ಅಮಿತಾಬ್ ಬಚ್ಚನ್‌ಗೆ ಲತಾ ದೀನನಾಥ್ ಮಂಗೇಶ್ಕರ್ ಪುರಸ್ಕಾರ

ಬಾಲಿವುಡ್‌ ಹಿರಿಯ ನಟ ಅಮಿತಾಬ್ ಬಚ್ಚನ್ ಅವರಿಗೆ ಬುಧವಾರ (ಏ.24) ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.;

Update: 2024-04-25 06:27 GMT
ಅಮಿತಾಬ್ ಬಚ್ಚನ್‌ ಅವರಿಗೆ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
Click the Play button to listen to article

ಮುಂಬೈ: ಬಾಲಿವುಡ್‌ ಹಿರಿಯ ನಟ ಅಮಿತಾಬ್ ಬಚ್ಚನ್ ಅವರಿಗೆ ಬುಧವಾರ (ಏ.24) ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗಾನ ಕೋಗಿಲೆ ಲತಾ ಮಂಗೇಶ್ವರ್ ಅವರು 2022ರಲ್ಲಿ ನಿಧನರಾದ ನಂತರ ಅವರ ಹೆಸರಿನಲ್ಲಿ ಅವರ ಕುಟುಂಬ ಟ್ರಸ್ಟ್ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ.

ಲತಾ ಅವರ ತಂದೆ ದೀನಾನಾಥ ಮಂಗೇಶ್ವರ್ ಅವರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ರಾಷ್ಟ್ರ ನಿರ್ಮಾಣದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ ಮೊದಲಿಗರು. 2023ರಲ್ಲಿ ಆಶಾ ಬೋಸ್ಲೆ ಅವರಿಗೆ ಪ್ರದಾನ ಮಾಡಲಾಗಿತ್ತು.

ಅದರಂತೆಯೇ 81 ವರ್ಷದ ಅಮಿತಾಬ್ ಅವರು ಈ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಕಳೆದ ಐದು ದಶಕಗಳಿಂದ ಸಿನಿಮಾ ಕ್ಷೇತ್ರದಲ್ಲಿರುವ ಅಮಿತಾಬ್ ಬಚ್ಚನ್‌, ಝಂಜೀರ್, ದೀವಾರ್, ಚುಪೈ ಚುಪ್ಪೆ, ಮೊಹಬತ್ತೇ, ಪೀಕು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ಅಭಿನಯಿಸುತ್ತಿದ್ದಾರೆ.

'ಇಂಥ ಶ್ರೇಷ್ಠ ಪ್ರಶಸ್ತಿಗೆ ನಾನು ಅರ್ಹ ಎಂದು ಎಂದಿಗೂ ಭಾವಿಸಿಲ್ಲ. ಆದರೆ ಹೃದಯನಾಥ್ ಮಂಗೇಶ್ವರ್ ಅವರು ನಾನು ಇಲ್ಲಿಗೆ ಬರಲು ಬಲವಂತಪಡಿಸಿದರು. ಕಳೆದ ವರ್ಷವೂ ನನ್ನನ್ನು ಆಹ್ವಾನಿಸಿದ್ದರು. ಕಳೆದ ಬಾರಿ ಬಾರದಿರುವುದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಆಗ ಆರೋಗ್ಯ ಉತ್ತಮವಾಗಿರಲಿಲ್ಲ ಎಂದು ಹೇಳಿದ್ದೆ. ಆದರೆ ನಾನು ಆಗ ಆರೋಗ್ಯವಾಗಿದ್ದೆ. ಆದರೆ ಬರಲು ಮನಸ್ಸಿರಲಿಲ್ಲ. ಆದರೆ ಈ ವರ್ಷ ಹೇಳಲು ನನ್ನ ಬಳಿ ಯಾವುದೇ ಕಾರಣ ಇರಲಿಲ್ಲ. ಹೀಗಾಗಿ ಬರಲೇಬೇಕಾಯಿತು' ಎಂದು ಪ್ರಶಸ್ತಿ ಸ್ವೀಕರಿಸಿ ಅಮಿತಾಬ್ ತಮ್ಮ ಅನಿಸಿಕೆ ಹಂಚಿಕೊಂಡರು.

ಪ್ರಶಸ್ತಿಯನ್ನು ಆಶಾ ಬೋಸ್ಲೆ ಪ್ರದಾನ ಮಾಡಬೇಕಿತ್ತು. ಆದರೆ ಅನಾರೋಗ್ಯದಿಂದ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದರು. ಹೀಗಾಗಿ ಲತಾ ಮಂಗೇಶ್ವರ್ ಅವರ ಸೋದರಿ ಉಷಾ ಮಂಗೇಶ್ವರ್ ಅವರು ಅಮಿತಾಬ್‌ಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲತಾ ಅವರ ಸೋದರ ಹೃದಯನಾಥ ಮಂಗೇಶ್ವರ್ ಅವರು ವಹಿಸಿದ್ದರು.

Tags:    

Similar News