ಫೆಡರಲ್ ಸಮೀಕ್ಷೆ | ಬಿಜೆಪಿಗೆ ಒಲಿದ ದೆಹಲಿ, ಹರಿಯಾಣದ ಮತದಾರ, ಪಂಜಾಬ್ ನಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ಮುನ್ನಡೆ
x

ಫೆಡರಲ್ ಸಮೀಕ್ಷೆ | ಬಿಜೆಪಿಗೆ ಒಲಿದ ದೆಹಲಿ, ಹರಿಯಾಣದ ಮತದಾರ, ಪಂಜಾಬ್ ನಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ಮುನ್ನಡೆ

ಫೆಡರಲ್-ಪುತಿಯಾತಲೈಮುರೈ-ಆಪ್ಟ್ 2024 ರ ಚುನಾವಣಾ ಪೂರ್ವ ಸಮೀಕ್ಷೆಯು ಉತ್ತರದ ಎಲ್ಲಾ 3 ರಾಜ್ಯಗಳಲ್ಲಿ ಕಾಂಗ್ರೆಸ್ ಗೆ ಹೇಳಿಕೊಳ್ಳುವಂಥ ಭವಿಷ್ಯವೇನಿಲ್ಲ ಎಂಬುದನ್ನು ಸೂಕ್ಷ್ಮವಾಗಿ ಸೂಚಿಸಿದೆ.


ದೆಹಲಿ ಮತ್ತು ಪಂಜಾಬ್‌ 2020 ಮತ್ತು 2022ರಲ್ಲಿ ವಿಧಾನ ಸಭೆಯನ್ನು ಎದುರಿಸಿತು. ಈ ಎರಡೂ ಚುನಾವಣೆಗಳಲ್ಲಿ ಗೆಲ್ಲಲು ಬಿಜೆಪಿಗೆ ತನ್ನ ಎಲ್ಲ ಪಟ್ಟುಗಳನ್ನು ಹಾಕಿದರೂ, ಅಂತಿಮವಾಗಿ ಸೋತು ಸುಣ್ಣವಾಯಿತು.

ಹರಿಯಾಣದಲ್ಲಿ ಆಡಳಿತರೂಢ ಪಕ್ಷವಾಗಿ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಎದುರಿಸಬೇಕಾಗಿ ಬಂದಂತೆ ತೋರುತ್ತದೆ. ಈ ರಾಜ್ಯ ಇತ್ತೀಚಿನ ದಿನಗಳಲ್ಲಿ ಎರಡು ಬೃಹತ್ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಮೊದಲನೇಯದು, ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆಗಾಗಿ ಒತ್ತಾಯಿಸಿ ರೈತರು ನಡೆಸಿದ ಐತಿಹಾಸಿಕ ಹೋರಾಟ. ಎರಡನೇಯದು, ಮಹಿಳಾ ಕುಸ್ತಿ ಪಟುಗಳು ಭಾರತ ಕುಸ್ತಿ ಫೆಡರೇಷನ್ ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಸಿಂಗ್‌ ನಡೆಸಿದ ಹೋರಾಟ. ಈ ಬ್ರಿಜ್ ಭೂಷಣ್‌ ಸಿಂಗ್‌ ವಿರುದ್ಧ ಲೈಂಗಿಕ ಹಿಂಸೆಯ ಕಾಟ ನೀಡಿದ ಆರೋಪವಿದ್ದರೂ, ಕೇಂದ್ರದ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಮತದಾರರನ್ನು ಬಾಧಿಸಿದಂತೆ ಕಾಣುತ್ತಿದೆ.

ಆದರೆ ಲೋಕಸಭಾ ಚುನಾವಣೆಯಲ್ಲಿ. ಈ ಮೂರೂ ರಾಜ್ಯಗಳಲ್ಲಿ ಈ ಎರಡೂ ಸಮಸ್ಯೆಗಳು ಪ್ರಾಮುಖ್ಯವಾಗಿದ್ದರೂ, ಮತದಾರರ ಒಲವಿನ ಮೇಲೆ ಪರಿಣಾಮ ಬೀರಿದಂತೆ ಕಾಣುವುದಿಲ್ಲ. ಹಾಗಾಗಿ ಪಂಜಾಬ್‌, ಹರಿಯಾಣ ದೆಹಲಿ ರಾಜ್ಯಗಳಲ್ಲಿ ಬಿಜೆಪಿಯ ಗೆಲುವಿನ ಹಾದಿ ಸುಗಮವಾಗಿರುವಂತೆ ತೋರುತ್ತಿದೆ ಎಂದು ಫೆಡರಲ್-ಪುತಿಯಾತಲೈಮುರೈ-ಆಪ್ಟ್ 2024 ರ ಚುನಾವಣಾ ಪೂರ್ವ ಸಮೀಕ್ಷೆಯು ಸೂಚಿಸುತ್ತಿದೆ.






ದೆಹಲಿ: ಬಿಜೆಪಿಗೆ ಹಾದಿ ಸುಗಮ

ದೆಹಲಿಯಲ್ಲಿ ಸುಮಾರು 67 ಪ್ರತಿಶತ ಮತದಾರರು ಬಿಜೆಪಿಗೆ ಮತ ಹಾಕಲು ಮನಸ್ಸು ಮಾಡಿದ್ದಾರೆ ಎಂದು ಎಂದು ಫೆಡರಲ್ ಸಮೀಕ್ಷೆ ಸೂಚಿಸುತ್ತದೆ. ಇದು ರಾಷ್ಟ್ರೀಯ ರಾಜಧಾನಿಯಲ್ಲಿ 2019 ರ ಪ್ರದರ್ಶನಕ್ಕಿಂತ ಸರಿಸುಮಾರು 10 ಶೇಕಡಾ 10 ರಷ್ಟು ಏರಿಕೆಯಾಗಿದೆ.


ಹರಿಯಾಣ: ಹತ್ತೂ ಸ್ಥಾನ ಬಿಜೆಪಿಗೆ

ಬಿಜೆಪಿಯ ಹರಿಯಾಣ ಮತ ಹಂಚಿಕೆಯ ಸಾಧನೆಯು 2019 ರಲ್ಲಿ ಶೇಕಡಾ 58 ರಿಂದ ಈ ವರ್ಷ ಶೇಕಡಾ 53 ಕ್ಕೆ ಇಳಿಯುವ ಸಾಧ್ಯತೆಯಿದೆ. ಫೆಡರಲ್ ಸಮೀಕ್ಷೆ ಹೇಳುತ್ತದೆ. ಆದಾಗ್ಯೂ, ಪ್ರತಿಸ್ಪರ್ಧಿ ಕಾಂಗ್ರೆಸ್ ಕೂಡ 2019 ರ ಮಟ್ಟದಿಂದ 28.5 ರಿಂದ 21 ಶೇಕಡಾಕ್ಕೆ ಕುಸಿತವನ್ನು ತೋರಿಸುತ್ತಿದೆ.

ತನ್ನ ಮತ-ಪಾಲು ಕುಸಿತವನ್ನು ಲೆಕ್ಕಿಸದೆಯೇ, ಹರಿಯಾಣದಲ್ಲಿ ಬಿಜೆಪಿ ಈ ಬಾರಿ ಎಲ್ಲಾ 10 ಲೋಕಸಭಾ ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗುವ ಸಾಧ್ಯತೆ ಇದೆ ಎಂದು ಫೆಡರಲ್ ಸಮೀಕ್ಷೆ ಭವಿಷ್ಯ ನುಡಿದಿದೆ.


ಪಂಜಾಬ್: ಎಎಪಿ ಮುನ್ನಡೆ

ಪಂಜಾಬ್ ವಿಂಧ್ಯದ ಉತ್ತರದ ಏಕೈಕ ರಾಜ್ಯವಾಗಿ ಬಿಜೆಪಿ ಪ್ರದರ್ಶನಕ್ಕೆ ಸ್ವಲ್ಪ ಪ್ರತಿರೋಧವನ್ನು ಒಡ್ಡುತ್ತಿದೆ. 26.9 ರಷ್ಟು ಪಂಜಾಬ್ ಮತದಾರರು ಎಎಪಿಗೆ ಮತ ಹಾಕಿದರೆ, ಶೇಕಡಾ 27.9 ರಷ್ಟು ಬಿಜೆಪಿಗೆ ಮತ ಹಾಕುತ್ತಾರೆ ಎಂದು ಫೆಡರಲ್ ಸಮೀಕ್ಷೆ ಸೂಚಿಸುತ್ತದೆ. 2019ರ ಫಲಿತಾಂಶಕ್ಕೆ ಹೋಲಿಸಿದರೆ, ಬಿಜೆಪಿ ಮತ್ತು ಎಎಪಿ ಹೆಚ್ಚಿನ ಲಾಭ ಗಳಿಸುವ ಸಾಧ್ಯತೆಗಳು ದಟ್ಟವಾಗಿದೆ. ಮತ್ತೊಂದೆಡೆ, ಕಾಂಗ್ರೆಸ್ ಮತದ ಪಾಲು ಶೇಕಡಾ 40.6 ರಿಂದ ಈ ಬಾರಿ ಶೇಕಡಾ 17.5ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ಹೇಳಿದೆ.

ಶಿರೋಮಣಿ ಅಕಾಲಿ ದಳವು ಬಿಜೆಪಿಯೊಂದಿಗೆ ಮತ್ತೊಮ್ಮೆ ಮೈತ್ರಿ ಮಾಡಿಕೊಂಡಿದೆ . ಆದರೆ, 2019ಕ್ಕೆ ಹೋಲಿಸಿದರೆ ಶೇ. 27.8 ರಿಂದ ಶೇ 4.53ಕ್ಕೆ ಕುಸಿಯುವ ಸಾಧ್ಯತೆ ಇದೆ. ಹಾಗಾಗಿ ಯಾವುದೇ ಸ್ಥಾನ ಗೆಲ್ಲುವ ಸಾಧ್ಯತೆಗಳು ಕಾಣುತ್ತಿಲ್ಲ. 2019 ರಲ್ಲಿ 27.8% ರಿಂದ ಈ ವರ್ಷ 4.5% ಕ್ಕೆ ತನ್ನ ಮತ-ಪಾಲನ್ನು ಕುಸಿಯುತ್ತದೆ ಎಂದು ಭವಿಷ್ಯ ನುಡಿದಿದೆ.




ಪಂಜಾಬ್ ನ 13 ಲೋಕಸಭಾ ಸ್ಥಾನಗಳಲ್ಲಿ ಏಳು ಬಿಜೆಪಿಗೆ, ಐದು ಎಎಪಿಗೆ ಮತ್ತು ಒಂದು ಕಾಂಗ್ರೆಸ್ ಗೆ ಸೇರಲಿದೆ ಎಂದು ಫೆಡರಲ್ ಸಮೀಕ್ಷೆ ಭವಿಷ್ಯ ನುಡಿದಿದೆ. ಕಳೆದ ಮೂರು ವರ್ಷಗಳಲ್ಲಿ ಎಎಪಿ ಪಂಜಾಬ್ ನಲ್ಲಿ ಗಣನೀಯವಾಗಿ ಬೆಳೆದು 2022 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅದರ ಪ್ರಭಾವಶಾಲಿ ಗೆಲುವಿಗೆ ಕಾರಣವಾಯಿತು.




ಪಂಜಾಬ್ ನ 13 ಲೋಕಸಭಾ ಸ್ಥಾನಗಳಲ್ಲಿ ಏಳು ಬಿಜೆಪಿಗೆ, ಐದು ಎಎಪಿಗೆ ಮತ್ತು ಒಂದು ಕಾಂಗ್ರೆಸ್ ಗೆ ಸೇರಲಿದೆ ಎಂದು ಫೆಡರಲ್ ಸಮೀಕ್ಷೆ ಭವಿಷ್ಯ ನುಡಿದಿದೆ. ಕಳೆದ ಮೂರು ವರ್ಷಗಳಲ್ಲಿ ಎಎಪಿ ಪಂಜಾಬ್ ನಲ್ಲಿ ಗಣನೀಯವಾಗಿ ಬೆಳೆದು 2022 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅದರ ಪ್ರಭಾವಶಾಲಿ ಗೆಲುವಿಗೆ ಕಾರಣವಾಯಿತು.

ಹಿಂದಿನ ಸಮೀಕ್ಷೆ-ಸಂಬಂಧಿತ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ.

Read More
Next Story