`45’ ಟ್ರೇಲರ್‌ ರಿಲೀಸ್‌; ಲೇಡಿ ಗೆಟಪ್‌ನಲ್ಲಿ ಶಿವಣ್ಣ! ಉಪ್ಪಿ-ರಾಜ್‌ ಖದರ್‌ಗೆ ಫ್ಯಾನ್ಸ್‌ ಫಿದಾ

ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕಾಂಬಿನೇಶನ್‌ನಲ್ಲಿ ಮೂಡಿ ಬಂದಿರುವ 45 ಚಿತ್ರದ ಟ್ರೇಲರ್‌ ನೋಡಿಯೇ ಪ್ರೇಕ್ಷಕರು ಫುಲ್‌ ಫಿದಾ ಆಗಿದ್ದಾರೆ.

Update: 2025-12-16 02:17 GMT
Click the Play button to listen to article

ಸ್ಯಾಂಡಲ್‌ವುಡ್‌ನ ಮತ್ತೊಂದು ಅದ್ದೂರಿ ಚಿತ್ರ ಇದೀಗ ತೆರೆ ಕಾಣಲು ವೇದಿಕೆ ಸಜ್ಜಾಗಿದೆ. ಮಲ್ಟಿ ಸ್ಟಾರರ್‌ ಚಿತ್ರ `45’ ಟ್ರೇಲರ್‌ ನಿನ್ನೆ ರಾತ್ರಿ ರಿಲೀಸ್‌ ಆಗಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕಾಂಬಿನೇಶನ್‌ನಲ್ಲಿ ಮೂಡಿ ಬಂದಿರುವ 45 ಚಿತ್ರದ ಟ್ರೇಲರ್‌ ನೋಡಿಯೇ ಪ್ರೇಕ್ಷಕರು ಫುಲ್‌ ಫಿದಾ ಆಗಿದ್ದಾರೆ. ಇನ್ನು ಚಿತ್ರದಲ್ಲಿ ರಿಯಲ್‌ ಸ್ಟಾರ್‌ ಉಪೆಂದ್ರ ಅಂತೂ ಮಾಸ್‌ ಡೈಲಾಗ್‌ ಮೂಲಕವೇ ಅಬ್ಬರಿಸಿದ್ದಾರೆ. ಅದರಲ್ಲೂ ಶಿವಣ್ಣನ ವಿಭಿನ್ನ ಲುಕ್‌ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ. ಹೆಣ್ಣಿನ ವೇಷದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದು, ಟ್ರೇಲರ್‌ನಲ್ಲಿ ಇದರ ಒಂದು ಝಲಕ್‌ ಅನ್ನು ಕಾಣಬಹುದಾಗಿದೆ.

ಅರ್ಜುನ್‌ ಜನ್ಯ ನಿರ್ದೇಶನದ ಮೊದಲ ಚಿತ್ರ

ಇನ್ನು ಇದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಮೊದಲ ಚಿತ್ರವಾಗಿದೆ. ಎಂ. ರಮೇಶ್ ರೆಡ್ಡಿ ಅವರು ತಮ್ಮ ʼಸೂರಜ್ ಪ್ರೊಡಕ್ಷನ್ʼ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ʼ45ʼ. ಬೆಂಗಳೂರಿನ ಶಂಕರ್‌ ನಾಗ್ ಸರ್ಕಲ್ ಬಳಿಯ ಸ್ಟೇಡಿಯಂನಲ್ಲಿ ಅರ್ಜುನ್ ಮೊಟ್ಟಮೊದಲ ನಿರ್ದೇಶನದ '45' ಸಿನಿಮಾದ ಟ್ರೈಲರ್ ಲಾಂಚ್ ಆಗಿದೆ. ಬಹಳ ವರ್ಷಗಳ ಬಳಿಕ ಮತ್ತೆ ಶಿವಣ್ಣ, ಉಪೇಂದ್ರ ಒಟ್ಟಿಗೆ ನಟಿಸಿದ್ದಾರೆ.

ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಕಾಮನ್ ಮ್ಯಾನ್ ಆಗಿಯೇ ಕಾಣಿಸಿದ್ದಾರೆ. ರಾಜ್ ಬಿ ಶೆಟ್ಟಿ ಅವರನ್ನೆ ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಕಾಡುತ್ತಾರೆ ಅನಿಸುತ್ತದೆ. 45 ಚಿತ್ರದಲ್ಲಿ ಸುಧಾರಾಣಿ ಕೂಡ ಇದ್ದಾರೆ. ಇನ್ನು ಚಿತ್ರದಲ್ಲಿ ತಮಿಳು ಚಿತ್ರದ ಕಲಾವಿದರು ನಟಿಸಿದ್ದಾರೆ. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ '45' ಸಿನಿಮಾ ಬಿಡುಗಡೆ ಆಗಲಿದೆ.

ಟ್ರೇಲರ್‌ ಇಲ್ಲಿದೆ

Full View

ಟ್ರೇಲರ್‌ನಲ್ಲೇನಿದೆ?

ಅಲ್ಲಿ ಗೋರಿ ನೋಡ್ತಾ ಇದ್ಯಯಲ್ಲ, ಆ ಗೋರಿ ಮಧ್ಯ ಮನುಷ್ಯ ಹುಟ್ಟಿದ ದಿನಾಂಕ ಡ್ಯಾಶ್‌..,ಸಾಯೋ ದಿನಾಂಕ ಬರ್ದಿರತ್ತೆ. ಆ ನಡುವಲ್ಲಿ ಇರೋ ಸಣ್ಣ ಡ್ಯಾಶ್‌, ಮನುಷ್ಯನ ಇಡೀ ಜೀವನ ಅಂತ ಉಪ್ಪಿ ಮಾಸ್‌ ಡೈಲಾಗ್‌ ಹೇಳಿದ್ದಾರೆ. ಇನ್ನು ಟ್ರೈಲರ್‌ ಮ್ಯೂಸಿಕ್‌ಗೂ ಸಖತ್‌ ಫಿದಾ ಆಗಿದ್ದಾರೆ ಸಿನಿಪ್ರಿಯರು. ಮಾಸ್‌ ಡೈಲಾಗ್‌ ಜೊತೆ ಫೈಟ್‌, ಶಿವಣ್ಣ ಖದರ್‌, ರಾಜ್‌ ಬಿ ಶೆಟ್ಟಿ ನಟನೆ ಹೈಲೈಟ್‌ ಆಗಿದೆ.

ಸಿನಿಮಾ ರಿಲೀಸ್‌ ಯಾವಾಗ?

ಇನ್ನು ಈ ಬಹು ನಿರೀಕ್ಷಿತ ಚಿತ್ರ ಡಿಸೆಂಬರ್‌ 25 ಕ್ಕೆ ದೇಶಾದ್ಯಂತ, ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗುತ್ತಿದೆ. ಇನ್ನು ಅಂದೇ ಕಿಚ್ಚ ಸುದೀಪ್‌ ನಟನೆಯ ಮಾರ್ಕ್‌ ಕೂಡ ರಿಲೀಸ್‌ ಆಗುತ್ತಿದೆ. ಮಾರ್ಕ್‌ ಮುಂದೆ ಮಲ್ಟಿ ಸಾರರ್‌ 45 ಸಿನಿಮಾ ಹೇಗೆ ಅಬ್ಬರಿಸುತ್ತದೆ ಎಂದು ಕಾದು ನೋಡಬೇಕಾಗಿದೆ.

ಒಂದೇ ಗಂಟೆಯಲ್ಲಿ ಭರ್ಜರಿ ವೀಕ್ಷಣೆ

ಆನಂದ್ ಅಡಿಯೋಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಸಿನಿಮಾದ ಟ್ರೇಲರ್ ಕನ್ನಡ, ತೆಲುಗು, ತಮಿಳು, ಮಲಯಾಳ, ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಇನ್ನುಟ್ರೇಲರ್‌ ಬಿಡುಗಡೆಯಾದ ಒಂದೇ ಗಂಟೆಯಲ್ಲಿ 1.5 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಸಿನಿಮನಾ ಬಿಡುಗಡೆಗೂ ಮುನ್ನವೇ 'ಜೀ' ಸಂಸ್ಥೆಯು ಸಿನಿಮಾದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಖರೀದಿಸಿದೆ ಎನ್ನಲಾಗಿದೆ.

Tags:    

Similar News