ಏಷ್ಯನ್ ಮಹಿಳಾ ಚಲನಚಿತ್ರೋತ್ಸವ ಇಂದಿನಿಂದ
ದಿಲ್ಲಿಯಲ್ಲಿ 20 ದೇಶಗಳ 50 ಚಲನಚಿತ್ರಗಳ ಪ್ರದರ್ಶನ;
ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ವುಮೆನ್ ಇನ್ ರೇಡಿಯೋ ಮತ್ತು ಟೆಲಿವಿಷನ್ (ಐಎಡಬ್ಲ್ಯುಆರ್‌ಟಿ) ಆಯೋಜಿಸಿರುವ ಏಷ್ಯನ್ ಮಹಿಳಾ ಚಲನಚಿತ್ರೋತ್ಸವದ 19 ನೇ ಆವೃತ್ತಿ ಗುರುವಾರ (ಮಾರ್ಚ್ 7) ನವದೆಹಲಿಯಲ್ಲಿ ಪ್ರಾರಂಭವಾಗಲಿದೆ.
ಇಂಡಿಯಾ ಇಂಟರ್‌ನ್ಯಾಶನಲ್ ಸೆಂಟರ್‌ನ ಮುಖ್ಯ ಬ್ಲಾಕ್‌ನಲ್ಲಿರುವ ಸಿ.ಡಿ.ದೇಶಮುಖ್ ಆಡಿಟೋರಿಯಂನಲ್ಲಿ ಮೂರು ದಿನ ನಡೆಯುವ ಚಿತ್ರೋತ್ಸವದಲ್ಲಿ 20 ದೇಶಗಳ ಸುಮಾರು 50 ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ.
ಆರ್ಕೈವಿಂಗ್ ಕುರಿತು 'ದ ಒನ್ಸ್ ಆಂಡ್ ದ ಫ್ಯೂಚರ್ ಆಫ್ ಡಾಕ್ಯುಮೆಂಟರಿʼ ಎಂಬ ಸೆಮಿನಾರ್ ನಡೆಯಲಿದೆ. ಇದು ಮಹಿಳಾ ಚಲನಚಿತ್ರ ಸಮೂಹಗಳನ್ನು ಕೇಂದ್ರವಾಗಿಟ್ಟು ಕೊಂಡಿರುತ್ತದೆ. ಕಥೆ ಹೇಳುವಿಕೆ ಮತ್ತು ಸಂದೇಶವನ್ನು ಸಮತೋಲಗೊಳಿಸುವ ಕುರಿತು ಮೂರು ದಿನಗಳ ಕಾರ್ಯಾಗಾರವಾದ ' ಬ್ಯಾಲೆನ್ಸಿಂಗ್ ಆಕ್ಟ್ಸ್ ' ಕೂಡ ನಡೆಯಲಿದೆ. ಕಾರ್ಯಾಗಾರದಲ್ಲಿ ನೇಪಾಳದಿಂದ ಆಗಮಿಸಿದವರು ಇರುತ್ತಾರೆ.
ನಗಿಸುವ ಮತ್ತು ಅಳಿಸುವ ಚಿತ್ರಗಳು: ಇರಾನಿನ ಚಲನಚಿತ್ರ ನಿರ್ಮಾಪಕ ಸೆಪಿಡೆಹ್ ಫರ್ಸಿಯವರ ಚಲನಚಿತ್ರ ʻದಿ ಸೈರನ್ ʼ, ಯುದ್ಧದಿಂದ ಆಗುವ ಮಾನವ ನಾಶವನ್ನು ಕೇಂದ್ರೀಕರಿಸಿದೆ. ಇದು ನಮ್ಮ ಕಾಲಕ್ಕೆ ಮುಖ್ಯವಾದ ಸಿನೆಮಾ. ಲೆಬನಾನಿನ ಮೈ ಮಸ್ರಿ ( ಫ್ರಾಂಟಿಯರ್ಸ್ ಆಫ್ ಡ್ರೀಮ್ಸ್ ಅಂಡ್ ಫಿಯರ್ಸ್ ಚಿತ್ರದ ನಿರ್ದೇಶಕಿ), ದಕ್ಷಿಣ ಕೊರಿಯಾದ ಶಿನ್ ಸು ವನ್ ( ಹೋಮೇಜ್), ಫ್ರಾನ್ಸಿನ ಅಮೃತಾ ಡೇವಿಡ್ (ಟವರ್ಡ್ಸ್ ಟೆಂಡರ್‌ನೆಸ್ ) ಚಿತ್ರಗಳಲ್ಲದೆ, ರಫೂಘರ್ ಅವರ 'ದಾಸ್ತಾನ್-ಎ-ರಫೂ' ಮತ್ತು ಅಲ್ಕಾ ಹಿಂಗೋರಾಣಿ ಅವರ 'ಲೆಟ್ಸ್ ಟೀಚ್ ಥ್ರೂ ಸ್ಟೋರೀಸ್' ಪ್ರದರ್ಶನ ನಡೆಯಲಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನ ಹಿನ್ನೆಲೆಯಲ್ಲಿ ದೆಹಲಿಯು ಇಂಡಿಯಾ ಹ್ಯಾಬಿಟಾಟ್ ಸೆಂಟರ್ (ಸ್ಟೈನ್ ಆಡಿಟೋರಿಯಂ) ನಲ್ಲಿ ಮಹಿಳಾ ಸಂಗೀತ ತಂಡದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಐಎಡಬ್ಲ್ಯುಆರ್ ಟಿ ಮಂಡಳಿ ಸದಸ್ಯೆ ಮತ್ತು ಉತ್ಸವದ ನಿರ್ದೇಶಖಿ ಬೀನಾ ಪೌಲ್ ಮತ್ತು ಇಂಡಿಯಾ ಚಾಪ್ಟರ್ ಖಜಾಂಚಿ ಅನಿತಾ ಬಾಲಚಂದ್ರನ್ ಅವರು ಉತ್ಸವವನ್ನು ವಿನ್ಯಾಸಗೊಳಿಸಿದ್ದಾರೆ.3000 ನೈಟ್ಸ್ (2015), ಯೌಮಿಯತ್ ಬೈರೂತ್ (2006) ಮತ್ತು 33 ಡೇಸ್ (2007) ಮತ್ತು ಡೇವಿಡ್ ಸಿನೆಮಾ ನಿರ್ದೇಶಕಿ ಪ್ಯಾಲೇಸ್ಟಿನ್ ನ ಮೈ ಮಸ್ರಿ ಅವರೊಂದಿಗೆ ಮಾಸ್ಟರ್ ಕ್ಲಾಸ್ ಮತ್ತು ಜಬೀನ್ ಮರ್ಚೆಂಟ್ ಮತ್ತು ಅಮೃತಾ ಡೇವಿಡ್ ನಡುವಿನ ಸಂವಾದ ಇನ್ನಿತರ ಮುಖ್ಯ ಅಂಶ. ಅಂಜಲಿ ಮೊಂಟೆರಿಯೊ, ಮಧು ಮೆಹ್ರಾ ಮತ್ತು ಶಬಾನಿ ಹಸನ್‌ವಾಲಾ ಅವರ ಸಂವಾದ ಕಾರ್ಯಕ್ರಮ ಇರಲಿದೆ. ವಿಶ್ವಸಂಸ್ಥೆಯ ಮಹಿಳಾ ವಿಭಾಗದ ಮುಖ್ಯಸ್ಥೆ ಸುಸಾನ್ ಜೇನ್ ಫರ್ಗುಸನ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಐಎಡಬ್ಲ್ಯುಆರ್‌ಟಿ ಚಾಪ್ಟರ್ ಇಂಡಿಯಾದ ಮ್ಯಾನೇಜಿಂಗ್ ಟ್ರಸ್ಟಿ ಆರಾಧನಾ ಕೊಹ್ಲಿ ಫೆಡರಲ್‌ಗೆ ತಿಳಿಸಿದರು.
ಇಂಡಿಯಾ ಇಂಟರ್‌ನ್ಯಾಶನಲ್ ಸೆಂಟರ್, ದೆಹಲಿ ಪ್ರವಾಸೋದ್ಯಮ ಇಲಾಖೆ, ಶೇರ್-ಗಿಲ್ ಸುಂದರಂ ಆರ್ಟ್ಸ್ ಫೌಂಡೇಶನ್, ಭಾರತದಲ್ಲಿನ ಫ್ರೆಂಚ್ ರಾಯಭಾರ ಕಚೇರಿ ಮತ್ತು ಹಲವು ಪಾಲುದಾರರ ಸಹಯೋಗದಲ್ಲಿ ಉತ್ಸವವನ್ನು ಆಯೋಜಿಸಲಾಗಿದೆ. ಭಾರತದಲ್ಲಿನ ಫ್ರಾನ್ಸ್ ರಾಯಭಾರಿ ಥಿಯೆರಿ ಮ್ಯಾಥ್ಯೂ ಕೂಡ ಪಾಲ್ಗೊಳ್ಳಲಿದ್ದಾರೆ.
ಉತ್ಸವಕ್ಕೆ ನೋಂದಣಿ ಉಚಿತ. ಐಎಡಬ್ಲ್ಯು ಆರ್ಟಿ ಎಲೆಕ್ಟ್ರಾನಿಕ್ ಮತ್ತು ಸಹಯೋಗಿ ಮಾಧ್ಯಮಗಳಲ್ಲಿ ಕೆಲಸ ಮಾಡುವ ಮಹಿಳೆಯರ ಲಾಭರಹಿತ ವೃತ್ತಿಪರ ಸಂಸ್ಥೆ.