ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್; 25 ಲಕ್ಷ ರೂ ಬಹುಮಾನ ಘೋಷಿಸಿದ್ದ ನಕ್ಸಲ್ ಹತ್ಯೆ
ಬಾನು ತೆಲಂಗಾಣದ ವಾರಂಗಲ್ ಜಿಲ್ಲೆಯ ನಿವಾಸಿಯಾಗಿದ್ದು, ನಕ್ಸಲ್ ಮಾಧ್ಯಮ ತಂಡದ ಮುಖ್ಯಸ್ಥೆಯಾಗಿದ್ದರು. ಎನ್‌ಕೌಂಟರ್ ನಡೆದ ಸ್ಥಳದಿಂದ ಬಾನು ಶವ, ಇನ್ಸಾಸ್ ರೈಫಲ್, ಇತರ ಶಸ್ತ್ರಾಸ್ತ್ರಗಳು ಹಾಗೂ ದಿನಬಳಕೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.;
ಛತ್ತೀಸ್‌ಗಢದ ದಂತೇವಾಡದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ದಂಡಕಾರಣ್ಯ ವಿಶೇಷ ಪ್ರಾದೇಶಿಕ ಸಮಿತಿಯ (DKSZC) ಸದಸ್ಯೆಯಾದ ಮಹಿಳಾ ನಕ್ಸಲ್ ರೇಣುಕಾ ಅಲಿಯಾಸ್ ಬಾನು ಸೇರಿ ಹಲವಾರು ನಕ್ಸಲೈಟ್‌ಗಳು ಹತ್ಯೆಯಾಗಿದ್ದಾರೆ. ಬಾನು ಹೆಸರಿನ ಮಹಿಳೆಯ ತಲೆ ಮೇಲೆ 25 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಸೋಮವಾರ ಬೆಳಿಗ್ಗೆ 9 ಗಂಟೆಯಿಂದ ಆರಂಭವಾದ ಭಾರೀ ಗುಂಡಿನ ಚಕಮಕಿ ವೇಳೆ ನಕ್ಸಲ್ ಹತ್ಯೆಯಾಗಿದ್ದಾಳೆ.
ಈ ಕಾರ್ಯಾಚರಣೆ ದಂತೇವಾಡಾ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ನಡೆದಿದ್ದು,. DRG (ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್) ಪಡೆ ನೇತೃತ್ವದಲ್ಲಿ ನಕ್ಸಲರನ್ನು ಹತ್ಯೆ ಮಾಡಲಾಗಿದೆ. ದಂತೇವಾಡಾ ಜಿಲ್ಲೆಯ ಗೀಡಂ ಪೊಲೀಸ್ ಠಾಣೆ, ಬಿಜಾಪುರ ಜಿಲ್ಲೆಯ ಭೈರಂಘಡ್ ಪೊಲೀಸ್ ಠಾಣೆ ಹಾಗೂ ತೆಲಂಗಾಣದ ನೆಲ್ಗೋಡಾ, ಅಕೆಲಿ ಮತ್ತು ಬೆಲ್ನಾರ್ ಗಡಿಪ್ರದೇಶದ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು.
ಮೂಲಗಳ ಪ್ರಕಾರ, ಬಾನು ತೆಲಂಗಾಣದ ವಾರಂಗಲ್ ಜಿಲ್ಲೆಯ ನಿವಾಸಿಯಾಗಿದ್ದು, ನಕ್ಸಲ್ ಮಾಧ್ಯಮ ತಂಡದ ಮುಖ್ಯಸ್ಥೆಯಾಗಿದ್ದರು. ಎನ್‌ಕೌಂಟರ್ ನಡೆದ ಸ್ಥಳದಿಂದ ಬಾನು ಶವ, ಇನ್ಸಾಸ್ ರೈಫಲ್, ಇತರ ಶಸ್ತ್ರಾಸ್ತ್ರಗಳು ಹಾಗೂ ದಿನಬಳಕೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
2025ರಲ್ಲಿ ಇತ್ತಿವರೆಗೆ ಬಸ್ತರ್ ವಲಯದ ವಿವಿಧ ಎನ್‌ಕೌಂಟರ್‌ಗಳಲ್ಲಿ ಒಟ್ಟು 119 ನಕ್ಸಲ್‌ಗಳನ್ನು ಹತ್ಯೆ ಮಾಡಲಾಗಿದೆ.