Pushpa 2; the Rule | ಪುಷ್ಪಾ-2 ಸಿನಿಮಾದ ʼಕಿಸ್ಸಿಕ್ʼ ಐಟಂ ಸಾಂಗ್‌ ಬಿಡುಗಡೆ

ಪುಷ್ಪಾ 2 ತಂಡವು ಭಾನುವಾರ ಚೆನ್ನೈನಲ್ಲಿ ವೈಲ್ಡ್ ಫೈರ್ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಕಿಸ್ಸಿಕ್ ಹಾಡನ್ನು ಬಿಡುಗಡೆ ಮಾಡಲಾಯಿತು.;

Update: 2024-11-25 07:31 GMT
ಪುಷ್ಪಾ-2 ಸಿನಿಮಾದಲ್ಲಿ ಶ್ರೀಲೀಲಾ ಅಲ್ಲು ಅರ್ಜುನ್‌ ಅವರೊಂದಿಗೆ ಸೊಂಟ ಬಳುಕಿಸಿದ್ದಾರೆ.
Click the Play button to listen to article

ವರ್ಷದ ಅತೀ ದೊಡ್ಡ ಬಜೆಟ್‌ ಸಿನಿಮಾಗಳಲ್ಲಿ ಒಂದಾದ  'ಪುಷ್ಪ 2: ದಿ ರೂಲ್' ಶೀಘ್ರದಲ್ಲೇ ಚಿತ್ರಮಂದಿರಗಳಿಗೆ ಬರಲಿದೆ.

ರಿಲೀಸ್‌ಗೂ ಮುನ್ನವೇ ಈ ಚಿತ್ರ ಭಾರೀ ನಿರೀಕ್ಷೆ ಹುಟ್ಟಿಹಾಕಿದೆ. ಇತ್ತೀಚೆಗಷ್ಟೇ ಚಿತ್ರತಂಡ ಪಾಟ್ನಾದಲ್ಲಿ ಗ್ರ್ಯಾಂಡ್ ಟ್ರೈಲರ್ ಬಿಡುಗಡೆ ಮಾಡಿದೆ. ಇದೀಗ ಈ ಸಿನಿಮಾದ ಸ್ಪೆಷಲ್ ಐಟಂ ಸಾಂಗ್ ಕಿಸ್ಸಿಕ್ ಬಿಡುಗಡೆಯಾಗಿದೆ. 

ಶ್ರೀಲೀಲಾ ಜೊತೆಗೆ ಅಲ್ಲು ಅರ್ಜುನ್ ಈ ಹಾಡಿನಲ್ಲಿ ನಟಿಸಿದ್ದಾರೆ. ಇವರಿಬ್ಬರ ಮಾಸ್ ಸ್ಟೆಪ್ಸ್ ಹಾಡಿನ ಹೈಲೈಟ್. ಅಲ್ಲು ಅರ್ಜುನ್‌ಗೆ ಪೈಪೋಟಿ ನೀಡುವ ಶ್ರೀಲೀಲಾ ಅವರ ನೃತ್ಯಗಳು ಅಭಿಮಾನಿಗಳನ್ನು ಆಕರ್ಷಿಸುತ್ತಿವೆ. ಈ ಹಾಡನ್ನು ಶುಭಲಶಿ ಹಾಡಿದ್ದಾರೆ. ಚಂದ್ರ ಬೋಸ್ ಸಾಹಿತ್ಯ ನೀಡಿದ್ದು, ದೇವಿಶ್ರೀಪ್ರಸಾದ್ ಸಂಗೀತ ನೀಡಿದ್ದಾರೆ. 

ಪುಷ್ಪಾ 2 ತಂಡವು ಭಾನುವಾರ ಚೆನ್ನೈನಲ್ಲಿ ವೈಲ್ಡ್ ಫೈರ್ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಕಿಸ್ಸಿಕ್ ಹಾಡನ್ನು ಬಿಡುಗಡೆ ಮಾಡಲಾಯಿತು. ಚೆನ್ನೈ ಸಮಾರಂಭದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹಾಗೂ ಚಿತ್ರತಂಡ ಭಾಗವಹಿಸಿತ್ತು. ಕಿಸ್ಸಿಕ್ ಹಾಡು ಸದ್ಯ ಟ್ರೆಂಡಿಂಗ್ ಆಗಿದೆ.

Full View

ಕಿಸ್ಸಿಕ್ ಹಾಡಿ ಹೊಗಳಿಕೆಯ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳಿಗೂ ಗುರಿಯಾಗುತ್ತಿದೆ. ಪುಷ್ಪ 2 ಚಿತ್ರದ ಸಂಪೂರ್ಣ ಕಥೆಯು 1990 ರ ದಶಕದ ಹಿನ್ನಲೆಯಲ್ಲಿದೆ. ಆದರೆ ಕಿಸ್ಸಿಕ್ ಹಾಡಿನ ಸಾಹಿತ್ಯವೇ ಇಂದಿನ ಟ್ರೆಂಡ್‌ನಂತಿದೆ. ಸೋಷಿಯಲ್ ಮೀಡಿಯಾಗಳ ಹಲವು ಫೇಮಸ್ ಪದಗಳನ್ನು ಹಾಡಿರುವುದನ್ನು ನೆಟ್ಟಿಗರು ಟೀಕಿಸುತ್ತಿದ್ದಾರೆ. 

ಪುಷ್ಪ 2 ಚಿತ್ರ ಡಿಸೆಂಬರ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಪುಷ್ಪ 2 ಚಿತ್ರದಲ್ಲಿ ಮಲಯಾಳಂ ನಟ ಫಹಾದ್ ಫಾಜಿಲ್ ವಿಲನ್ ಆಗಿ ನಟಿಸುತ್ತಿದ್ದಾರೆ. ಸುನೀಲ್, ಜಗಪತಿ ಬಾಬು ಮತ್ತು ಅನಸೂಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪುಷ್ಪ 2 ಟ್ರೈಲರ್ ಅನ್ನು ಇತ್ತೀಚೆಗೆ ಬಿಹಾರದ ಪಾಟ್ನಾದಲ್ಲಿ ಬಿಡುಗಡೆ ಮಾಡಲಾಯಿತು. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಭಾಗವಹಿಸಿದ್ದರು.

Tags:    

Similar News