ವಯನಾಡು: ಆನೆ ದಾಳಿಗೆ ಮತ್ತೊಬ್ಬ ವ್ಯಕ್ತಿ ಸಾವು

Update: 2024-02-16 13:29 GMT
ಪ್ರಾತಿನಿಧಿಕ ಚಿತ್ರ

ವಯನಾಡ್ (ಕೇರಳ), ಫೆ.16: ಕಾಡಾನೆ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಮೃತಪಟ್ಟಿದ್ದಾರೆ. 

ಶುಕ್ರವಾರ ಬೆಳಗ್ಗೆ ಆನೆ ದಾಳಿ ನಡೆಸಿದ್ದು, ಗಾಯಗೊಂಡಿದ್ದ ಅರಣ್ಯ ಇಲಾಖೆಯ ಪರಿಸರ ಪ್ರವಾಸೋದ್ಯಮ ಮಾರ್ಗದರ್ಶಿ ಮೃತಪಟ್ಟರು. ಪ್ರಸಿದ್ಧ ಪ್ರವಾಸಿ ತಾಣವಾದ ಕುರುವ ದ್ವೀಪದಲ್ಲಿ ನೆಲೆಸಿದ್ದರು. ಕಳೆದ ಶನಿವಾರ ವ್ಯಕ್ತಿಯೊಬ್ಬರನ್ನು ಕೊಂದಿದ್ದ ಆನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿತ್ತು. ಆ ಪ್ರದೇಶದಿಂದ ಜನರನ್ನು ತಿರುಗಿಸುತ್ತಿದ್ದ ಅವರಿಗೆ ಆನೆ ಎದುರಾಯಿತು. ಅವರನ್ನು ತುಳಿದು, ಗಂಭೀರ ಗಾಯಗಳನ್ನು ಉಂಟುಮಾಡಿತು. ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು ನಿಧನರಾದರು. 

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುಡ್ಡಗಾಡು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಮಾನವ-ವನ್ಯಪ್ರಾಣಿಗಳ ಸಂಘರ್ಷ ತಡೆಯಲು ನಿರ್ದೇಶನ ನೀಡಿದ ಒಂದು ದಿನದ ನಂತರ ಈ ದಾಳಿ ನಡೆದಿದೆ. ಕಳೆದ ವಾರ ಮಾನಂತವಾಡಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬರನ್ನು ರೇಡಿಯೋ ಕಾಲರ್ ಅಳವಡಿಸಿದ್ದ ಆನೆ ತುಳಿದು ಕೊಂದುಹಾಕಿತ್ತು. ಈ ಆನೆ ಕರ್ನಾಟಕಕ್ಕೆ ಸಾಗಿಸುವಾಗ ಮೃತಪಟ್ಟಿತು.

ಅರಣ್ಯ ಇಲಾಖೆಯ ಕ್ಷಿಪ್ರ ಪ್ರತಿಕ್ರಿಯೆ ತಂಡಗಳು (ಆರ್‌ಆರ್‌ಟಿ), ಕುಮ್ಕಿ ಆನೆಗಳಲ್ಲದೆ, ಥರ್ಮಲ್ ಕ್ಯಾಮೆರಾವನ್ನು ಬಳಸುತ್ತಿದ್ದರೂ, ಆನೆ ಇನ್ನೂ ಸಿಕ್ಕಿಲ್ಲ.

Tags:    

Similar News