
ದ ಫೆಡರಲ್ ಸಮೀಕ್ಷೆ | ಬಿಜೆಪಿ ಒಲಿದ ಉತ್ತರ ಪ್ರದೇಶ; ಅಸ್ಸಾಂ: ಎನ್‌ಡಿಎ ಮುನ್ನಡೆ
ದ ಫೆಡರಲ್-ಪುತಿಯಾತಲೈಮುರೈ-ಆಪ್ಟ್ 2024 ರ ಚುನಾವಣಾ ಪೂರ್ವ ಸಮೀಕ್ಷೆಯು ಹಿಂದಿ ಹೃದಯ ಭಾಗದ ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿ ಬಿಜೆಪಿಯ ಆಕ್ರಮಣಕಾರಿಯಾಗಿದೆ ಎಂದು ಸೂಚಿಸುತ್ತದೆ. ಅಸ್ಸಾಂ ನಲ್ಲಿ ಬಿಜೆಪಿ ತನ್ನ ಮಿತ್ರ, ಎಜಿಪಿ (AGP)ಯೊಂದಿಗೆ ಮುನ್ನಡೆ ಸಾಧಿಸುತ್ತಿದೆ ಎಂದು ಸಮೀಕ್ಷೆ ಹೇಳಿದೆ.
ನೀವು ಉತ್ತರ ಪ್ರದೇಶವನ್ನು ಗೆದ್ದರೆ, ನೀವು ಭಾರತವನ್ನು ಗೆಲ್ಲುತ್ತೀರಿ ಎಂಬ ರಾಜಕೀಯ ಗಾದೆಯು ಉತ್ತರ ಪ್ರದೇಶವು ವಿಶಾಲ ಅರ್ಥದಲ್ಲಿ ಹೇಗೆ ದೇಶದ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದರ ದ್ಯೋತಕವಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಬಿಜೆಪಿಯ ಜಗನ್ನಾಥ ರಥ ಭಾರೀ ವೇಗ ಪಡೆದುಕೊಂಡು ಮುನ್ನುಗ್ಗುತ್ತಿರುವಂತೆ ತೋರುತ್ತಿದೆ. ಈಶಾನ್ಯ ಭಾಗದಲ್ಲಿ ಬಿಜೆಪಿ ತನ್ನ ಸ್ಥಿರ ಬೆಳವಣಿಗೆಯ ಗತಿಯನ್ನು ಮುಂದುವರಿಸಿದೆ ಎನ್ನಬಹುದು.
ಉತ್ತರ ಪ್ರದೇಶದ ಸಮೀಕ್ಷೆಯು ಮತದಾರರ ಅಪಾರ ಗಾತ್ರದ ಕಾರಣದಿಂದ ನಿರ್ಣಾಯಕವಾಗಿದ್ದರೂ, ಅಸ್ಸಾಂ ಸಮೀಕ್ಷೆಯು ಅಷ್ಟೇ ಮಹತ್ವದ್ದಾಗಿದೆ ಏಕೆಂದರೆ, ಇದು ಈಶಾನ್ಯದ ಉಳಿದ ಭಾಗಗಳಲ್ಲಿನ ಭಾವನೆಯ ಪ್ರತಿಬಿಂಬವಾಗಿದೆ.
ಉತ್ತರ ಪ್ರದೇಶ: ಮೋದಿ, ಯೋಗಿ ಹವಾ
ಫೆಡರಲ್-ಪುತಿಯಾತಲೈಮುರೈ-ಆಪ್ಟ್ 2024ರ ಚುನಾವಣಾ ಪೂರ್ವ ಸಮೀಕ್ಷೆಯು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಮತಗಳನ್ನು 54.33 ಕ್ಕೆ ಹೆಚ್ಚಿಸುವುದರ ಜೊತೆಗೆ ಆಶ್ಚರ್ಯಕರವಾದ 78 ಸ್ಥಾನಗಳನ್ನು (80 ರಲ್ಲಿ) ಗಳಿಸುವ ಮೂಲಕ ಉತ್ತರ ಪ್ರದೇಶವನ್ನು ಮುನ್ನಡೆಸಲಿದೆ ಎಂದು ಸೂಚಿಸುತ್ತದೆ. 2019 ರಲ್ಲಿ ಬಿಜೆಪಿ ಶೇ.49.98 ಮತ ಹಂಚಿಕೆಯೊಂದಿಗೆ 62 ಸ್ಥಾನಗಳನ್ನು ಗೆದ್ದಿದೆ. ಕುತೂಹಲದ ಸಂಗತಿಯೆಂದರೆ 2014ರಲ್ಲಿ ನರೇಂದ್ರ ಮೋದಿ ಅಲೆ ಉತ್ತುಂಗದಲ್ಲಿದ್ದಾಗ 71 ಸ್ಥಾನಗಳನ್ನು ಗೆದ್ದಿತ್ತು. 2024 ರಲ್ಲಿ, ಮತ್ತೆ ಮೋದಿ ಅಲೆಯಿಂದಾಗಿ 78 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯನ್ನು ಸಮೀಕ್ಷೆ ಮನದಟ್ಟು ಮಾಡಿಕೊಟ್ಟಿದೆ.
ಇಂಡಿಯಾ (INDIA) ಮೈತ್ರಿಕೂಟ ಅಥವಾ ವಿಭಜಿತ ವಿರೋಧ ಪಕ್ಷ ಕೇವಲ ಎರಡು ಸ್ಥಾನಗಳೊಂದಿಗೆ ತೃಪ್ತಿಪಟ್ಟುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ ಸಮಾಜವಾದಿ ಪಕ್ಷ (SP) ಮತ್ತು ಕಾಂಗ್ರೆಸ್ಗೆ ತಲಾ ಒಂದು ಸ್ಥಾನ ಗಳಿಸಬಹುದೆಂದು ಸಮೀಕ್ಷೆ ಭವಿಷ್ಯ ನುಡಿದಿದೆ. 2019 ರಲ್ಲಿ, ಅಖಿಲೇಶ್ ಯಾದವ್ ನೇತೃತ್ವದ ಪಕ್ಷವು ಐದು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದುಕೊಂಡಿತ್ತು.
ಸಮೀಕ್ಷೆಯ ಕುತೂಹಲಕಾರಿ ಅಂಶವೆಂದರೆ, ಶೇಕಡಾ 20 ರಷ್ಟು ಮತದಾರರು ವಿರೋಧ ಪಕ್ಷದ ನಾಯಕರಲ್ಲಿ ಅಖಿಲೇಶ್ ಪ್ರಧಾನಿಯಾಗಲು ಸೂಕ್ತ ಎಂದು ಭಾವಿಸಿದ್ದಾರೆ.
ಫೆಡರಲ್ ಸಮೀಕ್ಷೆಯಿಂದ ಅರಿವಾಗುವ ಸಂಗತಿಯೆಂದರೆ, ಈ ಚುನಾವಣೆಯಲ್ಲಿ ಭಾರೀ ಮುಖಭಂಗ ಅನುಭವಿಸುವ ಪಕ್ಷವೆಂದರೆ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ). ಒಟ್ಟು 10 ಸ್ಥಾನಗಳ ಭಾರೀ ಕುಸಿತ ಮತ್ತು ಮತಗಳ ಹಂಚಿಕೆಯು ಶೇ.19.43 ರಿಂದ 4.30 ಕ್ಕೆ ಶೇಕಡಾ 15 ರಷ್ಟು ಕುಸಿತ ಕಾಣುವ ಸಾಧ್ಯತೆಯನ್ನು ಸಮೀಕ್ಷೆ ಸ್ಪಷ್ಟಪಡಿಸುತ್ತದೆ.
ಅಸ್ಸಾಂ: ಎನ್ ಡಿಎ ಯದ್ದು ಸ್ಥಿರ ಬೆಳವಣಿಗೆ
ಈಶಾನ್ಯದಲ್ಲಿ ಅಸ್ಸಾಂ ಬಿಜೆಪಿ ಭದ್ರ ಕೋಟೆಯೆಂಬುದು ಮತ್ತೊಮ್ಮೆ ಸಾಬೀತಾಗಿದೆ. 2021 ರಲ್ಲಿ ಪ್ರಬಲವಾದ ಮಿತ್ರಪಕ್ಷ ಅಸೋಮ್ ಗಣ ಪರಿಷತ್ (ಎಜಿಪಿ) ಜೊತೆಗೆ NDA ಅಧಿಕಾರಕ್ಕೆ ಮರಳಿತ್ತು. ಫೆಡರಲ್ ಸಮೀಕ್ಷೆಯು ಬಿಜೆಪಿಯು ಒಟ್ಟು 14 ಸ್ಥಾನಗಳಲ್ಲಿ 10ನ್ನು ತನ್ನದಾಗಿಸಿಕೊಳ್ಳಲಿದೆ ಎಂದು ಸಮೀಕ್ಷೆ ಹೇಳುತ್ತದೆ. ಕಾಂಗ್ರೆಸ್ ಕೇವಲ 4 ಸ್ಥಾನಗಳನ್ನು ಮಾತ್ರ ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. 2019 ರಲ್ಲಿ, ಬಿಜೆಪಿ ಒಂಬತ್ತು, ಮತ್ತು ಕಾಂಗ್ರೆಸ್ 3. (ಉಳಿದದ್ದನ್ನು ಎಐಯುಡಿಎಫ್ ಮತ್ತು ಸ್ವತಂತ್ರ ನಡುವೆ ಹಂಚಿಕೊಂಡಿತ್ತು).
ಫೆಡರಲ್ ಸಮೀಕ್ಷೆಯ ಪ್ರಕಾರ, ಬಿಜೆಪಿ ತನ್ನ ಮತಗಳನ್ನು ಶೇಕಡಾ 4 ರಷ್ಟು ಹೆಚ್ಚಿಸಿಕೊಳ್ಳಲಿದೆ. ಕಾಂಗ್ರೆಸ್‌ಗೆ ಶೇ. 4ರಷ್ಟು ಮತ ದೊರೆತರೆ, ಎಜಿಪಿಯ ಮತ ಹಂಚಿಕೆ ಪ್ರಮಾಣಕ್ಕೆ ಹೋಲಿಸಿದರೆ ವಿಪರೀತ ಕುಸಿತ ಕಂಡಂತೆ ತೋರುತ್ತದೆ.
2019ರಲ್ಲಿ ತಾನು ಗಳಿಸಿದ್ದ ಶೇ. 8.31 ಮತದಿಂದ ಶೇ. 1.52ಕ್ಕೆ ಕುಸಿಯುತ್ತದೆಂದು ಸಮೀಕ್ಷೆ ಹೇಳಿದೆ. ಅಸ್ಸಾಂ ರಾಜ್ಯದ ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ, 10 ಸ್ಥಾನಗಳನ್ನು ಗಳಿಸಿದರೆ, ಉಳಿದ ನಾಲ್ಕು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ.