ಪ್ರಶಸ್ತಿ ಪದಕಗಳೆಲ್ಲ ಚಿನ್ನವೆಂದು ಎ ಆರ್ ರೆಹಮಾನ್ ತಾಯಿ ಮಾಡಿದ್ದೇನು ಗೊತ್ತಾ?

ಪ್ರಶಸ್ತಿ ಪದಕ, ಫಲಕಗಳು ಚಿನ್ನದವೇ ಎಂದು ಭಾವಿಸಿ ನನ್ನ ತಾಯಿ ಕರೀಮಾ ಬೇಗಂ ಅವುಗಳನ್ನು ಟವೆಲ್‌ನಲ್ಲಿ ಸುತ್ತಿ ಇಟ್ಟಿದ್ದರು.

Update: 2024-05-22 14:22 GMT
ಎಆರ್​ ರೆಹಮಾನ್
Click the Play button to listen to article

ಸಂಗೀತ ನಿರ್ದೇಶಕ, ಗಾಯಕ ಎಆರ್ ರೆಹಮಾನ್ ಅವರಿಗೆ ಆಸ್ಕರ್, ಗ್ರ್ಯಾಮಿ, ಗೋಲ್ಡನ್ ಗ್ಲೋಬ್ ಸೇರಿ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕಿವೆ. ಅದೆಲ್ಲವನ್ನೂ ಎಲ್ಲಿ ಇಟ್ಟಿದ್ದೀರಿ ಎಂದು ಇತ್ತೀಚೆಗೆ ರೆಹಮಾನ್ ಅವರಿಗೆ ಸಂದರ್ಶನವೊಂದರಲ್ಲಿ ಕೇಳಲಾಯಿತು. ಇದಕ್ಕೆ ಎ ಆರ್​ ರೆಹಮಾನ್ ಅವರು ನೀಡಿದ ಉತ್ತರ ಕೇಳಿ ಅನೇಕರಿಗೆ ಅಚ್ಚರಿ ಎನಿಸಿದೆ.

ʻʻನಾನು ದುಬೈನಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಇಟ್ಟುಕೊಂಡಿದ್ದೇನೆ. ನನ್ನ ತಾಯಿ ಕರೀಮಾ ಬೇಗಂ ಪ್ರಶಸ್ತಿ ಫಲಕಗಳು ಮತ್ತು ಪದಕಗಳೆಲ್ಲ ಚಿನ್ನದವೇ ಎಂದು ಭಾವಿಸಿ ಅವುಗಳನ್ನು ಟವೆಲ್‌ನಲ್ಲಿ ಸುತ್ತಿ ಇಟ್ಟಿದ್ದರು. ಅವರು ತೀರಿ ಹೋದ ನಂತರ ಆ ಅವುಗಳನ್ನು ನಾನು ದುಬೈ ಫಿರ್ದೌಸ್ ಸ್ಟುಡಿಯೋಗೆ ನೀಡಿದ್ದೇನೆ. ಇದೊಂದು ಒಳ್ಳೆಯ ಶೋಕೇಸ್" ಎಂದಿದ್ದಾರೆ ರೆಹಮಾನ್.

ಭಾರತದ ಯಾವುದೇ ಮ್ಯೂಸಿಕ್ ಡೈರೆಕ್ಟರ್​ ಆಸ್ಕರ್ ಗೆದ್ದಿರಲಿಲ್ಲ. ಭಾರತದಲ್ಲಿ ಮೊದಲು ಆಸ್ಕರ್ ಗೆದ್ದ ಖ್ಯಾತಿ ಇವರಿಗೆ ಇದೆ. 2008ರ ಚಲನಚಿತ್ರ ʼಸ್ಲಮ್‌ಡಾಗ್ ಮಿಲಿಯನೇರ್‌ʼಗಾಗಿ ʻಗೋಲ್ಡನ್ ಗ್ಲೋಬ್ʼ ಅನ್ನು ಗೆದಿದ್ದರು. ಈ ಚಿತ್ರದ ‘ಜೈ ಹೋ’ ಹಾಡು ಸೂಪರ್ ಹಿಟ್ ಎನಿಸಿಕೊಂಡಿತ್ತು.

ರೆಹಮಾನ್ ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು 32 ಕ್ಕೂ ಹೆಚ್ಚು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಹೊಂದಿದ್ದಾರೆ. ಅದೇ ಭಾರತೀಯ ಪ್ರಶಸ್ತಿಗಳನ್ನು ತಮ್ಮ ತವರು ಚೆನ್ನೈನಲ್ಲಿರುವ ವಿಶೇಷ ಕೋಣೆಯಲ್ಲಿ ಇಟ್ಟಿರುವುದಾಗಿ ಬಹಿರಂಗಪಡಿಸಿದರು. ಈ ಬಗ್ಗೆ ಮಾತನಾಡಿ ʻʻಕೆಲವು ಪ್ರಶಸ್ತಿಗಳು ನನ್ನ ಬಳಿ ಇದುವೆರೆಗೆ ಬಂದಿಲ್ಲ. ಕೆಲವು ನಿರ್ದೇಶಕರು ಅವುಗಳನ್ನು ಸ್ಮರಣಿಕೆಗಳಂತೆ ಇಟ್ಟುಕೊಂಡಿದ್ದಾರೆʼʼ ಎಂದೂ ಅವರು ಹೇಳಿದ್ದಾರೆ.

Tags:    

Similar News