'ಧುರಂಧರ್' ಚಿತ್ರಕ್ಕೆ ಭರ್ಜರಿ ಯಶಸ್ಸು: ಶೋಗಳ ಸಂಖ್ಯೆ ಹೆಚ್ಚಳ
ಡಿಸೆಂಬರ್ 5 ರಂದು ಬಿಡುಗಡೆಯಾದ ನಿರ್ದೇಶಕ ಆದಿತ್ಯ ಧರ್ ಅವರ ಈ ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೇ ದಾಖಲೆಗಳನ್ನು ಮುರಿಯಲು ಪ್ರಾರಂಭಿಸಿತು. 'ಧುರಂಧರ್' ಈಗಾಗಲೇ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ.
ಧುರಂಧರ್ ದರ್ಬಾರ್
ರಣವೀರ್ ಸಿಂಗ್ ನಟನೆಯ, ಬಹುನಿರೀಕ್ಷಿತ ಆಕ್ಷನ್ ಎಂಟರ್‌ಟೈನರ್ 'ಧುರಂಧರ್' ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡಿದೆ. ದಶಕಗಳ ಬಳಿಕ ಇಂತಹದೊಂದು ದೃಶ್ಯಕಾವ್ಯವನ್ನು ಪ್ರೇಕ್ಷಕರು ತೆರೆಯ ಮೇಲೆ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನ ರಣವೀರ್ ಸಿಂಗ್ ನೀಡಿದ್ದ ಭರವಸೆಯಂತೆ, ಈ ಚಿತ್ರವು ಜನರನ್ನು ಥಿಯೇಟರ್‌ಗಳತ್ತ ಸೆಳೆದಿರುವುದು ಸ್ಪಷ್ಟವಾಗಿದೆ. ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದ್ದರಿಂದ, ಮುಂಬೈ, ಪುಣೆ ಸೇರಿದಂತೆ ಪ್ರಮುಖ ನಗರಗಳ ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿಯ ವಿಶೇಷ ಪ್ರದರ್ಶನಗಳನ್ನು ಸೇರಿಸಲಾಗಿದ್ದು, ಶೋಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.
ಡಿಸೆಂಬರ್ 5 ರಂದು ಬಿಡುಗಡೆಯಾದ ನಿರ್ದೇಶಕ ಆದಿತ್ಯ ಧರ್ ಅವರ ಈ ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೇ ದಾಖಲೆಗಳನ್ನು ಮುರಿಯಲು ಪ್ರಾರಂಭಿಸಿತು. 'ಧುರಂಧರ್' ಈಗಾಗಲೇ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ.
ಹೊಸ ಪ್ರದರ್ಶನ ಸಮಯಗಳ ಹೇಗಿದೆ
ಖ್ಯಾತ ಟ್ರೇಡ್ ಅನಾಲಿಸ್ಟ್ ತರಣ್ ಆದರ್ಶ್ ಅವರು 'ಧುರಂಧರ್' ಚಿತ್ರದ ಹೊಸ ಪ್ರದರ್ಶನ ಸಮಯಗಳನ್ನು ಬಹಿರಂಗಪಡಿಸಿದ್ದಾರೆ. ಮುಂಬೈ ಮತ್ತು ಪುಣೆ ನಗರಗಳ ಚಿತ್ರಮಂದಿರಗಳಲ್ಲಿ ಈಗ ಮಧ್ಯರಾತ್ರಿಯಿಂದಲೂ ಪ್ರದರ್ಶನಗಳು ಪ್ರಾರಂಭವಾಗಿವೆ. ಮುಂಬೈನಲ್ಲಿ ಮಧ್ಯರಾತ್ರಿ 12.45 ರಿಂದ ಹೊಸ ಶೋಗಳು ಶುರುವಾಗಿವೆ. ಅದೇ ರೀತಿ, ಪುಣೆಯಲ್ಲಿ ರಾತ್ರಿ 12.20 ರಿಂದ ಪ್ರದರ್ಶನಗಳು ಆರಂಭವಾಗುತ್ತಿವೆ. ಕೆಲವು ಕಡೆಗಳಲ್ಲಿ ಬೆಳಗ್ಗೆ 7.20 ರಿಂದಲೇ ಪ್ರದರ್ಶನಗಳು ಶುರುವಾಗುತ್ತಿದ್ದು, ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾವು ಹೌಸ್‌ಫುಲ್ ಪ್ರದರ್ಶನಗಳೊಂದಿಗೆ ತನ್ನ ಅಬ್ಬರವನ್ನು ಮುಂದುವರೆಸಿದೆ.
ಸಿನಿಮಾ ಗಳಿಸಿದೆಷ್ಟು?
sacnilk.com ವರದಿ ಪ್ರಕಾರ, ಬಿಡುಗಡೆಯಾದ ಕೇವಲ ಒಂದು ವಾರದಲ್ಲಿ ಚಿತ್ರವು 300 ಕೋಟಿ ರೂಪಾಯಿಗಳ ಗಡಿಯನ್ನು ತಲುಪಿತ್ತು. ವಾರಾಂತ್ಯದಲ್ಲಿ 53 ಕೋಟಿ ರೂಪಾಯಿಗಳ ಗಳಿಕೆಯೊಂದಿಗೆ, ಚಿತ್ರವು ಒಂಬತ್ತು ದಿನಗಳಲ್ಲಿ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 292.75 ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡಿದೆ.
ಆದಿತ್ಯ ಧರ್ ನಿರ್ದೇಶನದ ಈ ಚಿತ್ರವು 140 ಕೋಟಿ ರೂ. ಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನಾ, ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್, ಸಾರಾ ಅರ್ಜುನ್, ರಾಕೇಶ್ ಬೇಡಿ ಸೇರಿದಂತೆ ದೊಡ್ಡ ತಾರಾಬಳಗವಿದೆ. ಈ ಚಿತ್ರವನ್ನು ಜ್ಯೋತಿ ದೇಶಪಾಂಡೆ, ಆದಿತ್ಯ ಧರ್ ಮತ್ತು ಲೋಕೇಶ್ ಧರ್ ಅವರು ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.