ಆಸ್ಕರ್ ಅಂಗಳಕ್ಕಿಳಿದ ಭಾರತದ 'ಮಹಾವತಾರ್ ನರಸಿಂಹ' ಸಿನಿಮಾ
ಆಸ್ಕರ್ ಅಂಗಳದಲ್ಲಿ 'ಮಹಾವತಾರ್ ನರಸಿಂಹ' ಚಿತ್ರಕ್ಕೆ ತೀವ್ರ ಸ್ಪರ್ಧೆ ಎದುರಾಗಿದೆ. ಈ ಪಟ್ಟಿಯಲ್ಲಿರುವ ಇತರೆ ಪ್ರಬಲ ಚಿತ್ರಗಳೆಂದರೆ, 'ಕೆ-ಪಾಪ್ ಡೆಮನ್ ಹಂಟರ್ಸ್' , 'ಜೂಟೋಪಿಯಾ 2' , 'ಡೆಮನ್ ಸ್ಲೇಯರ್: ಕಿಮೆಟ್ಸು ನೋ ಯೈಬಾ ಇನ್ಫಿನಿಟಿ ಕ್ಯಾಸಲ್' ಮತ್ತು ಇನ್ನೂ ಹಲವಾರು ಅಂತಾರಾಷ್ಟ್ರೀಯ ಚಲನಚಿತ್ರಗಳು ಸ್ಪರ್ಧೆಯಲ್ಲಿವೆ.
ಮಹಾವತಾರ್ ನರಸಿಂಹ
ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಗಡೆದು ಎಲ್ಲರ ಗಮನಸೆಳೆದ ಮಹಾವತಾರ್ ನರಸಿಂಹ ಈಗ ಆಸ್ಕರ್ ಅಂಗಳದಲ್ಲೂ ಇಂಡಿಯನ್ ಅನಿಮೇಷನ್‌ಗೆ ಮುಖಪತ್ರದ ಸಿನಿಮಾವಾಗಿ ಸುದ್ದಿಯಲ್ಲಿದೆ. 2026ರ 98ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ‘ಬೆಸ್ಟ್ ಅನಿಮೇಟೆಡ್ ಫೀಚರ್ ಫಿಲ್ಮ್’ ವಿಭಾಗಕ್ಕೆ ಅರ್ಹತೆ ಪಡೆದ 35 ಚಿತ್ರಗಳ ಉದ್ದ ಪಟ್ಟಿಯಲ್ಲಿ ಈ ಭಾರತೀಯ ಚಿತ್ರ ಸ್ಥಾನ ಪಡೆದಿರುವುದು, ಇಂದಿನ ಪಾನ್ಇಂಡಿಯಾ ಹಂಗಾಮೆಯನ್ನು ನೇರವಾಗಿ ಹಾಲಿವುಡ್ ಮಂಟಪಕ್ಕೆ ಕರೆದೊಯ್ದಂತಾಗಿದೆ.
ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಪ್ರಕಟಿಸಿರುವ ಈ ಉದ್ದಪಟ್ಟಿಯಲ್ಲಿ, ಹಾಲಿವುಡ್ ಮತ್ತು ಜಪಾನ್‌ನ ಭೀಮ ಚಿತ್ರಗಳ ಜತೆ ಹೋಂಬಾಳೆ ಫಿಲ್ಮ್ಸ್ ನಿರ್ಮಿಸಿದ ಮಹಾವತಾರ್ ನರಸಿಂಹ ಕೂಡ ನಿಂತಿದೆ ಎಂಬುದೇ ಸಿನಿ ವಲಯದ ದೊಡ್ಡ ಚರ್ಚಾ ವಿಷಯ. ಕೆ–ಪಾಪ್ ಡೆಮನ್ ಹಂಟರ್ಸ್, ಜೂಟೋಪಿಯಾ 2, ಡೆಮನ್ ಸ್ಲೇಯರ್: ಕಿಮೆಟ್ಸು ನೋ ಯೈಬಾ – ಇನ್ಫಿನಿಟಿ ಕ್ಯಾಸಲ್, ದಿ ಬ್ಯಾಡ್ ಗೈಸ್ 2 ಸೇರಿದಂತೆ ಜಗತ್ತಿನ ಟಾಪ್‌ಸ್ಟಾರ್ ಅನಿಮೇಷನ್ ಬ್ರ್ಯಾಂಡ್‌ಗಳ ನಡುವೆ ಒಬ್ಬಂಟಿಗ ಭಾರತೀಯ ಸ್ಪರ್ಧಿಯಾಗಿ ನಿಂತಿರುವುದು ಇಂಡಿಯನ್ ಅನಿಮೇಷನ್ ಇಂಡಸ್ಟ್ರಿಗೆ ‘ಗೇಮ್‌ಚೇಂಜರ್’ ಕ್ಷಣವೆಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ತ್ರಿಡಿ ಆನಿಮೇಷನ್
ಭಕ್ತ ಪ್ರಹ್ಲಾದ–ಹಿರಣ್ಯಕಶಿಪು ಪೌರಾಣಿಕ ಸಂಭ್ರಮವನ್ನು ಮಿಶ್ರ ತಂತ್ರಜ್ಞಾನ (2D–3D) ಅನಿಮೇಷನ್ ಮೂಲಕ ಮರುಕಟ್ಟಿರುವ ಮಹಾವತಾರ್ ನರಸಿಂಹ ಚಿತ್ರದಲ್ಲಿ, ಲೋರ್‌ಡ್ ವಿಷ್ಣುವಿನ ಉಗ್ರ ನಾಲ್ಕನೇ ಅವತಾರ ನರಸಿಂಹನ ದೃಶ್ಯ ವೈಭವವೇ ಚಿತ್ರದ ಸೆಲ್ಲಿಂಗ್ ಪಾಯಿಂಟ್ ಆಗಿದೆ. ಅಶ್ವಿನ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಕಲೀಮ್ ಪ್ರೊಡಕ್ಷನ್ಸ್ ಜೊತೆಗೂಡಿ ನಿರ್ಮಿಸಿದ್ದು, ಪ್ರಹ್ಲಾದನ ಭಕ್ತಿ, ಹಿರಣ್ಯಕಶಿಪುವಿನ ಅಹಂಕಾರ ಮತ್ತು ನರಸಿಂಹ ಅವತಾರದ ಕ್ಲೈಮ್ಯಾಕ್ಸ್ ಅನ್ನು ಆಧುನಿಕ ಪ್ರೇಕ್ಷಕರಿಗೆ ಸೂಟಾಗುವ ರೀತಿಯಲ್ಲಿ ಪ್ಯಾಕ್ ಮಾಡಿರುವುದಕ್ಕೆ ಸಿನಿಮಾ ವಲಯದಿಂದ ಭಾರಿ ಮೆಚ್ಚುಗೆ ಸಿಕ್ಕಿದೆ.
ಬಾಕ್ಸ್ ಆಫೀಸ್ ವರದಿಗಳ ಪ್ರಕಾರ, ಮಹಾವತಾರ್ ನರಸಿಂಹ ವಿಶ್ವಾದ್ಯಂತ 300 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ವಸೂಲು ಮಾಡಿ, 2025ರ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳ ಟಾಪ್ ಲಿಸ್ಟ್‌ನಲ್ಲಿ ಸೇರ್ಪಡೆಗೊಂಡಿದೆ. ಜುಲೈ 25ರಿಂದ ಭಾರತದಲ್ಲಿ ಥಿಯೇಟ್ರಿಕಲ್ ರನ್ ಆರಂಭಿಸಿದ ಈ ಚಿತ್ರ, ಜುಲೈ 31ರಿಂದ ಶ್ರೀಲಂಕಾ, ಆಸ್ಟ್ರೇಲಿಯಾ, ಮಲೇಶಿಯಾ ಹಾಗೂ ಯೂರೋಪಿನ ಹಲವು ದೇಶಗಳಲ್ಲಿ ಹಂತ ಹಂತವಾಗಿ ರಿಲೀಸ್ ಆಗಿ,
ಅಕಾಡೆಮಿ ಈಗ ಪ್ರಕಟಿಸಿರುವ ಉದ್ದಪಟ್ಟಿಯಿಂದ ಕೇವಲ ಐದು ಚಿತ್ರಗಳು ಮಾತ್ರ ಅಂತಿಮ ನಾಮನಿರ್ದೇಶನ ಹಂತಕ್ಕೆ ಬರಲಿದ್ದು, ಆ ಫೈನಲ್ ಲಿಸ್ಟ್ ಜನವರಿ 22, 2026ರಂದು ಹೊರಬೀಳಲಿದೆ ಎಂದು ಸಂಸ್ಥೆ ತಿಳಿಸಿದೆ. ಒಂದು ವೇಳೆ ಮಹಾವತಾರ್ ನರಸಿಂಹ ಅಂತಿಮ ಐದು ಪಟ್ಟಿಗೆ ಸೇರಲು ಸಾಧ್ಯವಾದರೆ, ಆಸ್ಕರ್ ‘ಬೆಸ್ಟ್ ಅನಿಮೇಟೆಡ್ ಫೀಚರ್’ ವರ್ಗದಲ್ಲಿ ನಾಮನಿರ್ದೇಶನ ಪಡೆಯುವ ಮೊದಲ ಭಾರತೀಯ ಅನಿಮೇಟೆಡ್ ಫೀಚರ್ ಆಗಿ ಇತಿಹಾಸ ನಿರ್ಮಿಸುವುದು ಖಚಿತ.