RCB Timetable : ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಗಳು, ಆಟಗಾರರು ಇನ್ನಿತರ ಮಾಹಿತಿ ಇಲ್ಲಿದೆ
ಐಪಿಎಲ್ 2025ನಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ ಮತ್ತು ಮಾರ್ಚ್ 22ರಿಂದ ಮೇ 25ರವರೆಗೆ ಒಟ್ಟು 74 ಪಂದ್ಯಗಳು ನಡೆಯಲಿವೆ. ಪ್ರತಿ ತಂಡವು ಲೀಗ್ ಹಂತದಲ್ಲಿ 14 ಪಂದ್ಯಗಳನ್ನು ಆಡಲಿದೆ.;
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೆ ಒಂದೇ ಒಂದು ಟ್ರೋಫಿ ಗೆಲ್ಲದ ತಂಡಗಳ ಪೈಕಿ ಒಂದು. ಅಪಾರ ಅಭಿಮಾನಿಗಳು ಹಾಗೂ ಸ್ಟಾರ್ ಆಟಗಾರರ ಲಭ್ಯತೆಯ ನಡುವೆಯೂ ಈ ತಂಡಕ್ಕೆ ಇನ್ನೂ ಅದೃಷ್ಟ ಖುಲಾಯಿಸಿಲ್ಲ. ಆದಾಗ್ಯೂ ಕಪ್ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ಆರ್ಸಿಬಿ ಅಭಿಮಾನಿಗಳಲ್ಲಿ ಇನ್ನೂ ಇದೆ. ಹೀಗಾಗಿ 18ನೇ ವರ್ಷದಲ್ಲಿ ಅವರ ಅದೃಷ್ಟ ಬದಲಾಗುವುದೇ ಎಂದು ಕಾದು ನೋಡಬೇಕು.
ಈ ಬಾರಿ, ಆರ್ಸಿಬಿ ತಂಡಕ್ಕೆ ಹೊಸ ಕ್ಯಾಪ್ಟನ್ ಆಗಿ ರಾಜತ್ ಪಾಟಿದಾರ್ ನೇಮಕಗೊಂಡಿದ್ದಾರೆ. ಕೊಹ್ಲಿ ಮಾರ್ಗದರ್ಶನ ನೀಡಲಿದ್ದಾರೆ. ಸ್ಟಾರ್ ಆಟಗಾರ ಕೊಹ್ಲಿ 17 ವರ್ಷಗಳಿಂದ ಆರ್ಸಿಬಿ ತಂಡದಲ್ಲಿ ಆಡುತ್ತಿದ್ದಾರೆ.
ಐಪಿಎಲ್ 2025ನಲ್ಲಿ ಆರ್ಸಿಬಿ ತಂಡವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಮಾರ್ಚ್ 22ರಂದು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದೆ.
ಐಪಿಎಲ್ 2025ನಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ ಮತ್ತು ಮಾರ್ಚ್ 22ರಿಂದ ಮೇ 25ರವರೆಗೆ ಒಟ್ಟು 74 ಪಂದ್ಯಗಳು ನಡೆಯಲಿವೆ. ಪ್ರತಿ ತಂಡವು ಲೀಗ್ ಹಂತದಲ್ಲಿ 14 ಪಂದ್ಯಗಳನ್ನು ಆಡಲಿದೆ. ಲೀಗ್ ಹಂತದ ನಂತರ ಮೊದಲ ನಾಲ್ಕು ತಂಡಗಳು ಪ್ಲೇಆಫ್ಗೆ ಮುನ್ನಡೆಯಲಿವೆ. ಫೈನಲ್ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದೆ. ಅಂತೆಯೇ ಆರ್ಸಿಬಿ ತಂಡ ಎಲ್ಲೆಲ್ಲೆಆಡಲಿವೆ. ಯಾವ ಸಮಯಕ್ಕೆ ಆಡಲಿವೆ ಎಂಬೆಲ್ಲ ಮಾಹಿತಿ ಇಲ್ಲಿದೆ.
ಆರ್ಸಿಬಿಯ ವೇಳಾಪಟ್ಟಿ ಇಂತಿದೆ
- ಮಾರ್ಚ್ 22 (ಶನಿವಾರ): ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ, ಕೋಲ್ಕತ್ತಾ – ಸಂಜೆ 7:30
- ಮಾರ್ಚ್ 28 (ಶುಕ್ರವಾರ): ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ, ಚೆನ್ನೈ – ಸಂಜೆ 7:30
- ಏಪ್ರಿಲ್ 2 (ಬುಧವಾರ): ಗುಜರಾತ್ ಟೈಟಾನ್ಸ್ (GT) ವಿರುದ್ಧ, ಬೆಂಗಳೂರು – ಸಂಜೆ 7:30
- ಏಪ್ರಿಲ್ 7 (ಸೋಮವಾರ): ಮುಂಬೈ ಇಂಡಿಯನ್ಸ್ (MI) ವಿರುದ್ಧ, ಮುಂಬೈ – ಸಂಜೆ 7:30
- ಏಪ್ರಿಲ್ 10 (ಗುರುವಾರ): ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ, ಬೆಂಗಳೂರು – ಸಂಜೆ 7:30
- ಏಪ್ರಿಲ್ 13 (ಭಾನುವಾರ): ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ, ಜೈಪುರ – ಮಧ್ಯಾಹ್ನ 3:30
- ಏಪ್ರಿಲ್ 18 (ಶುಕ್ರವಾರ): ಪಂಜಾಬ್ ಕಿಂಗ್ಸ್ (PBKS) ವಿರುದ್ಧ, ಬೆಂಗಳೂರು – ಸಂಜೆ 7:30
- ಏಪ್ರಿಲ್ 20 (ಭಾನುವಾರ): ಪಂಜಾಬ್ ಕಿಂಗ್ಸ್ (PBKS) ವಿರುದ್ಧ, ಮುಲ್ಲಾನ್ಪುರ –ಮಧ್ಯಾಹ್ನ 3:30
- ಏಪ್ರಿಲ್ 24 (ಗುರುವಾರ): ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ, ಬೆಂಗಳೂರು – ಸಂಜೆ 7:30
- ಏಪ್ರಿಲ್ 27 (ಭಾನುವಾರ): ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ, ಡೆಲ್ಲಿ – ಸಂಜೆ 7:30
- ಮೇ 3 (ಶನಿವಾರ): ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ, ಬೆಂಗಳೂರು – ಸಂಜೆ 7:30
- ಮೇ 9 (ಶುಕ್ರವಾರ): ಲಕ್ನೋ ಸೂಪರ್ ಜಯಂಟ್ಸ್ (LSG) ವಿರುದ್ಧ, ಲಕ್ನೋ – ಸಂಜೆ 7:30
- ಮೇ 13 (ಮಂಗಳವಾರ): ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧ, ಬೆಂಗಳೂರು – ಸಂಜೆ 7:30
- ಮೇ 17 (ಶನಿವಾರ): ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ, ಬೆಂಗಳೂರು – ಸಂಜೆ 7:30
ಆರ್ಸಿಬಿ ತಂಡ (22 ಆಟಗಾರರು, 8 ವಿದೇಶಿ ಆಟಗಾರರು)
ಹರಾಜಿನಲ್ಲಿ ಖರೀದಿಸಲಾದ ಆಟಗಾರರು (19): ಜೋಶ್ ಹೇಜಲ್ವುಡ್ (₹12.50 ಕೋಟಿ), ಫಿಲ್ ಸಾಲ್ಟ್ (₹11.50 ಕೋಟಿ), ಜಿತೇಶ್ ಶರ್ಮಾ (₹11 ಕೋಟಿ), ಭುವನೇಶ್ವರ್ ಕುಮಾರ್ (₹10.75 ಕೋಟಿ), ಲಿಯಾಮ್ ಲಿವಿಂಗ್ಸ್ಟನ್ (₹8.75 ಕೋಟಿ), ರಸೀಕ್ ಸಲಾಮ್ (₹6 ಕೋಟಿ), ಕೃನಾಲ್ ಪಾಂಡ್ಯ (₹5.75 ಕೋಟಿ), ಟಿಮ್ ಡೇವಿಡ್ (₹3 ಕೋಟಿ), ಜಾಕೋಬ್ ಬೆಥೆಲ್ (₹2.60 ಕೋಟಿ), ಸುಯಾಶ್ ಶರ್ಮಾ (₹2.60 ಕೋಟಿ), ದೇವದತ್ತ್ ಪಡಿಕಲ್ (₹2 ಕೋಟಿ), ನುವಾನ್ ಥುಶಾರ (₹1.60 ಕೋಟಿ), ರೊಮಾರಿಯೋ ಶೆಫರ್ಡ್ (₹1.50 ಕೋಟಿ), ಲುಂಗಿಸಾನಿ ಎನ್ಗಿಡಿ (₹1 ಕೋಟಿ), ಸ್ವಪ್ನಿಲ್ ಸಿಂಗ್ (₹50 ಲಕ್ಷ – RTM), ಮೋಹಿತ್ ರಾಠಿ (₹30 ಲಕ್ಷ), ಅಭಿನಂದನ್ ಸಿಂಗ್ (₹30 ಲಕ್ಷ), ಸ್ವಸ್ತಿಕ್ ಚಿಖಾರಾ (₹30 ಲಕ್ಷ), ಮನೋಜ್ ಭಂಡಾಗೆ (₹30 ಲಕ್ಷ).
ರಿಟೈನ್ ಆಗಿರುವ ಆಟಗಾರರು (3): ವಿರಾಟ್ ಕೊಹ್ಲಿ (₹21 ಕೋಟಿ), ರಜತ್ ಪಾಟಿದಾರ್ (₹11 ಕೋಟಿ), ಯಶ್ ದಯಾಳ್ (₹5 ಕೋಟಿ).
ನಾಯಕ : ರಾಜತ್ ಪಾಟಿದಾರ್
ಕೋಚ್: ಆಂಡಿ ಫ್ಲವರ್
ಮಾಲೀಕರು: ಡಯಾಜಿಯೋ ಇಂಡಿಯಾ ಪ್ರೈವೇಟ್ ಲಿಮಿಟೆಡ್: ಬೆಂಗಳೂರು ಫ್ರ್ಯಾಂಚೈಸಿಯನ್ನು ವಿಜಯ್ ಮಲ್ಯ ಅವರ ಯುವಿ ಗ್ರೂಪ್ $111.6 ಮಿಲಿಯನ್ (ಸುಮಾರು ₹464 ಕೋಟಿ)ಗೆ ಖರೀದಿಸಿತ್ತು. 2015ರಲ್ಲಿ, ತಂಡದ ಮಾಲೀಕತ್ವವು ಮಲ್ಯರಿಂದ ಡಯಾಜಿಯೋ ಇಂಡಿಯಾಕ್ಕೆ ಬದಲಾಯಿತು.
ಪರಿಣಾಮ ಬೀರಬಲ್ಲ ಆಟಗಾರರು
- ವಿರಾಟ್ ಕೊಹ್ಲಿ, ರಾಜತ್ ಪಾಟಿದಾರ್, ಯಶ್ ದಯಾಳ್, ಫಿಲ್ ಸಾಲ್ಟ್, ಭುವನೇಶ್ವರ್ ಕುಮಾರ್
ಆರ್ಸಿಬಿ ತಂಡದ ಹಿಂದಿನ ಫಲಿತಾಂಶಗಳು (2008 ರಿಂದ 2024):
ಟ್ರೋಫಿಗಳು: 0
2024: 4ನೇ ಸ್ಥಾನ
2023: ನೇ ಸ್ಥಾನ
2022:ನೇ ಸ್ಥಾನ
2021: 3 ನೇ ಸ್ಥಾನ
2020: 4ನೇ ಸ್ಥಾನ
2019: 8 ನೇ ಸ್ಥಾನ
2018: 6 ನೇ ಸ್ಥಾನ
2017: 8 ನೇ ಸ್ಥಾನ
2016: ರನ್ನರ್-ಅಪ್
2015: 3 ನೇ ಸ್ಥಾನ
2014: 7 ನೇ ಸ್ಥಾನ
2013: 5 ನೇ ಸ್ಥಾನ
2012: 5ನೇ ಸ್ಥಾನ
2011: ರನ್ನರ್-ಅಪ್
2010: 3ನೇ ಸ್ಥಾನ
2009: ರನ್ನರ್-ಅಪ್
2008: 7ನೇ ಸ್ಥಾನ
RCB ತಂಡವು ಇದುವರೆಗೆ ಯಾವುದೇ IPL ಟ್ರೋಫಿಯನ್ನು ಗೆದ್ದಿಲ್ಲ. ಆದರೆ, ಈ ಬಾರಿ ಹೊಸ ಕ್ಯಾಪ್ಟನ್ ಮತ್ತು ಹೊಸ ತಂಡದೊಂದಿಗೆ ಅವರು ತಮ್ಮ ಮೊದಲ ಟ್ರೋಫಿಗಾಗಿ ಹೋರಾಡಲಿದ್ದಾರೆ.