ಕಿಚ್ಚ ಸುದೀಪ್ ‘ಯುದ್ಧಕ್ಕೆ ಸಿದ್ಧ’ ಎಂದಿದ್ದು ಯಾರ ವಿರುದ್ಧ? ಖಡಕ್ ಮಾತಿನ ಅಸಲಿ ಸತ್ಯ ಏನು?

ಹುಬ್ಬಳ್ಳಿಯಲ್ಲಿ ನೀಡಿದ್ದ ‘ಯುದ್ಧಕ್ಕೆ ಸಿದ್ಧ’ ಎಂಬ ಹೇಳಿಕೆಗೆ ಈಗ ಸ್ವತಃ ಕಿಚ್ಚನೇ ಸ್ಪಷ್ಟನೆ ನೀಡಿದ್ದಾರೆ. ಪೈರಸಿ ದಂಧೆಯ ವಿರುದ್ಧ ಇಂಟೆಲಿಜೆನ್ಸ್ ರಿಪೋರ್ಟ್ ಸಿಕ್ಕ ಹಿನ್ನೆಲೆಯಲ್ಲಿ ಈ ಮಾತು ಹೇಳಿದ್ದಾಗಿ ಸುದೀಪ್ ತಿಳಿಸಿದ್ದಾರೆ.

Update: 2025-12-23 02:40 GMT
ಕಿಚ್ಚ ಸುದೀಪ್‌
Click the Play button to listen to article

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ತಮ್ಮ ಮುಂಬರುವ ಮಾರ್ಕ್‌ ಚಿತ್ರದ ಪ್ರೊಮೋಶನ್‌ ವೇಳೆ "ಯುದ್ಧಕ್ಕೆ ಸಿದ್ಧ; ಮಾತಿಗೆ ಬದ್ಧ" ಎಂದು ಹೇಳುವ ಮೂಲಕ ದೊಡ್ಡ ಸಂಚಲನ ಸೃಷ್ಟಿಸಿದ್ದರು. ಈ ಮಾತು ಯಾರನ್ನು ಉದ್ದೇಶಿಸಿ ಹೇಳಿದ್ದು ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ, ದರ್ಶನ್‌ ಹೊರಗಡೆ ಇದ್ದಾಗ ಯಾರಿಗೂ ಮಾತನಾಡುವ ಧೈರ್ಯ ಇರುವುದಿಲ್ಲ ಎಂದು ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದರು. ಈ ಸುದ್ದಿ ಭಾರೀ ಸದ್ದು ಮಾಡಿತ್ತು ಹಾಗೂ ಸೋಶಿಯಲ್‌ ಮೀಡಿಯಾದಲ್ಲಿ ಫ್ಯಾನ್ಸ್‌ ವಾರ್‌ಗೂ ಕಾರಣವಾಗಿತ್ತು. ಇದೀಗ ತಮ್ಮ ಹೇಳಿಕೆಗೆ ಸ್ವತಃ ಸುದೀಪ್ ಅವರೇ ಈ ಖಡಕ್ ಮಾತಿನ ಹಿಂದಿನ ಅಸಲಿ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಪೈರಸಿ ವಿರುದ್ಧದ ಸಮರ

ಜೀ ಟಿವಿಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಸುದೀಪ್, "ನಮ್ಮ ಚಿತ್ರವನ್ನು ನಾವು ಉಳಿಸಿಕೊಳ್ಳಲೇಬೇಕು. ಪೈರಸಿ ಎಂಬ ಭೂತ ನಮ್ಮ ಶ್ರಮವನ್ನು ತಿಂದು ಹಾಕಬಾರದು. ಹುಬ್ಬಳ್ಳಿಗೆ ಹೋಗುವಾಗ ಸಿಕ್ಕ ಮಾಹಿತಿಯ ಆಧಾರದ ಮೇಲೆಯೇ ನಾನು ಆ ಮಾತುಗಳನ್ನು ಆಡಿದ್ದೇನೆ. ಅದು ಕೇವಲ ಪೈರಸಿ ವಿರುದ್ಧದ ಮಾತೇ ಹೊರತು ಮತ್ಯಾರಿಗೂ ಹೇಳಿದ್ದಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಇಂಟೆಲಿಜೆನ್ಸ್ ರಿಪೋರ್ಟ್‌ನಲ್ಲೇನಿದೆ?

ಹುಬ್ಬಳ್ಳಿಯ ಕಾರ್ಯಕ್ರಮಕ್ಕೆ ಹೋಗುವ ಮುನ್ನವೇ ಅವರಿಗೆ ಒಂದು 'ಇಂಟೆಲಿಜೆನ್ಸ್ ರಿಪೋರ್ಟ್' ಸಿಕ್ಕಿತ್ತು ಎನ್ನಲಾಗಿದೆ. ಸಿನಿಮಾವನ್ನು ಮುಗಿಸಲು (ಧ್ವಂಸ ಮಾಡಲು) ಒಂದು ಪಡೆ ಸಜ್ಜಾಗಿದೆ ಮತ್ತು ಆ ಪಡೆ ಪೈರಸಿ ಮೂಲಕ ಚಿತ್ರಕ್ಕೆ ಪೆಟ್ಟು ಕೊಡಲು ಪ್ಲಾನ್ ಮಾಡಿದೆ ಎಂಬ ಪಕ್ಕಾ ಮಾಹಿತಿ ಸುದೀಪ್ ಅವರಿಗೆ ಲಭ್ಯವಾಗಿತ್ತು. ಇದೇ ಕಾರಣಕ್ಕೆ ಸುದೀಪ್ ವೇದಿಕೆಯ ಮೇಲೆ ಅಷ್ಟು ಕಾನ್ಫಿಡೆಂಟ್ ಆಗಿ "ಯುದ್ಧಕ್ಕೆ ಸಿದ್ಧ" ಎಂದು ಗುಡುಗಿದ್ದರು ಎನ್ನಲಾಗಿದೆ.

ವಿಜಯಲಕ್ಷ್ಮಿ ರಿಯಾಕ್ಷನ್ ಬಗ್ಗೆ ಕಿಚ್ಚನ ಉತ್ತರ

ಸುದೀಪ್ ಮಾತಿನ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸೋಷಿಯಲ್ ಮೀಡಿಯಾದಲ್ಲಿ ನೀಡಿದ ಪ್ರತಿಕ್ರಿಯೆ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಸುದೀಪ್ ಮಾರ್ಮಿಕವಾಗಿ ಉತ್ತರಿಸಿದರು. "ನಾನು ಯಾರನ್ನೂ ಉದ್ದೇಶಿಸಿ ಮಾತನಾಡಿಲ್ಲ. ನನ್ನ ಮಾತು ಪೈರಸಿ ಬಗ್ಗೆ ಮಾತ್ರ ಇತ್ತು. ನನ್ನ ಮಾತಿನ ನಂತರ ಯಾರೋ ಮಾತನಾಡಿದ್ದಾರೆ ಎಂದರೆ ಅದನ್ನು ಅವರನ್ನೇ ಕೇಳಬೇಕು. ಅವರು ನನ್ನ ಹೆಸರು ಹೇಳಿದ್ದಾರೆಯೇ? ಅವರು ನನ್ನ ಹೆಸರು ಹೇಳಿದ್ದರೆ ನಾನು ಖಂಡಿತ ರಿಯಾಕ್ಟ್ ಮಾಡುತ್ತಿದ್ದೆ" ಎಂದು ನೇರವಾಗಿಯೇ ಹೇಳಿದರು.

ವೇದಿಕೆಯ ಮೇಲಿನ ಮಾತುಗಳು ಯಾರಿಗೆ?

ವೇದಿಕೆಯ ಮೇಲೆ ಡಿಕೆ ಶಿವಕುಮಾರ್, ಶಿವಣ್ಣ ಸೇರಿದಂತೆ ಅನೇಕರು ಮಾತನಾಡಿದ್ದಾರೆ. ಅವರೆಲ್ಲರ ಮಾತುಗಳೂ ಯಾರಿಗೆ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲವೇ? ಎಂದು ಪ್ರಶ್ನಿಸಿದ ಕಿಚ್ಚ, ತಾವು 30 ವರ್ಷಗಳಿಂದ ಚಿತ್ರರಂಗದಲ್ಲಿದ್ದು, ಎಲ್ಲಿ ಏನು ಮಾತನಾಡಬೇಕು ಎಂಬ ಪ್ರಜ್ಞೆ ತಮಗಿದೆ ಎಂದು ವಿಶ್ವಾಸದಿಂದ ನುಡಿದರು.

Tags:    

Similar News