ಫೆಡರಲ್ ಸಮೀಕ್ಷೆ | ಡಿಎಂಕೆಗೆ ʼಜೈʼ ಎನ್ನಲಿರುವ ತಮಿಳುನಾಡು ಮತದಾರರು
ಫೆಡರಲ್-ಪುತಿಯಾತಲೈಮುರೈ-ಆಪ್ಟ್ 2024ರ ಚುನಾವಣಾ ಪೂರ್ವ ಸಮೀಕ್ಷೆಯು ಡಿಎಂಕೆ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ, ಆದರೆ 2019ಕ್ಕೆ ಹೋಲಿಸಿದರೆ ಅದರ ಮತ-ಪಾಲು ಕುಸಿಯುತ್ತದೆ ಎಂದು ಹೇಳಲಾಗಿದ್ದು, ಎಐಎಡಿಎಂಕೆಗೆ ಸರಿಸಮನಾಗಿ ಬಿಜೆಪಿ ಮುನ್ನಡೆಯುತ್ತಿದೆ ಎಂದು ಸಮೀಕ್ಷೆ ಹೇಳುತ್ತಿದೆ.
ದಶಕಗಳಿಂದ ತಮಿಳುನಾಡು ವಿಧಾನಸಭಾ ಮತ್ತು ಲೋಕಸಭೆ ಚುನಾವಣೆಗಳಲ್ಲಿ, ಡಿಎಂಕೆ-ಎಐಎಡಿಎಂಕೆ ಎರಡು ಪಕ್ಷಗಳ ನಡುವೆ ಪೈಪೋಟಿ ಏರ್ಪಡುತ್ತದೆ. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಇತರ ಪ್ರಮುಖ ಪಕ್ಷಗಳು ಡಿಎಂಕೆ ಅಥವಾ ಎಐಎಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತವೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಈ ಲೆಕ್ಕಾಚಾರಗಳು ಬದಲಾಗುವ ನಿರೀಕ್ಷೆ ಇದೆ ಎಂದು ಫೆಡರಲ್-ಪುತಿಯಾತಲೈಮುರೈ-ಆಪ್ಟ್ 2024ರ ಚುನಾವಣಾ ಪೂರ್ವ ಸಮೀಕ್ಷೆ ಸೂಚಿಸುತ್ತದೆ. 2024ರ ಲೋಕಸಭಾ ಚುನಾವಣೆಯ ಸಮೀಕ್ಷೆಯನ್ನು ದೇಶಾದ್ಯಂತ 19 ರಾಜ್ಯಗಳನ್ನು ಒಳಗೊಂಡಂತೆ ತಮಿಳುನಾಡಿನಲ್ಲಿಯೂ ನಡೆಸಲಾಯಿತು.
ಮತ ಹಂಚಿಕೆ (ಪ್ರಮಾಣ)
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷವು ಲೋಕಸಭೆ ಚುನಾವಣೆಯಲ್ಲೂ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಸಮೀಕ್ಷೆಯು ಬಹಿರಂಗಪಡಿಸುತ್ತವೆ. ಆದಾಗ್ಯೂ, 2019ರ ಚುನಾವಣೆಗೆ ಹೋಲಿಸಿದರೆ ಅದರ ಮತ ಹಂಚಿಕೆಯ ಪ್ರಮಾಣ ಈ ಬಾರಿ ಕುಸಿಯುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳುತ್ತದೆ.
ಮತ್ತೊಂದೆಡೆ, ಎಐಎಡಿಎಂಕೆ 2019ರ ಚುನಾವಣೆಯಲ್ಲಿ ಗಳಿಸಿದ ಮತಹಂಚಿಕೆಯ ಪ್ರಮಾಣವನ್ನು ಹಾಗೆಯೇ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಕಳೆದ ವರ್ಷ ಎಐಎಡಿಎಂಕೆ ಜೊತೆಗಿನ ಸಂಬಂಧವನ್ನು ಮುರಿದುಕೊಂಡಿದ್ದ ಎಐಎಡಿಎಂಕೆಗೆ ಸರಿಸಮನಾದ ಮತ ಹಂಚಿಕೆ ಪ್ರಮಾಣವನ್ನು ಪಡೆಯುವ ಮೂಲಕ ಬಿಜೆಪಿ ಅಚ್ಚರಿ ಮೂಡಿಸುತ್ತಿದೆ.
ಪ್ರದೇಶವಾರು ಟ್ರೆಂಡ್‌ಗಳು ಸಂಖ್ಯೆಯಲ್ಲಿ ಕುತೂಹಲ ಮೂಡಿಸಿವೆ:
ದಕ್ಷಿಣ ವಲಯದಲ್ಲಿ, ಡಿಎಂಕೆ ಶೇಕಡಾ 37 ಕ್ಕಿಂತ ಹೆಚ್ಚು ಮುನ್ನಡೆ ಸಾಧಿಸಿದರೆ, ಬಿಜೆಪಿ ಶೇಕಡಾ 19.5 ಮತ್ತು ಎಐಎಡಿಎಂಕೆ ಶೇಕಡಾ 12.5 ರಷ್ಟು ಮುನ್ನಡೆ ಸಾಧಿಸಿದೆ.
ಪಶ್ಚಿಮ ವಲಯದಲ್ಲಿ ಮಾದರಿಯು ಬದಲಾಗುತ್ತದೆ, ಅಲ್ಲಿ ಡಿಎಂಕೆ 31 ಶೇಕಡಾಕ್ಕಿಂತ ಕಡಿಮೆ ಮತ-ಪಾಲು ಪಡೆದು ಮುನ್ನಡೆ ಸಾಧಿಸಿದೆ, ನಂತರ ಬಿಜೆಪಿ 22 ಶೇಕಡಾ ಮತ್ತು ಎಐಎಡಿಎಂಕೆ ಶೇಕಡಾ 21.4 ರಷ್ಟು ಮತ ಪಡೆಯಲಿದೆ.
ಕೇಂದ್ರ ವಲಯದಲ್ಲಿ, ಡಿಎಂಕೆ 46 ಪ್ರತಿಶತದಷ್ಟು ಹೆಚ್ಚಿನ ಮತ ಪಡೆಯುತ್ತದೆ. ನಂತರದ ಪ್ರತಿಸ್ಪರ್ಧಿ ಎಐಎಡಿಎಂಕೆ ಶೇಕಡಾ 20.3, ನಂತರ ಬಿಜೆಪಿ ಶೇ.11ರಷ್ಟು ಮತ ಪಡೆಯಲಿದೆ.
ಉತ್ತರ ವಲಯದಲ್ಲಿ, ಯಾವಾಗಲೂ ಡಿಎಂಕೆ ಭದ್ರಕೋಟೆ ಎಂದು ಪರಿಗಣಿಸಲಾಗಿದೆ, ಪಕ್ಷದ ಮತ-ಪಾಲು ಶೇಕಡಾ 35.5 ರಷ್ಟಿದೆ. ಎಐಎಡಿಎಂಕೆ ಶೇ.20ರಷ್ಟಿದ್ದರೆ, ಬಿಜೆಪಿ ಶೇ.18ರಷ್ಟಿದೆ.
ರಾಜ್ಯದ ರಾಜಧಾನಿ ಚೆನ್ನೈನಲ್ಲಿ ಡಿಎಂಕೆಗೆ ಸುಮಾರು 47 ಪ್ರತಿಶತ ಮತಗಳು ಬಂದರೆ, ಬಿಜೆಪಿ ಶೇ. 22 ರಷ್ಟು ಮತ ಪಡೆದು ಎರಡನೇ ಸ್ಥಾನದಲ್ಲಿದೆ, ಆದರೆ ಎಐಎಡಿಎಂಕೆ ಶೇಕಡಾ 10.4 ರಷ್ಟು ಮತ ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದೆ.
ಒಟ್ಟಾರೆಯಾಗಿ, 2019 ರ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ಶೇ. 53.3% ಮತಗಳನ್ನು ಪಡೆದಿತ್ತು ಆದರೆ ಈ ಬಾರಿ ಶೇ. 38 ಕ್ಕಿಂತ ಹೆಚ್ಚಿನ ಮತ ಪಡೆಯುವ ಸಾಧ್ಯತೆ ಇದೆ. ಬಿಜೆಪಿ 18.5 ರಷ್ಟು ಮತ ಹಂಚಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದೆ, ಇದು 2019 ರಲ್ಲಿ ಶೇ. 3.7 ರಷ್ಟು ಮತ ಪಡೆದಿತ್ತು. ಎಐಎಡಿಎಂಕೆ 17.3 ಶೇಕಡಾ ಮತ-ಪಾಲನ್ನು ಪಡೆಯಲು ಸಿದ್ಧವಾಗಿದೆ, 2019 ರಲ್ಲಿ ಶೇಕಡಾ 18.7 ಮತ ಪಡೆದಿತ್ತು.
ಪ್ರತಿಪಕ್ಷ ನಾಯಕರ ಪೈಕಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಆಗಬೇಕಾ? ಎನ್ನುವ ಪ್ರಶ್ನೆಗೆ ಸುಮಾರು 51 ಪ್ರತಿಶತದಷ್ಟು ಜನರು ಬೆಂಬಲಿಸುತ್ತಾರೆ ಎಂದು ಸಮೀಕ್ಷೆಯ ವರದಿ ಹೇಳಿದೆ.
ಯಾರು ಹೆಚ್ಚು ಸ್ಥಾನಗಳನ್ನು ಗಳಿಸುತ್ತಾರೆ?
ತಮಿಳುನಾಡಿನ 39 ಲೋಕಸಭಾ ಸ್ಥಾನಗಳ ಪೈಕಿ ಡಿಎಂಕೆ 29 ಸ್ಥಾನಗಳನ್ನು ಗೆಲ್ಲಲಿದೆ, ಪ್ರತಿಸ್ಪರ್ಧಿಗಳಾದ ಬಿಜೆಪಿ ಮತ್ತು ಎಐಎಡಿಎಂಕೆ ತಲಾ 4-6 ಸ್ಥಾನಗಳನ್ನು ಗಳಿಸಲಿದೆ ಎಂದು ಎಂದು ಫೆಡರಲ್ ಸಮೀಕ್ಷೆ ಭವಿಷ್ಯ ನುಡಿದಿದೆ.
ಡಿಎಂಕೆಗೆ ಈ ಬಾರಿ ಸುಲಭದ ಜಯ ಸಿಕ್ಕರೂ ಕೂಡ 2019 ರಲ್ಲಿ ಅದು ಗಳಿಸಿದ 38 ಸ್ಥಾನಗಳಿಗಿಂತ ಕಡಿಮೆ ಸ್ಥಾನಗಳನ್ನು ಪಡೆಯಲಿದೆ, ಇನ್ನೂ ಎಐಎಡಿಎಂಕೆಗೆ ಕೇವಲ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಬಹುದು ಎಂದು ಫೆಡರಲ್-ಪುತಿಯಾತಲೈಮುರೈ-ಆಪ್ಟ್ 2024ರ ಚುನಾವಣಾ ಪೂರ್ವ ಸಮೀಕ್ಷೆಯು ಹೇಳುತ್ತದೆ.