ಮತಗಟ್ಟೆ ಸಮೀಕ್ಷೆ | ರಾಜ್ಯದಲ್ಲಿ ಬಿಜೆಪಿ ಮೇಲುಗೈ, ನಿರೀಕ್ಷಿತ ಸ್ಥಾನ ಗಳಿಕೆಯಲ್ಲಿ ಕಾಂಗ್ರೆಸ್‌ ವಿಫಲ

Update: 2024-06-01 13:55 GMT
ಫೋಟೋ ಕೃಪೆ: ಟಿವಿ9

ಇಂದು (ಶುಕ್ರವಾರ) ಲೋಕಸಭೆ ಚುನಾವಣೆಯ 7 ಹಂತದ ಮತದಾನ ಮುಕ್ತಾಯಗೊಂಡಿದ್ದು, ಇದೀಗ ವಿವಿಧ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿವೆ.

ಜೂನ್ 4ರಂದು ಮಂಗಳವಾರ ಮತ ಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕದಲ್ಲಿ 2 ಹಾಗೂ 3ನೇ ಹಂತಗಳಲ್ಲಿ ಲೋಕಸಭೆ ಚುನಾವಣೆಗಳು ನಡೆದಿದ್ದವು. ರಾಜ್ಯದ ಮೊದಲ ಹಂತದಲ್ಲಿ ಏಪ್ರಿಲ್ 26ರಂದು ಹಾಗೂ ಎರಡನೇ ಹಂತದಲ್ಲಿ ಮೇ 7ರಂದು ತಲಾ 14 ರಂತೆ 28 ಕ್ಷೇತ್ರಗಳಿಗೆ ಮತದಾನ ನಡೆದಿತ್ತು.

ಟಿವಿ9 ಪೋಲ್‌ಸ್ಟಾರ್ಟ್‌ ಪೀಪಲ್ಸ್ ನಡೆಸಿದ ಮತಗಟ್ಟೆ ಸಮೀಕ್ಷೆ ಹೊರಬಂದಿದ್ದು, ಕರ್ನಾಟಕದಲ್ಲಿ ಕಳೆದ ಬಾರಿಯಷ್ಟು ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ. ಕಳೆದ ಬಾರಿ, ಅಂದರೆ 2019ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 26 ಸ್ಥಾನಗಳನ್ನು ಗೆದ್ದು ಬೀಗಿದ್ದ ಬಿಜೆಪಿಗೆ ಈ ಬಾರಿ ತುಸು ಹಿನ್ನಡೆಯಾಗಿದೆ. ಮತ್ತೊಂದೆಡೆ, ರಾಜ್ಯದ ಆಡಳಿತರೂಢ ಕಾಂಗ್ರೆಸ್ ತುಸು ಬಲ ವೃದ್ಧಿಸಿಕೊಂಡಿದ್ದರೂ ನಿರೀಕ್ಷಿತ ಸ್ಥಾನ ಗಳಿಸಿಲ್ಲ.

ಮತ್ತೊಂದೆಡೆ ಜೆಡಿಎಸ್ ತುಸು ಬಲ ವೃದ್ಧಿಸಿಕೊಂಡಿದೆ ಎಂದು ಟಿವಿ9 ಪೋಲ್‌ಸ್ಟಾರ್ಟ್‌ ಪೀಪಲ್ಸ್‌ ನಡೆಸಿದ ಮತಗಟ್ಟೆ ಸಮೀಕ್ಷೆ ಹೇಳುತ್ತಿದೆ.

ಟಿವಿ9 ಪೋಲ್‌ಸ್ಟಾರ್ಟ್‌ ಪೀಪಲ್ಸ್ ಇನ್‌ಸೈಟ್‌

ಬಿಜೆಪಿ- 18 ಸ್ಥಾನ

ಕಾಂಗ್ರೆಸ್- 8 ಸ್ಥಾನ

ಜೆಡಿಎಸ್-‌ 2 ಸ್ಥಾನ

ನ್ಯೂಸ್18 ಎಕ್ಸಿಟ್ ಪೋಲ್

ನ್ಯೂಸ್18 ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದಿದೆ. ಕರ್ನಾಟಕದಲ್ಲಿ ಜನರ ನಾಡಿ ಮಿಡಿತ ಹೇಗಿದೆ ಎಂಬುದನ್ನು ನ್ಯೂಸ್18 ಎಕ್ಸಿಟ್ ಪೋಲ್ ಅಂಕಿ ಸಂಖ್ಯೆಗಳನ್ನು ನೀಡಿದೆ. ನ್ಯೂಸ್18 ಎಕ್ಸಿಟ್ ಪೋಲ್ ಪ್ರಕಾರ ಈ ಬಾರಿಯೂ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಹಿನ್ನೆಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್‌ ಪಕ್ಷ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳು ಕೈಹಿಡದಿಲ್ಲ ಎನ್ನುವುದು ಎಕ್ಸಿಟ್‌ ಪೋಲ್‌ ಹೇಳುತ್ತಿವೆ.

ನ್ಯೂಸ್18 ಎಕ್ಸಿಟ್ ಪೋಲ್:

ಕಾಂಗ್ರೆಸ್- 3ರಿಂದ 7 ಸ್ಥಾನ

ಬಿಜೆಪಿ ಹಾಗೂ ಜೆಡಿಎಸ್- 23ರಿಂದ 26 ಸ್ಥಾನ 

Tags:    

Similar News