಕಕ್ಕರ್ ಮತ್ತು ಟೋನಿ ಕಕ್ಕರ್ ಅವರ ಪ್ರದರ್ಶನದೊಂದಿಗೆ ಸ್ಪರ್ಧೆ ಆರಂಭವಾಯಿತು. 

ಅಂತಿಮ ಪಂದ್ಯ ಸೋಲಿ ಲೈವ್‌ನಲ್ಲಿ ನೇರ ಪ್ರಸಾರಗೊಂಡಿತು.

Tags:    

Similar News