MS Dhoni : ಧೋನಿ ಚಾಣಾಕ್ಷ ಸ್ಟಂಪಿಂಗ್‌, ಅಂಪೈರ್ ತೀರ್ಪಿಗೂ ಕಾಯದೆ ಹೊರನಡೆದ ಸೂರ್ಯಕುಮಾರ್

ಐಪಿಎಲ್‌ 18ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ (ಮಾ.23) ಮುಂಬೈ ಇಂಡಿಯನ್ಸ್‌ ವಿರುದ್ಧ ಸಿಎಸ್‌ಕೆ ತಂಡ ಕಣಕ್ಕೆ ಇಳಿದಾಗಲೂ ಧೋನಿ ಸ್ಟಂಪಿಂಗ್ ಮೂಲಕ ಅಭಿಮಾನಿಗಳ ಗಮನ ಸೆಳೆದಿರುವ ವಿಡಿಯೊ ವೈರಲ್ ಆಗಿದೆ.;

Update: 2025-03-24 05:15 GMT

ಎಂಎಸ್‌ ಧೋನಿ ವೃತ್ತಿಪರ ಕ್ರಿಕೆಟ್ ಆಡುವುದು ಐಪಿಎಲ್ ವೇಳೆ ಮಾತ್ರ. ಇದೀಗ ಸುಮಾರು 10 ತಿಂಗಳ ನಂತರ, ಮೈದಾನಕ್ಕಿಳಿದಿರುವ ಅವರು ಅಷ್ಟೇ ಫಿಟ್ ಆಗಿ ಆಡುತ್ತಿರುವುದು ಎಲ್ಲರ ಗಮನ ಸೆಳೆದಿದ್ದಾರೆ. ವಿಶ್ವದ ಅತ್ಯಂತ ಚಾಣಾಕ್ಷ ಹಾಗೂ ತೀಕ್ಷ್ಣ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರಾಗಿರುವ ಧೋನಿ, ಈ ಬಾರಿಯೂ ವಿಕೆಟ್​ಗಳ ಹಿಂದೆ ತಮ್ಮ ವೇಗ ಮತ್ತು ಚಾಣಾಕ್ಷತನ ಮರೆಯುತ್ತಿದ್ದಾರೆ. 43ನೇ ವಯಸ್ಸಿನ ಅವರ ಚುರುಕುತನಕ್ಕೆ ಯುವ ಕ್ರಿಕೆಟಿಗರೇ ಮೋಡಿಗೆ ಒಳಗಾಗಿದ್ದಾರೆ.


ಪ್ರತಿ ಬಾರಿಯೂ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಧೋನಿ ಆಡುವುದನ್ನು ನೋಡಲು ಬಯಸುತ್ತಾರೆ. ಅಂತೆಯೇ ಅಭಿಮಾನಿಗಳನ್ನುಅವರು ಯಾವತ್ತೂ ನಿರಾಶೆಗೊಳಿಸಿಲ್ಲ. ಈ ಬಾರಿಯೂ ಅವರು ಖುಷಿ ಕೊಟ್ಟಿದ್ದಾರೆ. ಅದರು ಸ್ಟಂಪಿಂಗ್ ಮೂಲಕ.

ಐಪಿಎಲ್‌ 18ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ (ಮಾ.23) ಮುಂಬೈ ಇಂಡಿಯನ್ಸ್‌ ವಿರುದ್ಧ ಸಿಎಸ್‌ಕೆ ತಂಡ ಕಣಕ್ಕೆ ಇಳಿದಾಗಲೂ ಧೋನಿ ಸ್ಟಂಪಿಂಗ್ ಮೂಲಕ ಅಭಿಮಾನಿಗಳ ಗಮನ ಸೆಳೆದಿರುವ ವಿಡಿಯೊ ವೈರಲ್ ಆಗಿದೆ.

ನೂರ್ ಅಹ್ಮದ್ ಬೌಲಿಂಗ್‌ನಲ್ಲಿ ಧೋನಿ ಅದ್ಭುತ ಸ್ಟಂಪಿಂಗ್‌ ಮಾಡುವ ಮೂಲಕ ಎದುರಾಳಿ ತಂಡದ ನಾಯಕ ಸೂರ್ಯಕುಮಾರ್ ಯಾದವ್​ ಅವರನ್ನು ಪೆವಿಲಿಯನ್​ಗೆ ಕಳುಹಿಸಿದ್ದರು. ಇದು ಹಾಲಿ ಆವೃತ್ತಿಯ ಅತ್ಯಂತ ಚುರುಕಿನ, ವೇಗದ ಹಾಗೂ ಚಾಣಾಕ್ಷ ವಿಕೆಟ್​ ಕೀಪಿಂಗ್ ಎನಿಸಕೊಳ್ಳುವುದು ಖಚಿತ.

ಮುಂಬೈ ಇಂಡಿಯನ್ಸ್ ತಂಡದ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್, ಯುವ ಎಡಗೈ ಮಣಿಕಟ್ಟು ಸ್ಪಿನ್ನರ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದರು. ಆದರೆ, ಚೆಂಡು ಸೂರ್ಯ ಬ್ಯಾಟ್‌ಗೆ ಸಿಗಲಿಲ್ಲ. ಕ್ಷಣಮಾತ್ರದಲ್ಲಿ ಚೆಂಡನ್ನು ಎತ್ತಿಕೊಂಡ ಧೋನಿ, ಬೇಲ್ಸ್ ಹಾರಿಸಿದರು.

ಅಂಪೈರ್‌ ತೀರ್ಪಿಗೆ ಕಾಯದೆ ಪಿಚ್‌ನಿಂದ ಹೊರನಡೆದ ಸೂರ್ಯ

ಈ ವೇಳೆ ಸೂರ್ಯಕುಮಾರ್‌ಗೆ ಚೇತರಿಸಿಕೊಳ್ಳುವ ಅವಕಾಶವೇ ಸಿಗಲಿಲ್ಲ. ಕನಿಷ್ಠ ಪ್ರತಿಕ್ರಿಯಿಸಲು ಕೂಡಾ ಸಮಯವಿರಲಿಲ್ಲ. ಅಂಪೈರ್‌ ಔಟ್‌ ಎಂದು ತೀರ್ಪು ನೀಡುವ ಮುನ್ನವೇ ಸೂರ್ಯ ಡಗೌಟ್‌ನತ್ತ ಹೆಜ್ಜೆ ಹಾಕಿದರು. ಕನಿಷ್ಠ ರಿಪ್ಲೈ ಕೂಡಾ ನೋಡಲಿಲ್ಲ. ವಿಕೆಟ್‌ ಹಿಂದೆ ಧೋನಿ ನಿಖರತೆ ಏನು ಎಂಬುದು ಸ್ಕೈಗೆ ಸ್ಪಷ್ಟವಾಗಿ ಗೊತ್ತಿರುವಂತಿದೆ. ಹೀಗಾಗಿ ತಾನು ಔಟ್‌ ಎಂದು ನಿರ್ಧರಿಸಿ ಪಿಚ್‌ನಿಂದ ಹೊರನಡೆದಿದ್ದಾರೆ.

ನೂರ್‌ ಅಹ್ಮದ್‌ ಇದೇ ಮೊದಲ ಬಾರಿಗೆ ಸಿಎಸ್‌ಕೆ ಪರ ಆಡುತ್ತಿದ್ದಾರೆ. ಮೊದಲ ಪಂದ್ಯದಲ್ಲೇ ನಾಲ್ಕು ವಿಕೆಟ್‌ ಪಡೆದು ಮಿಂಚಿದ್ದಾರೆ. ಇದೇ ವೇಳೆ ಖಲೀಲ್‌ ಅಹ್ಮದ್‌ 3 ವಿಕೆಟ್‌ ಪಡೆದರು.

Tags:    

Similar News