ಟಾಲಿವುಡ್‌ನತ್ತ ಕಾಂತಾರ ಚೆಲುವೆ ಸಪ್ತಮಿ ಗೌಡ
ಕಾಂತಾರ ಸಿನಿಮಾದ ಮೂಲಕ ಜನರ ಹೃದಯವನ್ನ ಗೆದ್ದ ಸಪ್ತಮಿ ಗೌಡ ಮೊದಲ ತೆಲುಗು ಚಿತ್ರವನ್ನ ಒಪ್ಪಿಕೊಂಡಿದ್ದಾರೆ.;
ʼಕಾಂತಾರʼ ಸಿನಿಮಾದ ಮೂಲಕ ಜನರ ಹೃದಯವನ್ನು ಗೆದ್ದ ಸಪ್ತಮಿ ಗೌಡ ʼಯುವʼ ಸಿನಿಮಾದಲ್ಲೂ ತಮ್ಮದೇ ಆದ ಛಾಪು ಮೂಡಿಸಿಕೊಂಡಿದ್ದಾರೆ. ಇದೀಗ ಸಪ್ತಮಿಗೌಡ ಮೊದಲ ತೆಲುಗು ಚಿತ್ರವನ್ನು ಒಪ್ಪಿಕೊಂಡಿದ್ದಾರೆ.
ಸಪ್ತಮಿಗೌಡ, ತೆಲುಗು ಚಿತ್ರರಂಗಕ್ಕೆ ಕಾಲಿಡ್ತಾರೆ ಎನ್ನುವ ಸುದ್ದಿ ಕಳೆದ ವರ್ಷಾಂತ್ಯದಲ್ಲಿಯೇ ಕೇಳಿ ಬಂದಿತ್ತು. ಜಯಂ ಹೀರೋ ನಿತಿನ್ ಅವರ ಮುಂದಿನ ಚಿತ್ರ ʼತಮ್ಮುಡುʼ ದಲ್ಲಿ ಸಪ್ತಮಿ ಗೌಡ ಹೀರೋಯಿನ್ ಎಂಬ ವಿಚಾರ ಜಗಜ್ಜಾಹೀರಾಗಿತ್ತು. ಆದರೆ ಆ ಸುದ್ದಿ ಇದೀಗ ಅಧಿಕೃತವಾಗಿದ್ದು, ʼತಮ್ಮುಡುʼ ಚಿತ್ರದ ಬಗ್ಗೆ, ತಮ್ಮ ಪಾತ್ರದ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
ʼತಮ್ಮುಡುʼ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಲು, ಸಪ್ತಮಿ ಗೌಡ ತೂಕ ಇಳಿಸಿಕೊಂಡಿದ್ದಾರೆ. ಸ್ಲಿಮ್ ಆಗಿದ್ದಾರೆ. ಇನ್ನು ಸಪ್ತಮಿ ಗೌಡ ಈ ಚಿತ್ರಕ್ಕೆ ಕುದುರೆ ಸವಾರಿಯನ್ನೂ ಕಲಿತಿದ್ದಾರೆ.
ತಮ್ಮ ಮೊದಲ ತೆಲುಗು ಚಿತ್ರದಲ್ಲಿಯೇ ನಿತಿನ್ ಅವರಂತಹ ಪ್ರತಿಭಾವಂತ ನಟನ ಜೊತೆ ಸಪ್ತಮಿ ತೆರೆ ಹಂಚಿಕೊಳ್ಳಲಿದ್ದಾರೆ. ವಕೀಲ್ ಸಾಬ್ ಅಂತಹ ಚಿತ್ರವನ್ನು ನಿರ್ದೇಶಿಸಿರುವ ವೇಣು ಶ್ರೀರಾಮ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಟಾಲಿವುಡ್‌ನ ಖ್ಯಾತ ನಿರ್ಮಾಪಕ ದಿಲ್ ರಾಜು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.